2ನೇ ಟೆಸ್ಟ್: 4ನೇ ದಿನದಾಟದ ಅಂತ್ಯ: ಗೆಲುವಿನತ್ತ ದಕ್ಷಿಣ ಆಫ್ರಿಕಾ
Team Udayavani, Feb 28, 2022, 11:09 PM IST
ಕ್ರೈಸ್ಟ್‌ಚರ್ಚ್: ವಿಕೆಟ್ ಕೀಪರ್ ಕೈಲ್ ವೆರ್ರೆನ್ನೆ ಅವರ ಚೊಚ್ಚಲ ಶತಕದ ನೆರವಿನಿಂದ ಆತಿಥೇಯ ನ್ಯೂಜಿಲ್ಯಾಂಡಿಗೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯನ್ನು ಸಮಬಲಗೊಳಿಸುವತ್ತ ಮುನ್ನಡೆದಿದೆ.
ಗೆಲುವಿಗೆ 426 ರನ್ ಗುರಿ ಪಡೆದಿರುವ ನ್ಯೂಜಿಲ್ಯಾಂಡ್ 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 94 ರನ್ ಮಾಡಿದೆ. ರಬಾಡ ಮತ್ತು ಮಹಾರಜ್ ತಲಾ 2 ವಿಕೆಟ್ ಕಿತ್ತು ಕಿವೀಸ್ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದ್ದಾರೆ. ಟಾಮ್ ಲ್ಯಾಥಂ (1), ವಿಲ್ ಯಂಗ್ (0), ಹೆನ್ರಿ ನಿಕೋಲ್ಸ್ (7) ಮತ್ತು ಡ್ಯಾರಿಲ್ ಮಿಚೆಲ್ (24) ಈಗಾಗಲೇ ಪೆವಿಲಿಯನ್ ಸೇರಿದ್ದಾರೆ. ಡೇವನ್ ಕಾನ್ವೆ 60 ರನ್ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದ್ದಾರೆ.
ಇದನ್ನೂ ಓದಿ:ವಿಂಡೀಸ್‌ನ ಲೆಜೆಂಡ್ರಿ ಸ್ಪಿನ್ನರ್ ಸೋನಿ ರಾಮಧಿನ್ ನಿಧನ
71 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ, 9 ವಿಕೆಟಿಗೆ 354 ರನ್ ಬಾರಿಸಿ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿತು. ಕೈಲ್ ವೆರ್ರೆನ್ನೆ ಅಮೋಘ ಬ್ಯಾಟಿಂಗ್ ನಡೆಸಿ ಅಜೇಯ 136 ರನ್ ಬಾರಿಸಿದರು. ಇದು ಅವರ ಮೊದಲ ಟೆಸ್ಟ್ ಶತಕ. 187 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 16 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಬ್ಯಾಟಿಂ ಗ್‌ನಲ್ಲೂ ಮಿಂಚಿದ ರಬಾಡ 47 ರನ್ ಹೊಡೆದರು (34 ಎಸೆತ, 4 ಬೌಂಡರಿ, 4 ಸಿಕ್ಸರ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.