3rd ODI: ಐರ್ಲೆಂಡ್ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ
ಪ್ರತೀಕಾ ರಾವಲ್ 154, ಸ್ಮೃತಿ ಮಂಧನಾ 135
Team Udayavani, Jan 15, 2025, 11:11 PM IST
ರಾಜ್‌ಕೋಟ್: ಆರಂಭಿಕರಾದ ಸ್ಮತಿ ಮಂಧನಾ ಮತ್ತು ಪ್ರತೀಕಾ ರಾವಲ್ ಅವರ ಬ್ಯಾಟಿಂಗ್ ಪವರ್‌ನಿಂದ ಬೃಹತ್ ಮೊತ್ತ ಪೇರಿಸಿದ ಭಾರತ, ಪ್ರವಾಸಿ ಐರ್ಲೆಂಡ್ ಎದುರಿನ 3ನೇ ಏಕದಿನ ಪಂದ್ಯವನ್ನು 304 ರನ್ನುಗಳ ದಾಖಲೆ ಅಂತರದಿಂದ ಗೆದ್ದು ಸರಣಿಯನ್ನು 3-0 ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 435 ರನ್ ರಾಶಿ ಹಾಕಿತು. ಇದು ಏಕದಿನದಲ್ಲಿ ಭಾರತದ ಅತ್ಯಧಿಕ ಮೊತ್ತವಾಗಿದೆ. ಜವಾಬು ನೀಡಿದ ಐರ್ಲೆಂಡ್ 31.4 ಓವರ್‌ಗಳಲ್ಲಿ 131ಕ್ಕೆ ಆಲೌಟ್ ಆಯಿತು.
ಅತೀ ದೊಡ್ಡ ಗೆಲುವು
ಇದು ರನ್ ಅಂತರದಲ್ಲಿ ಭಾರತದ ವನಿತೆ ಯರು ಸಾಧಿಸಿದ ಅತೀ ದೊಡ್ಡ ಗೆಲುವು. ಐರ್ಲೆಂಡ್ ವಿರುದ್ಧವೇ 2017ರ ಪೊಚೆಫ್ಸೂóಮ್ ಪಂದ್ಯವನ್ನು 249 ರನ್ನುಗಳಿಂದ ಜಯಿಸಿದ್ದು ಈವರೆಗಿನ ದಾಖಲೆ ಆಗಿತ್ತು.
ಮೊದಲ ವಿಕೆಟಿಗೆ 233 ರನ್
ಐರ್ಲೆಂಡ್ ಬೌಲಿಂಗ್ ಆಕ್ರಮಣವನ್ನು ಲೆಕ್ಕಕ್ಕಿಲ್ಲದಂತೆ ಮಾಡಿದ ಸ್ಮತಿ ಮಂಧನಾ ಮತ್ತು ಪ್ರತೀಕಾ ರಾವಲ್ 26.4 ಓವರ್ ನಿಭಾಯಿಸಿ ಮೊದಲ ವಿಕೆಟಿಗೆ 233 ರನ್ ಪೇರಿಸಿದರು. ಇದು ಭಾರತೀಯ ಏಕದಿನದ 4ನೇ 200 ಪ್ಲಸ್ ರನ್ ಜತೆಯಾಟ. ದೀಪ್ತಿ ಶರ್ಮ-ಪೂನಂ ರಾವತ್ 2017ರಲ್ಲಿ ಐರ್ಲೆಂಡ್ ವಿರುದ್ಧವೇ 320 ರನ್ ಪೇರಿಸಿದ್ದು ದಾಖಲೆಯಾಗಿದೆ.
6ನೇ ಪಂದ್ಯವಾಡುತ್ತಿರುವ ಪ್ರತೀಕಾ ರಾವಲ್ 154 ರನ್ ಬಾರಿಸಿ ಮೊದಲ ಶತಕದ ಸಂಭ್ರಮ ವನ್ನಾಚರಿಸಿದರು. 129 ಎಸೆತ ಎದುರಿಸಿದ ಅವರು 20 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಮೆರೆದರು. ಮೂಲತಃ ದಿಲ್ಲಿ ಆಟಗಾರ್ತಿ ಯಾಗಿರುವ 24 ವರ್ಷದ ಪ್ರತೀಕಾ, ದೇಶಿ ಕ್ರಿಕೆಟ್‌ನಲ್ಲಿ ರೈಲ್ವೇ ತಂಡವನ್ನು ಪ್ರತಿನಿಧಿಸುತ್ತಾರೆ.
ಮಂಧನಾ ಅವರ ಶತಕ ಕೇವಲ 70 ಎಸೆತಗಳಲ್ಲಿ ದಾಖಲಾಯಿತು. ಒಟ್ಟು 80 ಎಸೆತ ಎದುರಿಸಿದ ಅವರು 12 ಬೌಂಡರಿ ಹಾಗೂ 7 ಪ್ರಚಂಡ ಸಿಕ್ಸರ್ ನೆರವಿನಿಂದ 135 ರನ್ ಬಾರಿಸಿದರು. 3ನೇ ಕ್ರಮಾಂಕಕ್ಕೆ ಭಡ್ತಿ ಪಡೆದ ರಿಚಾ ಘೋಷ್ 42 ಎಸೆತಗಳಿಂದ 59 ರನ್ ಕೊಡುಗೆ ಸಲ್ಲಿಸಿದರು (10 ಬೌಂಡರಿ, 1 ಸಿಕ್ಸರ್). ಐರ್ಲೆಂಡ್ 7 ಬೌಲರ್‌ಗಳನ್ನು ದಾಳಿಗೆ ಇಳಿಸಿದರೂ ಪ್ರಯೋಜನವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಭಾರತ-5 ವಿಕೆಟಿಗೆ 435 (ಪ್ರತೀಕಾ 154, ಮಂಧನಾ 135, ರಿಚಾ 59, ತೇಜಲ್ 28, ಪ್ರಂಡರ್‌ಗಾಸ್ಟ್ 71ಕ್ಕೆ 2). ಐರ್ಲೆಂಡ್-31.4 ಓವರ್‌ಗಳಲ್ಲಿ 131 (ಫೋರ್ಬ್ಸ್ 41, ಓರ್ಲಾ 36, ದೀಪ್ತಿ 27ಕ್ಕೆ 3, ತನುಜಾ 31ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಪ್ರತೀಕಾ ರಾವಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
ಆಸ್ಟ್ರೇಲಿಯನ್ ಓಪನ್-2025: ಫೆಡರರ್ ದಾಖಲೆ ಮುರಿದ ಜೊಕೋ
Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ
Champions Trophy: ಭಾರತ ತಂಡಕ್ಕೆ ಆಯ್ಕೆಯಾಗುವ ವಿಕೆಟ್‌ಕೀಪರ್ ಗಳಿಬ್ಬರು ಯಾರು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.