ಪಾಕ್‌ ಪರಾಭವ; ಆಫ್ರಿಕಾಕ್ಕೆ ಟಿ20 ಸರಣಿ


Team Udayavani, Feb 5, 2019, 12:30 AM IST

ap242019000004b.jpg

ಜೊಹಾನ್ಸ್‌ಬರ್ಗ್‌: ಮುನ್ನುಗ್ಗಿ ಬಂದ ಪಾಕಿಸ್ಥಾನವನ್ನು ಕೊನೆಯ ಹಂತದಲ್ಲಿ ಹಿಡಿದು ನಿಲ್ಲಿಸಿದ ದಕ್ಷಿಣ ಆಫ್ರಿಕಾ 2ನೇ ಟಿ20 ಪಂದ್ಯವನ್ನು 7 ರನ್ನುಗಳಿಂದ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿದೆ.

ರವಿವಾರ ರಾತ್ರಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಬೃಹತ್‌ ಮೊತ್ತದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 3 ವಿಕೆಟಿಗೆ 188 ರನ್‌ ಸೂರೆಗೈದಿತು. ಜವಾಬಿತ್ತ ಪಾಕಿಸ್ಥಾನ 7 ವಿಕೆಟಿಗೆ 181 ರನ್‌ ಗಳಿಸಿ ಶರಣಾಯಿತು. ಮೊದಲ ಪಂದ್ಯವನ್ನು ಆಫ್ರಿಕಾ 6 ರನ್‌ ಅಂತರದಿಂದ ಜಯಿಸಿತ್ತು. 3ನೇ ಹಾಗೂ ಅಂತಿಮ ಮುಖಾಮುಖೀ ಫೆ. 6ರಂದು ಸೆಂಚುರಿಯನ್‌ನಲ್ಲಿ ನಡೆಯಲಿದೆ.

ಬಾಬರ್‌-ತಲತ್‌ ಸವಾರಿ
ಒಂದು ಹಂತದಲ್ಲಿ ಪಾಕಿಸ್ಥಾನ ಬಾಬರ್‌ ಆಜಂ-ಹುಸೇನ್‌ ತಲತ್‌ ಅವರ ಆಕ್ರಮಣಕಾರಿ ಆಟದಿಂದ ಹರಿಣಗಳ ಮೇಲೆ ಸವಾರಿ ಮಾಡುತ್ತ ಬಂದಿತ್ತು. 16 ಓವರ್‌ ಅಂತ್ಯಕ್ಕೆ ಒಂದೇ ವಿಕೆಟಿಗೆ 147 ರನ್‌ ಬಾರಿಸಿದ್ದನ್ನು ಕಂಡಾಗ ಪಾಕ್‌ ಗೆಲ್ಲುತ್ತದೆಂದೇ ಭಾವಿಸಲಾಗಿತ್ತು. ಅನಂತರ ತೀವ್ರ ಕುಸಿತವೊಂದನ್ನು ಕಂಡ ಪಾಕ್‌ ತೀವ್ರ ಒತ್ತಡಕ್ಕೆ ಸಿಲುಕಿತು; ಗೆಲುವನ್ನು ಸ್ವಲ್ಪವೇ ಅಂತರದಿಂದ ಕಳೆದುಕೊಂಡಿತು.ಬಾಬರ್‌ ಆಜಂ 58 ಎಸೆತಗಳಿಂದ 90 ರನ್‌ ಬಾರಿಸಿದರೆ (13 ಬೌಂಡರಿ, 1 ಸಿಕ್ಸರ್‌), ತಲತ್‌ 41 ಎಸೆತ ನಿಭಾಯಿಸಿ 55 ರನ್‌ ಹೊಡೆದರು (7 ಬೌಂಡರಿ, 1 ಸಿಕ್ಸರ್‌). ಈ ಜೋಡಿಯಿಂದ 2ನೇ ವಿಕೆಟಿಗೆ 12.1 ಓವರ್‌ಗಳಲ್ಲಿ 102 ರನ್‌ ಹರಿದು ಬಂತು.

ಆಫ್ರಿಕಾದ ದೊಡ್ಡ ಮೊತ್ತಕ್ಕೆ ಕಾರಣರಾದವರು ಬಿಗ್‌ ಹಿಟ್ಟರ್‌ ಡೇವಿಡ್‌ ಮಿಲ್ಲರ್‌. ಕೇವಲ 29 ಎಸೆತ ಎದುರಿಸಿದ ಮಿಲ್ಲರ್‌ 5 ಸಿಕ್ಸರ್‌, 4 ಬೌಂಡರಿ ಒಳಗೊಂಡ ಅಜೇಯ 65 ರನ್‌ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-20 ಓವರ್‌ಗಳಲ್ಲಿ 3 ವಿಕೆಟಿಗೆ 188 (ಮಿಲ್ಲರ್‌ ಔಟಾಗದೆ 65, ಡ್ಯುಸೆನ್‌ 45, ಮಾಲನ್‌ 33, ಹೆಂಡ್ರಿಕ್ಸ್‌ 28, ಇಮಾದ್‌ 9ಕ್ಕೆ 1). ಪಾಕಿಸ್ಥಾನ-20 ಓವರ್‌ಗಳಲ್ಲಿ 7 ವಿಕೆಟಿಗೆ 181 (ಬಾಬರ್‌ 90, ತಲತ್‌ 55, ಫೆಲುಕ್ವಾಯೊ 36ಕ್ಕೆ 3, ಹೆಂಡ್ರಿಕ್ಸ್‌ 30ಕ್ಕೆ 2, ಮಾರಿಸ್‌ 36ಕ್ಕೆ 2). ಪಂದ್ಯಶ್ರೇಷ್ಠ: ಡೇವಿಡ್‌ ಮಿಲ್ಲರ್‌.

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.