ಸರಣಿ ಸಮಬಲಕ್ಕೆ ಭಾರತ ಹರಸಾಹಸ
ಬ್ಯಾಟಿಂಗ್ ಬರ ಎದುರಿಸುತ್ತಿರುವ ಕೊಹ್ಲಿ ; ಇಶಾಂತ್‌ಗೆ ಗಾಯ; ಉಮೇಶ್ ಆಡುವ ಸಾಧ್ಯತೆ
Team Udayavani, Feb 29, 2020, 5:11 AM IST
ಕ್ರೈಸ್ಟ್‌ಚರ್ಚ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯ ಶನಿವಾರದಿಂದ ಕ್ರೈಸ್ಟ್‌ಚರ್ಚ್‌ನ “ಹ್ಯಾಗ್ಲಿ ಓವಲ್’ ಮೈದಾನದಲ್ಲಿ ನಡೆಯಲಿದೆ. ಇತ್ತಂಡಗಳೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಣಕ್ಕೆ ಇಳಿಯಲಿವೆ. ಆತಿಥೇಯ ತಂಡಕ್ಕೆ ಸರಣಿ ವಶಪಡಿಸುವ ಕಾತುರವಾದರೆ ಕೊಹ್ಲಿ ಪಡೆ ಸರಣಿ ಸಮಬಲಗೊಳಿಸುವ ಒತ್ತಡದೊಂದಿಗೆ ಆಡಲಿದೆ.
ಭಾರತಕ್ಕೆ ಗಾಯದ ಮೇಲೆ ಬರೆ
ಈಗಾಗಲೇ ಮೊದಲ ಪಂದ್ಯವನ್ನು ಸೋತು ಸಂಕಷ್ಟದಲ್ಲಿರುವ ಟೀಮ್ ಇಂಡಿಯಾಕ್ಕೆ ಉತ್ತಮ ಫಾರ್ಮ್ನಲ್ಲಿದ್ದ ಇಶಾಂತ್ ಶರ್ಮ ಗಾಯದ ಸಮಸ್ಯೆಗೆ ಒಳಗಾಗಿರುವುದು ದೊಡ್ಡ ಹೊಡೆತವಾಗಿದೆ. ಅವರು ದ್ವಿತೀಯ ಟೆಸ್ಟ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಶಾಂತ್ ಶುಕ್ರವಾರ ನೆಟ್ ಅಭ್ಯಾಸದಲ್ಲಿ ಬೌಲಿಂಗ್ ನಡೆಸಲಿಲ್ಲ. ಕಳೆದ ತಿಂಗಳು ರಣಜಿ ಟ್ರೋಫಿ ಪಂದ್ಯದ ವೇಳೆ ಇಶಾಂತ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈಗ ಮತ್ತದೇ ಸಮಸ್ಯೆ ಅವರನ್ನು ಕಾಡಿದೆ.
ಒಂದು ವೇಳೆ ಇಶಾಂತ್ ಹೊರಬಿದ್ದರೆ ಅವರ ಬದಲಿಗೆ ಯುವ ವೇಗಿ ನವದೀಪ್ ಸೈನಿ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಉಮೇಶ್ ಯಾದವ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ ಪೃಥ್ವಿ ಶಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೋಚ್ ರವಿಶಾಸಿŒ ಮತ್ತು ಕೊಹ್ಲಿ ಹೇಳಿದ್ದಾರೆ.
ಬ್ಯಾಟಿಂಗ್ ಮರೆತ ಕೊಹ್ಲಿ
ಕಿವೀಸ್ ಪ್ರವಾಸದಲ್ಲಿ ನಾಯಕ ವಿರಾಟ್ ಕೊಹ್ಲಿ ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಟಿ20, ಏಕದಿನದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಕೊಹ್ಲಿ ಎಡವಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಅವರು ಗಳಿಸಿದ್ದು 21 ರನ್ ಮಾತ್ರ. ಕೊಹ್ಲಿ ಮಾತ್ರವಲ್ಲದೆ ಅನುಭವಿಗಳಾದ ಚೇತೇಶ್ವರ್ ಪೂಜಾರ, ವಿಹಾರಿ ಕೂಡ ಬ್ಯಾಟಿಂಗ್ ಬರ ಎದುರಿಸುತ್ತಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಕೊಂಚ ಮಟ್ಟಿಗೆ ಅಡ್ಡಿಯಿಲ್ಲ ಒಂದು ಅರ್ಧಶತಕ ಸಿಡಿಸಿ ತಂಡದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇವರನ್ನು ಹೊರತು ಪಡಿಸಿದರೆ ಉಪನಾಯಕ ಅಜಿಂಕ್ಯ ರಹಾನೆ ಭರವಸೆಯ ಆಟಗಾರರಾಗಿದ್ದಾರೆ.
ಬೌಲಿಂಗ್‌ನಲ್ಲಿ ಯಾರ್ಕರ್ ಸ್ಪೆಶಲಿಸ್ಟ್ ಬುಮ್ರಾ ಕೂಡ ಉತ್ತಮ ಲಯ ಕಂಡುಕೊಳ್ಳಲಿಲ್ಲ. ಏಕದಿನ ಸರಣಿಯಲ್ಲಿ ವಿಕೆಟ್‌ಲೆಸ್ ಎನಿಸಿಕೊಂಡ ಬುಮ್ರಾ ಟೆಸ್ಟ್‌ನಲ್ಲಿ ಒಂದು ವಿಕೆಟ್ ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿತೀಯ ಟೆಸ್ಟ್‌ನಲ್ಲಿ ಇವರ ಬೌಲಿಂಗ್ ಮೇಲೆ ಟೀಮ್ ಇಂಡಿಯಾ ಭಾರೀ ನಿರೀಕ್ಷೆ ಇರಿಸಿದೆ.
ಕಿವೀಸ್ ಸಮರ್ಥ ತಂಡ
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವಿಲಿಯಮ್ಸನ್ ಪಡೆ ಬಲಿಷ್ಠವಾಗಿದೆ. ನಾಯಕ ವಿಲಿಯಮ್ಸನ್, ಅನುಭವಿ ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಬೌಲರ್‌ಗಳಾದ ಟ್ರೆಂಟ್ ಬೌಲ್ಟ್, ಕೈಲ್ ಜಾಮೀಸನ್ ಕೂಡ ಅಪಾಯಕಾರಿಯಾಗಿ ಗೋಚರಿಸಬಲ್ಲರು. ಇದಕ್ಕೆ ಕಳೆದ ಪಂದ್ಯದ ಬ್ಯಾಟಿಂಗ್‌ಗೇ ಸಾಕ್ಷಿ.
ಬೌಲಿಂಗ್ ಕೂಡ ಘಾತಕವಾಗಿದೆ. ವೇಗಿಗಳಾದ ಟ್ರೆಂಟ್ ಬೌಲ್ಟ್, ಕೈಲ್ ಜಾಮೀಸನ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಟಿಮ್ ಸೌಥಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ನೀಲ್ ವ್ಯಾಗ್ನರ್ ತಂಡಕ್ಕೆ ಮರಳಿದ್ದು ತಂಡಕ್ಕೆ ಆನೆಬಲ ಬಂದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.