ಸೋಲು ತಪ್ಪಿಸಲು ಭಾರತ ಪ್ರಯತ್ನ


Team Udayavani, Nov 25, 2018, 6:00 AM IST

india-vs-australia-2018.jpg

ಸಿಡ್ನಿ: ಸತತ ಏಳು ಟಿ20 ಸರಣಿ ಗೆಲುವಿನ ಬಳಿಕ ಇದೇ ಮೊದಲ ಸಲ ಭಾರತ ಸೋಲಿನ ದವಡೆಗೆ ಸಿಲಕಿದೆ. ಆಸ್ಟ್ರೇಲಿಯ ವಿರುದ್ಧ ರವಿವಾರ ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಸೋಲಿನ ದವಡೆಯಿಂದ ಪಾರಾಗಲಿದೆ. ಭಾರತ ಗೆದ್ದರೆ ಸರಣಿ ಸಮಬಲದಲ್ಲಿ ಅಂತ್ಯಗೊಳ್ಳಲಿದೆ. ಒಂದು ವೇಳೆ ಭಾರತ ಸೋತರೆ ಆಸ್ಟ್ರೇಲಿಯ ಸರಣಿ ಗೆಲ್ಲಲಿದೆ.

ಮೆಲ್ಬರ್ನ್ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿಯೇ ಭಾರತಕ್ಕೆ ಸರಣಿ ಸಮಬಲಗೊಳಿಸುವ ಒಳ್ಳೆಯ ಅವಕಾಶ ಲಭಿಸಿತ್ತು. ಆಸ್ಟ್ರೇಲಿಯವನ್ನು 7 ವಿಕೆಟಿಗೆ 132 ರನ್ನಿಗೆ ಭಾರತ ನಿಯಂತ್ರಿಸಿತ್ತು. ಆದರೆ ಸತತ ಮಳೆಯಿಂದ ಪಂದ್ಯ ರದ್ದುಗೊಂಡ ಕಾರಣ ಭಾರತದ ಗೆಲುವಿನ ನಿರೀಕ್ಷೆ ಮಳೆಯಲ್ಲಿ ಕೊಚ್ಚಿಹೋಯಿತು.

ಸಿಡ್ನಿಯಲ್ಲಿ ನಡೆಯುವ ಮೂರನೇ ಟಿ20 ಪಂದ್ಯ ಗೆಲ್ಲುವುದು ಇದೀಗ ಕೊಹ್ಲಿ ಪಡೆಯ ಆಸೆಯಾಗಿದೆ. ಗೆದ್ದರೆ ಸರಣಿ ಸಮಬಲಗೊಳಿಸಲಿದೆ ಮಾತ್ರವಲ್ಲದೇ ಮುಂಬರುವ ಟೆಸ್ಟ್‌ ಸರಣಿಗೆ ಆತ್ಮವಿಶ್ವಾಸದೊಂದಿಗೆ ರೆಡಿಯಾಗಬಹುದು. ಟೆಸ್ಟ್‌ ಸರಣಿ ಡಿ. 6ರಿಂದ ಆರಂಭವಾಗಲಿದೆ.

2017ರಿಂದ ಅಜೇಯ
ಭಾರತವು 2017ರ ಜುಲೈ ಬಳಿಕ ಆಡಿದ ಎಲ್ಲ ಟಿ20 ಅಂತಾರಾಷ್ಟ್ರೀಯ ಸರಣಿಗಳಲ್ಲಿ ಅಜೇಯ ಸಾಧನೆ ಮಾಡಿದೆ. ಕೆರಿಬಿಯನ್‌ನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ಗೆ ಶರಣಾದ ಬಳಿಕ ಭಾರತ ಆಡಿದ  27 ಪಂದ್ಯಗಳಲ್ಲಿ 20ರಲ್ಲಿ ಜಯ ಸಾಧಿಸಿದೆ. ಆಡಿದ ಏಳು ಸರಣಿಗಳಲ್ಲಿ ಜಯಭೇರಿ ಬಾರಿಸಿದೆ. ಇದರಲ್ಲಿ ಶ್ರೀಲಂಕಾದಲ್ಲಿ ನಡೆದ ನಿದಹಾಸ್‌ ಟ್ರೋಫಿಗಾಗಿ ನಡೆದ ತ್ರಿಕೋನ ಸರಣಿ ಮತ್ತು ಇಂಗ್ಲೆಂಡ್‌ ತಂಡವನ್ನು 2-1 ಅಂತರದಿಂದ ಸೋಲಿಸಿರುವುದು ಪ್ರಮುಖವಾದದ್ದು. 2016ರಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆಯೂ ಭಾರತ ಟಿ20 ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್‌ ಸಾಧನೆ ಮಾಡಿತ್ತು.

ಗೆಲುವಿನ ನಿರೀಕ್ಷೆ
ಮೆಲ್ಬರ್ನ್ನಲ್ಲಿ ಆತಿಥೇಯ ತಂಡವನ್ನು ಕಟ್ಟಿಹಾಕದಂತೆ ಸಿಡ್ನಿಯಲ್ಲೂ ಉತ್ತಮ ದಾಳಿ ಸಂಘಟಿಸಲು ಭಾರತ ಯೋಚಿಸುತ್ತಿದೆ. ಅದಕ್ಕಾಗಿ ತಂಡದಲ್ಲಿ ಮಹತ್ತರ ಬದಲಾವಣೆ ಮಾಡದಿರಲು ಕೊಹ್ಲಿ ಬಯಸಿದ್ದಾರೆ. ತಂಡದ ಆಯ್ಕೆಯಲ್ಲೂ ಅವರು ಸ್ಥಿರತೆಯನ್ನು ಕಾಯ್ದುಕೊಂಡು ಬರುತ್ತಿರುವ ಕಾರಣ ಆಟಗಾರರಿಂದ ಉತ್ತಮ ನಿರ್ವಹಣೆ ಸಾಧ್ಯವಾಗಿದೆ. ಆಲ್‌ರೌಂಡರ್‌ ಆಗಿ ಕೃಣಾಲ್‌ ಪಾಂಡ್ಯ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವ ಕಾರಣ ಪಾಂಡ್ಯ ಆಟವಾಡುವ ಬಳಗದಲ್ಲಿರುವುದು ಖಚಿತ. ಖಲೀಲ್‌ ಅಹ್ಮದ್‌ ಅವರನ್ನು ಹೊರಗಿಡುವ ನಿರೀಕ್ಷೆಯಿದೆ. ಉಳಿದಂತೆ ಯಾವುದೇ ಬದಲಾವಣೆ ಇಲ್ಲ ಇದೇ ವೇಳೆ ಆರನ್‌ ಫಿಂಚ್‌ ಬಳಗ ಭಾರತ ವಿರುದ್ಧ ಸರಣಿ ಗೆಲುವಿನ ಸನಿಹದಲ್ಲಿದೆ. ಗೆದ್ದರೆ ಅದು 2-0 ಅಂತರದಿಂದ ಸರಣಿ ತನ್ನದಾಗಿಸಿಕೊಳ್ಳಲಿದೆ. ಅಭ್ಯಾಸದ ವೇಳೆ ಗಾಯಗೊಂಡಿರುವ ಬಿಲ್ಲಿ ಸ್ಟಾನ್‌ಲೇಕ್‌ ಬದಲಿಗೆ ಮಿಚೆಲ್‌ ಸ್ಟಾರ್ಕ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಉಭಯ ತಂಡಗಳು
ಭಾರತ

ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಕೆಎಲ್‌ ರಾಹುಲ್‌, ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಖಲೀಲ್‌ ಅಹ್ಮದ್‌/ಯುಜುವೇಂದ್ರ ಚಾಹಲ್‌.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಡಿ’ಆರ್ಕಿ ಶಾರ್ಟ್‌, ಕ್ರಿಸ್‌ ಲಿನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟಾಯಿನಿಸ್‌, ಬೆನ್‌ ಮೆಕ್‌ಡರ್ಮಟ್‌, ಅಲೆಕ್ಸ್‌ ಕ್ಯಾರೆ, ನಥನ್‌ ಕೌಲ್ಟರ್‌ ನೈಲ್‌/ ಮಿಚೆಲ್‌ ಸ್ಟಾರ್ಕ್‌, ಆ್ಯಂಡ್ರೂé ಟೈರ್‌, ಆ್ಯಡಂ ಝಂಪ, ಜಾಸನ್‌ ಬೆಹೆìನ್‌ಡಾಫ್.
ಪಂದ್ಯ ಆರಂಭ ಅಪರಾಹ್ನ 1.30 ಗಂಟೆ

ಸ್ಟಾರ್ಕ್‌ಗೆ ಕರೆ
ಮೆಲ್ಬರ್ನ್ನಲ್ಲಿ ಟಾಸ್‌ಗೆ ಮೊದಲು ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡ ಬಿಲ್ಲಿ ಸ್ಟಾನ್‌ಲೇಕ್‌ ಅವರ ಬದಲಿಗೆ ಮಿಚೆಲ್‌ ಸ್ಟಾರ್ಕ್‌ ಅವರನ್ನು ಸೇರಿಸಿಕೊಂಡಿದೆ. ಸ್ಟಾರ್ಕ್‌ ಅವರು 2016ರ ಬಳಿಕ ಟ್ವೆಂಟಿ20 ಪಂದ್ಯ ಆಡಿಲ್ಲ. ತಂಡದಲ್ಲಿರುವ ಡಿ’ಆರ್ಕಿ ಶಾರ್ಟ್‌ ಈ ಋತುವಿನ ಮೂರು ಟಿ20 ಪಂದ್ಯಗಳಲ್ಲಿ ಒದ್ದಾಡಿದ್ದಾರೆ. ಒಟ್ಟಾರೆ 28 ಎಸೆತ ಎದುರಿಸಿ 21 ರನ್‌ ಗಳಿಸಿದ್ದಾರೆ.

ಅಂಕಿ ಅಂಶ
ಸಿಡ್ನಿಯ ಈ ಮೈದಾನದಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಈ ಹಿಂದಿನ ಪಂದ್ಯ ಸ್ಮರಣೀಯವಾಗಿ ಸಾಗಿತ್ತು. 2016ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಗೆಲುವಿನ ಗುರಿಯಾದ 198 ರನ್‌ ಪೇರಿಸಿ ವಿಜಯಿಯಾಗಿತ್ತು.

ಜಿಂಬಾಬ್ವೆಯಲ್ಲಿ ನಡೆದ ಟಿ20 ಸರಣಿ ಬಳಿಕ ಆಸ್ಟ್ರೇಲಿಯದ ಬ್ಯಾಟ್ಸ್‌ಮೆನ್‌ ಆಡಿದ ಏಳು ಪಂದ್ಯಗಳಲ್ಲಿ ಎರಡು ಅಧಶತಕ ಹೊಡೆದಿದ್ದಾರೆ. ಯುಎಇ ವಿರುದ್ಧ ಶಾರ್ಟ್‌ ಅಜೇಯ 68 ಮತ್ತು ಪಾಕಿಸ್ಥಾನ ವಿರುದ್ಧ ದುಬಾೖಯಲ್ಲಿ ಮ್ಯಾಕ್ಸ್‌ವೆಲ್‌ 52 ರನ್‌ ಹೊಡೆದಿದ್ದರು.

ಸ್ಟಾರ್ಕ್‌ ತವರಿನಲ್ಲಿ  ಈ ಹಿಂದೆ 2014ರ ಫೆಬ್ರವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20 ಪಂದ್ಯ ಆಡಿದ್ದರು.

ಟಾಪ್ ನ್ಯೂಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್‌ ಡೆಲ್ಲಿ

KAR-BE

Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

24-tma-pai

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.