ಕಾಡಿದ ಎನ್‌ಗಿಡಿ; ಭಾರತಕ್ಕೆ ಸೋಲಿನ ಛಡಿ
Team Udayavani, Jan 18, 2018, 11:43 AM IST
ಸೆಂಚುರಿಯನ್: ನಂಬರ್ ವನ್ ಟೆಸ್ಟ್ ತಂಡವೆಂಬ ಖ್ಯಾತಿಯ ಟೀಮ್ ಇಂಡಿಯಾ ಹರಿಣಗಳ ನಾಡಿನಲ್ಲಿ ದಿಕ್ಕಾಪಾಲಾಗಿದೆ. ನಿರಂತರ ಬ್ಯಾಟಿಂಗ್ ವೈಫಲ್ಯದಿಂದ ತತ್ತರಿಸಿ ಸೆಂಚುರಿಯನ್ ಟೆಸ್ಟ್ ಪಂದ್ಯದೊಂದಿಗೆ ಸರಣಿಯನ್ನೂ ಕಳೆದುಕೊಂಡ ಅವಮಾನಕ್ಕೆ ಸಿಲುಕಿದೆ. ಸೋಲಿನ ಅಂತರ 135 ರನ್. ಫಾಸ್ಟ್ ಟ್ರ್ಯಾಕ್ ಮೇಲೆ 287 ರನ್ನುಗಳ ಸವಾಲು ಪಡೆ ದಿದ್ದ ಪ್ರವಾಸಿ ಭಾರತ, 4ನೇ ದಿನದ ಅಂತ್ಯಕ್ಕೆ 3 ವಿಕೆಟಿಗೆ 35 ರನ್ ಮಾಡಿದಾಗಲೇ ಸೋಲನ್ನು ಖಚಿತ ಪಡಿಸಿತ್ತು. ಅಂತಿಮ ದಿನವಾದ ಬುಧವಾರ ಲಂಚ್ ಒಳಗಾಗಿ 50.2 ಓವರ್‌ಗಳಲ್ಲಿ 151 ರನ್ನಿಗೆ ಆಲೌಟ್ ಆಯಿತು. ಸೆಂಚುರಿಯನ್‌ನಲ್ಲಿ ಈವರೆಗಿನ ಸರ್ವಾಧಿಕ ರನ್ ಚೇಸ್ ದಾಖಲೆ ಇಂಗ್ಲೆಂಡಿನ ಹೆಸರಲ್ಲಿದೆ. 2000ದ ಟೆಸ್ಟ್‌ನಲ್ಲಿ ಅದು 249 ರನ್ ಬಾರಿಸಿ ಗೆದ್ದಿತ್ತು. ಹೀಗಾಗಿ ಭಾರತವಿಲ್ಲಿ ಗೆದ್ದಿದ್ದರೆ ಹೊಸ ದಾಖಲೆ ನಿರ್ಮಾಣವಾಗುತ್ತಿತ್ತು.
ಎನ್‌ಗಿಡಿ ಘಾತಕ ದಾಳಿ
ಮೊದಲ ಟೆಸ್ಟ್ ಆಡುತ್ತಿದ್ದ ವೇಗಿ ಲುಂಗಿ ಎನ್‌ಗಿಡಿ ಕೇವಲ 12.2 ಓವರ್‌ಗಳಲ್ಲಿ 39 ರನ್ನಿಗೆ 6 ವಿಕೆಟ್ ಕಿತ್ತು ಪ್ರವಾಸಿಗರ ಕತೆ ಮುಗಿಸಿದರು. ಈ ಸಾಹಸಕ್ಕಾಗಿ ಪಂದ್ಯಶ್ರೇಷ್ಠ ಗೌರವವೂ ಒಲಿದು ಬಂತು. ಅವರು ಚೊಚ್ಚಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತ ದಕ್ಷಿಣ ಆಫ್ರಿಕಾದ ಕೇವಲ 6ನೇ ಬೌಲರ್ ಎನಿಸಿದರು. ಉಳಿದವರೆಂದರೆ ಲ್ಯಾನ್ಸ್ ಕ್ಲೂಸ್ನರ್, ಚಾರ್ಲ್ಸ್ ಲಾಂಗ್‌ವೆಲ್ಟ್, ವೆರ್ನನ್ ಫಿಲಾಂಡರ್, ಮರ್ಚಂಟ್ ಡಿ ಲಾಂಜ್ ಮತ್ತು ಕೈಲ್ ಅಬೋಟ್. ಇವರಲ್ಲಿ ಕ್ಲೂಸ್ನರ್ ಭಾರತದ ವಿರುದ್ಧ ಈ ಸಾಧನೆ ಮಾಡಿದ್ದರು. ಕೇಪ್‌ಟೌನ್ ಟೆಸ್ಟ್ ಪಂದ್ಯವನ್ನು ಭಾರತ 72 ರನ್ನುಗಳಿಂದ ಕಳೆದು ಕೊಂಡಿತ್ತು. 3ನೇ ಹಾಗೂ ಅಂತಿಮ ಟೆಸ್ಟ್ ಜ. 24ರಿಂದ ಜೊಹಾನ್ಸ್ ಬರ್ಗ್ ನಲ್ಲಿ ಆರಂಭವಾಗಲಿದೆ. “ಫ್ರೀಡಂ ಟ್ರೋಫಿ’ಯನ್ನು ಮರಳಿ ವಶಪಡಿಸಿಕೊಂಡ ಆಫ್ರಿಕಾದ ಮುಂದೆ ಸರಣಿಯನ್ನು ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಳ್ಳುವ ಅವಕಾಶವೊಂದಿದೆ. 2015ರ ಭಾರತ ಪ್ರವಾಸದ ವೇಳೆ ದಕ್ಷಿಣ ಆಫ್ರಿಕಾ 3-0 ಅಂತರದಿಂದ ಸರಣಿ ಸೋತಿತ್ತು.
ಪೂಜಾರ ರನೌಟ್ ಸ್ಪೆಷಲಿಸ್ಟ್ !
ಸ್ಕೋರ್ 49ಕ್ಕೆ ಏರಿದಾಗ ಭಾರತಕ್ಕೆ ಮೊದಲ ಆಘಾತ ಎದುರಾಯಿತು. ಚೇತೇಶ್ವರ್ ಪೂಜಾರ ಮತ್ತೆ ರನೌಟಾಗಿ ಪೆವಿಲಿಯನ್ ಸೇರಿಕೊಂಡರು. ಇಲ್ಲದ 3ನೇ ರನ್ನಿಗಾಗಿ ಓಡಿದಾಗ “ಡೀಪ್’ನಲ್ಲಿದ್ದ ಎಬಿಡಿ ತ್ರೋ ನೇರವಾಗಿ ಕೀಪರ್ ಡಿ ಕಾಕ್ ಕೈಸೇರಿತು. ಅವರು ಸ್ಟಂಪ್ ಎಗರಿಸಿಯೇ ಬಿಟ್ಟರು. ಹೀಗೆ “ಟೆಸ್ಟ್ ಸ್ಪೆಷಲಿಸ್ಟ್’ ಖ್ಯಾತಿಯ ಪೂಜಾರ “ರನೌಟ್ ಸ್ಪೆಷಲಿಸ್ಟ್’ ಆಗಿ ಮಾರ್ಪಟ್ಟಿದ್ದರು. ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ರನೌಟಾದ ಭಾರತದ ಮೊದಲ ಹಾಗೂ ವಿಶ್ವದ 23ನೇ ಆಟಗಾರ ಎಂಬ ಅವಮಾನಕ್ಕೂ ಅವರು ಸಿಲುಕಿದರು. 47 ಎಸೆತಗ ಎದುರಿಸಿದ ಪೂಜಾರ ಗಳಿಕೆ 19 ರನ್.
3 ಓವರ್‌ಗಳ ಬಳಿಕ ರಬಾಡ ಎಸೆತವನ್ನು ಪುಲ್ ಮಾಡಿದ ಪಾರ್ಥಿವ್ ಪಟೇಲ್ (19) ಡೀಪ್ ಸ್ಕ್ವೇರ್‌ಲೆಗ್ ಬೌಂಡರಿ ವಿಭಾಗದಲ್ಲಿ ಕಾಯುತ್ತಿದ್ದ ಮಾರ್ಕೆಲ್ ಕ್ಯಾಚಿಗೆ ಸಿಲುಕಿದರು. ಮುಂದಿನದು ಎನ್‌ಗಿಡಿ ಬೇಟೆ ಸರದಿ. ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ (8) ಲಿಫ್ಟ್ ಮಾಡಲು ಹೋಗಿ ಡಿಕಾಕ್‌ಗೆ ಕ್ಯಾಚಿತ್ತರು. ಭಾರತದ ಸ್ಕೋರ್ 6ಕ್ಕೆ 83 ರನ್. ನಾಲ್ಕೇ ರನ್ ಅಂತರದಲ್ಲಿ ಅಶ್ವಿನ್ (3) ಅವರಿಗೂ ಎನ್‌ಗಿಡಿ ಪೆವಿಲಿಯನ್ ಹಾದಿ ತೋರಿಸಿದರು. ಕೊಹ್ಲಿ ಪಡೆ ಸೋಲನ್ನು ಸಮೀಪಿಸಿತ್ತು.
ರೋಹಿತ್-ಶಮಿ ಸಣ್ಣ ಹೋರಾಟ
8ನೇ ವಿಕೆಟಿಗೆ ರೋಹಿತ್ ಶರ್ಮ-ಮೊಹಮ್ಮದ್ ಶಮಿ ಸೇರಿಕೊಂಡು ಸಣ್ಣದೊಂದು ಹೋರಾಟ ನಡೆಸಿದರು. ಇದರಿಂದ ಮೊತ್ತ ನೂರೈವತ್ತರ ಗಡಿ ದಾಟಿತೇ ಹೊರತು ಬೇರೆ ಯಾವುದೇ ಪ್ರಯೋಜನವಾಗಲಿಲ್ಲ. ಇವರಿಬ್ಬರ 54 ರನ್ನುಗಳೇ ಭಾರತದ ಸರದಿಯ ದೊಡ್ಡ ಜತೆಯಾಟವೆನಿಸಿತು. ಕೊನೆಗೆ ಇಬ್ಬರೂ 4 ರನ್ ಅಂತರದಲ್ಲಿ ಔಟಾಗಿ ತೆರಳಿದರು. ರೋಹಿತ್ 6 ಬೌಂಡರಿ, ಒಂದು ಸಿಕ್ಸರ್ ಸಿಡಿಸಿ 74 ಎಸೆತಗಳಿಂದ ಸರ್ವಾಧಿಕ 47 ರನ್ ಹೊಡೆದರೆ, ಶಮಿ 24 ಎಸೆತಗಳಿಂದ 28 ರನ್ ಬಾರಿಸಿದರು (5 ಬೌಂಡರಿ). ಇವರಲ್ಲಿ ರೋಹಿತ್ ವಿಕೆಟ್ ರಬಾಡ ಪಾಲಾಯಿತು. ಶಮಿ ಮತ್ತು ಬುಮ್ರಾ ಅವರನ್ನು 6 ರನ್ ಅಂತರದಲ್ಲಿ ಉರುಳಿಸಿದ ಎನ್‌ಗಿಡಿ ಭಾರತದ ಮೇಲೆ ಸೋಲಿನ ಮುದ್ರೆ ಒತ್ತಿದರು.
ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 335
ಭಾರತ ಪ್ರಥಮ ಇನ್ನಿಂಗ್ಸ್ 307
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ 258
ಭಾರತ ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ 287 ರನ್)
ಮುರಳಿ ವಿಜಯ್ ಬಿ ರಬಾಡ 9
ಕೆ.ಎಲ್. ರಾಹುಲ್ ಸಿ ಮಹಾರಾಜ್ ಬಿ ಎನ್‌ಗಿಡಿ 4
ಚೇತೇಶ್ವರ್ ಪೂಜಾರ ರನೌಟ್ 19
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಎನ್‌ಗಿಡಿ 5
ಪಾರ್ಥಿವ್ ಪಟೇಲ್ ಸಿ ಮಾರ್ಕೆಲ್ ಬಿ ರಬಾಡ 19
ರೋಹಿತ್ ಶರ್ಮ ಸಿ ಡಿ ವಿಲಿಯರ್ ಬಿ ರಬಾಡ 47
ಹಾರ್ದಿಕ್ ಪಾಂಡ್ಯ ಸಿ ಡಿ ಕಾಕ್ ಬಿ ಎನ್‌ಗಿಡಿ 6
ಆರ್. ಅಶ್ವಿನ್ ಸಿ ಡಿ ಕಾಕ್ ಬಿ ಎನ್‌ಗಿಡಿ 3
ಮೊಹಮ್ಮದ್ ಶಮಿ ಸಿ ಮಾರ್ಕೆಲ್ ಬಿ ಎನ್‌ಗಿಡಿ 28
ಇಶಾಂತ್ ಶರ್ಮ ಔಟಾಗದೆ 4
ಜಸ್‌ಪ್ರೀತ್ ಬುಮ್ರಾ ಸಿ ಫಿಲಾಂಡರ್ ಬಿ ಎನ್‌ಗಿಡಿ 2
ಇತರ 5
ಒಟ್ಟು (ಆಲೌಟ್) 151
ವಿಕೆಟ್ ಪತನ: 1-11, 2-16, 3-26, 4-49, 5-65, 6-83, 7-87, 8-141, 9-145.
ಬೌಲಿಂಗ್:
ವೆರ್ನನ್ ಫಿಲಾಂಡರ್ 10-3-25-0
ಕಾಗಿಸೊ ರಬಾಡ 14-3-47-3
ಲುಂಗಿಸಾನಿ ಎನ್‌ಗಿಡಿ 12.2-3-39-6
ಮಾರ್ನೆ ಮಾರ್ಕೆಲ್ 8-3-10-0
ಕೇಶವ್ ಮಹಾರಾಜ್ 6-1-26-0
ಪಂದ್ಯಶ್ರೇಷ್ಠ: ಲುಂಗಿಸಾನಿ ಎನ್‌ಗಿಡಿ
3ನೇ ಟೆಸ್ಟ್: ಜೊಹಾನ್ಸ್‌ಬರ್ಗ್ (ಜ. 24-28)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.