ಒಂದೇ ದಿನ ಸ್ಕ್ವಾಷ್‌ನಲ್ಲಿ 3 ಕಂಚು
Team Udayavani, Aug 26, 2018, 3:54 PM IST
ಜಕಾರ್ತಾ: ಭಾರತೀಯ ಪಡೆ ಶನಿವಾರ ಒಂದೇ ದಿನ ಸ್ಕ್ವಾಷ್‌ನಲ್ಲಿ 3 ಕಂಚಿನ ಪದಕ ಗೆದ್ದಿದೆ. ಇನ್ನೂ ಸ್ವಲ್ಪ ಪ್ರಯತ್ನಿಸಿದ್ದರೆ, ಅದೃಷ್ಟ ಜತೆಗಿದ್ದಿದ್ದರೆ ಕನಿಷ್ಠ ಒಂದು ಬೆಳ್ಳಿ ಗೆಲ್ಲಲೂ ಇಲ್ಲಿ ಸಾಧ್ಯವಿತ್ತು. ಆದರೆ ಎಲ್ಲ ಯತ್ನದ ಅನಂತರವೂ ಸ್ಕ್ವಾಷ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಅಥವಾ ಕಂಚು ಗೆಲ್ಲುವ ಅವಕಾಶ ತಪ್ಪಿ ಹೋಗಿದೆ. ಶನಿವಾರ ಪುರುಷರ ಸಿಂಗಲ್ಸ್‌ನಲ್ಲಿ ಸೌರವ್ ಘೋಷಾಲ್, ಮಹಿಳೆಯರ ಸಿಂಗಲ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್, ಜೋತ್ಸಾ$° ಚಿನ್ನಪ್ಪ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಗೆಲ್ಲುವ ಹಂತದಲ್ಲಿ ಸೋತ ಸೌರವ್: ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೊನೆಯವರೆಗೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಸೌರವ್ ಘೋಷಾಲ್ ಅವರು ಹಾಂಕಾಂಗ್‌ನ ಚುನ್ ಮಿಂಗ್ ಆವ್ ಎದುರು 12-10, 13-11, 6-11, 6-11, 6-11 ಗೇಮ್‌ಗಳಿಂದ ಸೋತು ಹೋದರು. ಮೊದಲ ಗೇಮ್‌ನಲ್ಲಿ ಸೌರವ್ ಬಹಳ ಬಿರುಸಾಗಿದ್ದರು.
ನಿಕಟವಾಗಿ ಕಾದಾಡಿದ ಸೌರವ್ 12-10ರಿಂದ ಜಯ ಸಾಧಿಸಿದರು. 2ನೇ ಗೇಮ್‌ನಲ್ಲಿ ಮತ್ತೂಮ್ಮೆ ರೋಚಕ ಸೆಣಸಾಟ ಕಂಡುಬಂತು. ಇಬ್ಬರೂ ಸರಿಸಮನಾಗಿ ಕಾದಾಡಿದರು. ಕಡೆಗೂ ಸೌರವ್ 13-11ರಿಂದ ಗೆದ್ದುಬಿಟ್ಟರು. ಇನ್ನೊಂದು ಗೇಮ್ ಗೆದ್ದರೆ ಸೌರವ್ ಫೈನಲ್‌ಗೇರುವುದು ಸುಲಭವಾಗಿತ್ತು. ಅಷ್ಟರಲ್ಲಿ ಪರಿಸ್ಥಿತಿ ಬದಲಾಯಿತು.
ದೀಪಿಕಾ, ಜೋತ್ಸಾ°ಗೂ ಕಂಚು
ಮಹಿಳಾ ಸಿಂಗಲ್ಸ್ ಸ್ಕ್ವಾಷ್‌ನಲ್ಲಿ ಭಾರತದ ತಾರಾ ಆಟಗಾರ್ತಿಯರಾದ ದೀಪಿಕಾ ಪಳ್ಳಿಕಲ್ ಮತ್ತು ಜೋತ್ಸಾ$° ಚಿನ್ನಪ್ಪ ಕೂಡ ಕಂಚಿನ ಪದಕ ಗೆದ್ದು ಸುಮ್ಮನಾದರು. ಮಲೇಶ್ಯದ ಅನುಭವಿ ಆಟಗಾರ್ತಿ ಡೇವಿಡ್ ನಿಕೋಲ್ ಎದುರು ಸೆಣಸಿದ ದೀಪಿಕಾ ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಟ್ಟರು.
ಆರಂಭದಲ್ಲಿ ದೀಪಿಕಾ ಮಲೇಶ್ಯ ಆಟಗಾರ್ತಿಯನ್ನು ಹೆದರಿಸಿದ್ದರು. 5-2, 4-1ರಿಂದ ಮೊದಲೆರಡು ಗೇಮ್‌ಗಳಲ್ಲಿ ಮುಂದುವರಿದಿದ್ದರು. ಆದರೆ ಮಾಜಿ ವಿಶ್ವ ನಂ.1 ಆಟಗಾರ್ತಿ ಡೇವಿಡ್ ನಿಕೋಲ್ ತಮ್ಮ ಅನುಭವವನ್ನು ಬಳಸಿ ದೀಪಿಕಾರನ್ನು ಹಣಿದರು. ಸತತ ಮೂರು ಗೇಮ್‌ಗಳನ್ನು 11-7, 11-9, 11-6ರಿಂದ ಗೆದ್ದ ನಿಕೋಲ್ ಫೈನಲ್‌ಗೇರಿದರು.
ಡಬಲ್ಸ್ ಗೆಲ್ಲುವುದು ಗುರಿ
ಪಂದ್ಯ ಮುಗಿದ ಮೇಲೆ ಮಾತನಾಡಿದ ದೀಪಿಕಾ, ಆಕೆ ಅನುಭವಿ ಆಟಗಾರ್ತಿ, ಯಾವ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂದು ಚೆನ್ನಾಗಿ ಗೊತ್ತಿದೆ. 10 ವರ್ಷಗಳ ಕಾಲ ಆಕೆ ವಿಶ್ವದ ನಂ.1 ಆಗಿದ್ದರು. ಈಗ ಸದ್ಯಕ್ಕೆ ಅವರದ್ದೇ ಆಟ. ನಮ್ಮ ಕಾಲಕ್ಕಾಗಿ ನಾವು ಕಾಯಬೇಕಾಗಿದೆ. ಸಿಂಗಲ್ಸ್ ಸೋಲಿನ ಬಗ್ಗೆ ನನಗೆ ಚಿಂತೆಯೇನಿಲ್ಲ. ಮುಂದೆ ಮಹಿಳಾ ಡಬಲ್ಸ್ ಹೋರಾಟವಿದೆ. ಅಲ್ಲಿ ಗೆಲ್ಲುವುದು ಸದ್ಯದ ಗುರಿ ಎಂದು ಹೇಳಿಕೊಂಡಿದ್ದಾರೆ.
ಮತ್ತೂಂದು ಕಡೆ ಜೋತ್ಸಾ° ಚಿನ್ನಪ್ಪ ಕೂಡ ಸೆಮಿಫೈನಲ್‌ಗೆ ತಮ್ಮ ಹೋರಾಟ ಮುಗಿಸಿದರು. ಅವರೂ ಕೂಡ ಮಲೇಶ್ಯ ಎದುರಾಳಿಯ ವಿರುದ್ಧವೇ ಕೈಚೆಲ್ಲಿದರು. ಶಿವಸಂಗರಿ ಸುಬ್ರಮಣಿಯಮ್ 12-10, 6-11, 11-9 ಗೆದ್ದು ಫೈನಲ್‌ಗೇರಿದರು. ಸೋತ ಅನಂತರ ಜೋತ್ಸಾ$° ಅಂಪಾಯ ರಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
“ಅಂಪಾಯರಿಂಗ್ ಅಪ್ರಾಮಾಣಿಕವಾಗಿತ್ತು. ಈ ರೆಫ್ರಿ ಇದ್ದಾಗೆಲ್ಲ ನನಗೆ ಹೀಗೆಯೇ ಅನಿಸಿದೆ. ಅದೇನೆ ಇರಲಿ ಶಿವ ಚೆನ್ನಾಗಿ ಆಡಿದರು. ನಾನು ಈ ಪದಕಕ್ಕಾಗಿ ಬಹಳದೀರ್ಘ ಕಾಲ ಕಾದಿದ್ದೇನೆ. ಈ ಹಿಂದೆ 3 ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಆಡಿದ್ದರೂ ನನಗೆ ಪದಕ ಸಿಕ್ಕಿರಲಿಲ್ಲ’ ಎಂದು ಹೇಳಿದ್ದಾರೆ.
ಕಾಲು ನೋವು ಸೌರವ್ ಸೋಲಿಗೆ ಕಾರಣ
ಆರಂಭದಲ್ಲಿ ಎರಡು ಗೇಮ್‌ಗಳಲ್ಲಿ ತೀವ್ರವಾಗಿ ಸೆಣಸಾಡಿ ಗೆದ್ದಿದ್ದ ಸೌರವ್ ಘೋಷಾಲ್ ಮುಂದಿನ 3 ಗೇಮ್‌ಗಳಲ್ಲಿ ಮಂಕಾದರು. ಅವರಲ್ಲಿ ಆ ತೀವ್ರತೆ, ಕೆಚ್ಚು ಕಾಣಲೇ ಇಲ್ಲ. ಇದಕ್ಕೆ ಕಾರಣವನ್ನು ಸ್ವತಃ ಸೌರವ್ ಪಂದ್ಯದ ಅನಂತರ ಬಿಟ್ಟುಕೊಟ್ಟರು. 2ನೇ ಗೇಮ್ ಮುಗಿದ ಅನಂತರ ಎಡಗಾಲು ವಿಪರೀತ ನೋಯತೊಡಗಿತು. ಆಡುವುದು ಅಸಾಧ್ಯ ಅನ್ನುವ ಮಟ್ಟಕ್ಕೆ ತಲುಪಿದ್ದೆ. ಆದರೆ ಇದನ್ನು ನನ್ನ ಸೋಲಿಗೆ ಕಾರಣವಾಗಿ ನೀಡುವುದಿಲ್ಲ. ಮೊದಲೆರಡು ಗೇಮ್ ಸೋತರೂ ಪಂದ್ಯವನ್ನು ತನ್ನ ಪರವಾಗಿಸಿಕೊಂಡ ಚುನ್ ಮಿಂಗ್ ಅದ್ಭುತ ಆಟವಾಡಿದ್ದಾರೆಂದು ಸೌರವ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.