ಪಲ್ಲೆಕಿಲೆ ಟೆಸ್ಟ್ : ಧವನ್, ರಾಹುಲ್ ಹೊಡೆತ; ಲಂಕಾ ಹಿಡಿತ
Team Udayavani, Aug 13, 2017, 7:40 AM IST
ಪಲ್ಲೆಕಿಲೆ: ಶಿಖರ್ ಧವನ್ ಅವರ ಅಮೋಘ ಶತಕ ಮತ್ತು ಕೆ.ಎಲ್. ರಾಹುಲ್ ಅವರ ವಿಶ್ವದಾಖಲೆಯ ಅರ್ಧ ಶತಕ ವೈಭವದಿಂದ ರಂಗೇರಿಸಿಕೊಂಡ ಭಾರತದ ಇನ್ನಿಂಗ್ಸ್, ಇವರಿಬ್ಬರ ಮ್ಯಾರಥಾನ್ ಜತೆಯಾಟದ ಬಳಿಕ ಶ್ರೀಲಂಕಾ ಸ್ಪಿನ್ನಿಗೆ ಶರಣಾದಂತೆ ಕಂಡುಬಂದಿದೆ. ಪಲ್ಲೆಕಿಲೆ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಗಳಿಕೆ 6ಕ್ಕೆ 329 ರನ್.ಆದರೆ ಕನಿಷ್ಠ 400-420 ರನ್ ಒಟ್ಟುಗೂಡುವ ಸಾಧ್ಯತೆ ಇರುವುದರಿಂದ ಹಾಗೂ ಮೊದಲ ದಿನವೇ ಪಲ್ಲೆಕಿಲೆ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ನೆರವು ನೀಡಲಾರಂಭಿಸಿದ್ದರಿಂದ ಈ ಪಂದ್ಯದಲ್ಲೂ ಕೊಹ್ಲಿ ಪಡೆಯ ಮೇಲುಗೈಯನ್ನು ನಿರೀಕ್ಷಿಸಬಹುದಾಗಿದೆ.
ಧವನ್-ರಾಹುಲ್ ಅಬ್ಬರದಾಟ
ಪ್ರಚಂಡ ಫಾರ್ಮನ್ನು ಪಲ್ಲೆಕಿಲೆಗೂ ವಿಸ್ತರಿಸಿದ ಶಿಖರ್ ಧವನ್ 6ನೇ ಟೆಸ್ಟ್ ಸಂಭ್ರಮದಲ್ಲಿ ತೇಲಾಡಿದರು. ಎಂದಿನ ಆಕ್ರಮಣಕಾರಿ ಬ್ಯಾಟಿಂಗಿಗೆ ಮುಂದಾದ ಧವನ್ 123 ಎಸೆತಗಳಿಂದ 119 ರನ್ ಬಾರಿಸಿದರು. ಸಿಡಿಸಿದ್ದು 17 ಬೌಂಡರಿ. ಇದು ಪ್ರಸಕ್ತ ಸರಣಿಯಲ್ಲಿ ಧವನ್ ದಾಖಲಿಸಿದ 2ನೇ ಶತಕ. ಗಾಲೆಯಲ್ಲಿ 190 ರನ್ ಸಿಡಿಸಿದ್ದರು.
ಕ್ರೀಸ್ ಇಳಿದರೆ 50 ರನ್ನಿಗೇನೂ ಕೊರತೆ ಇಲ್ಲ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ ಕೆ.ಎಲ್. ರಾಹುಲ್ ಅವರದು 85 ರನ್ನುಗಳ ಕೊಡುಗೆ. 135 ಎಸೆತಗಳ ಈ ರಂಜನೀಯ ಆಟದಲ್ಲಿ 8 ಬೌಂಡರಿ ಒಳಗೊಂಡಿತ್ತು. ಇದು ಸತತ 7 ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಬ್ಯಾಟಿನಿಂದ ಮೂಡಿಬಂದ 7ನೇ ಅರ್ಧ ಶತಕವೆಂಬ ಜಂಟಿ ವಿಶ್ವದಾಖಲೆಗೆ ಪಾತ್ರವಾಗಿದೆ. ರಾಹುಲ್ ಈ ಸಾಧನೆಗೈದ ವಿಶ್ವದ 6ನೇ ಬ್ಯಾಟ್ಸ್‌ಮನ್, ಭಾರತದ ಮೊದಲ ಸಾಧಕ.
ಲಂಕಾದಲ್ಲಿ ಓಪನಿಂಗ್ ದಾಖಲೆ
2-0 ಮುಂದಿರುವ ಟೀಮ್ ಇಂಡಿಯಾ ಕ್ಲೀನ್‌ಸಿÌàಪ್ ಯೋಜನೆಯೊಂದಿಗೆ ಕಣಕ್ಕಿಳಿದಿತ್ತು. ಸತತ 3ನೇ ಪಂದ್ಯದಲ್ಲೂ ಟಾಸ್ ಜಯಿಸಿ ಮೊದಲು ಬ್ಯಾಟಿಂಗನ್ನೇ ಬಯಸಿತು. ಆದರೆ ಕೊಹ್ಲಿಯ ಈ ನಿರ್ಧಾರ ಗ್ಯಾಂಬ್ಲಿಂಗ್‌ನಂತೆ ಕಂಡುಬಂದಿತ್ತು. ಮಳೆಯಿಂದ ಪಿಚ್ ತೇವಗೊಂಡಿದ್ದರಿಂದ ಮೊದಲ ಒಂದು ಗಂಟೆಯ ಅವಧಿಯಲ್ಲಿ ಸೀಮರ್‌ಗಳು ಮೇಲುಗೈ ಸಾಧಿಸಬಹುದೆಂಬ ನಿರೀಕ್ಷೆ ಇತ್ತು. ಹೀಗಾಗಿ ಟಾಸ್ ಗೆದ್ದವರು ಮೊದಲು ಬೌಲಿಂಗ್ ತೆಗೆದುಕೊಳ್ಳುವರೆಂದು ನಂಬಲಾಗಿತ್ತು.
ಆದರೆ ಧವನ್-ರಾಹುಲ್ ಸೇರಿಕೊಂಡು ಇದನ್ನು ಹುಸಿಗೊಳಿಸುತ್ತ ಹೋದರು. ಲಂಕಾ ಬೌಲರ್‌ಗಳ ಮೇಲೆ ಘಾತಕವಾಗಿ ಎರಗಿದ ಈ ಜೋಡಿ ರನ್ನಿನ ಸುರಿಮಳೆಗೈಯುತ್ತ ಹೋಯಿತು. ಮೊದಲ ವಿಕೆಟಿಗೆ ಒಟ್ಟುಗೂಡಿದ್ದು ಬರೋಬ್ಬರಿ 188 ರನ್. ಇದಕ್ಕೆ ತಗುಲಿದ್ದು 39.3 ಓವರ್. ಇದು ಶ್ರೀಲಂಕಾದಲ್ಲಿ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ವಿದೇಶಿ ತಂಡದ ಸರ್ವಾಧಿಕ ರನ್ ಆಗಿದೆ.
ಧವನ್-ರಾಹುಲ್ ಬೇರ್ಪಟ್ಟ ಬಳಿಕ ಶ್ರೀಲಂಕಾ ಸ್ಪಿನ್ನರ್‌ಗಳು ಭಾರತದ ಮಧ್ಯಮ ಸರದಿಯ ಮೇಲೆ ಘಾತಕವಾಗಿ ಎರಗಿದರು. ಟೀಮ್ ಇಂಡಿಯಾದ 6 ವಿಕೆಟ್‌ಗಳು 141 ಅಂತರದಲ್ಲಿ ಉರುಳಿದ್ದೇ ಇದಕ್ಕೆ ಸಾಕ್ಷಿ. ಧವನ್-ರಾಹುಲ್ ಆರ್ಭಟದ ವೇಳೆ 4.75ರಷ್ಟಿದ್ದ ರನ್‌ರೇಟ್, ಬಳಿಕ 3.65ಕ್ಕೆ ಕುಸಿಯಿತು. ಭಾರತ ಲಂಚ್ ಅವಧಿಯ 27 ಓವರ್‌ಗಳ ಆಟದಲ್ಲೇ ನೋಲಾಸ್ 134 ರನ್ ಬಾರಿಸಿದ್ದನ್ನು ಕಂಡಾಗ ಮೊದಲ ದಿನವೇ ತಂಡದ ಮೊತ್ತ 400ರ ಗಡಿ ದಾಟುವ ನಿರೀಕ್ಷೆ ಮೂಡಿದ್ದು ಸಹಜ. ಆದರೆ ಅನಂತರದ 2 ಅವಧಿಯಲ್ಲಿ ಎಡಗೈ ಸ್ಪಿನ್ನರ್ ಮಲಿಂದ ಪುಷ್ಪಕುಮಾರ (40ಕ್ಕೆ 3) ಮತ್ತು ಚೈನಾಮನ್ ಬೌಲರ್ ಲಕ್ಷಣ ಸಂದಕನ್ (84ಕ್ಕೆ 2) ಉತ್ತಮ ಲಯ ಕಂಡುಕೊಂಡರು.
ಇನ್‌ಫಾರ್ಮ್ ಚೇತೇಶ್ವರ್ ಪೂಜಾರ ಕೇವಲ 8 ರನ್ನಿಗೆ ಔಟಾದರೆ, ಅಜಿಂಕ್ಯ ರಹಾನೆ 17 ರನ್ನಿಗೆ ಆಟ ಮುಗಿಸಿದರು. ಇವರಿಬ್ಬರೂ ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ನಾಯಕ ಕೊಹ್ಲಿ ಕ್ರೀಸ್ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರೂ 42ರ ಗಡಿಯಲ್ಲಿ ಉದುರಿರು (84 ಎಸೆತ, 3 ಬೌಂಡರಿ). ಅಶ್ವಿನ್ ಗಳಿಕೆ 31 ರನ್. ಸಾಹಾ 13 ಹಾಗೂ ಪಾಂಡ್ಯ ಒಂದು ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸತತ 7 ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ
ವಿಶ್ವದಾಖಲೆ ಸರಿದೂಗಿಸಿದ ರಾಹುಲ್
ಭಾರತದ ಆರಂಭಕಾರ ಕೆ.ಎಲ್. ರಾಹುಲ್ ವಿಶಿಷ್ಟ ವಿಶ್ವದಾಖಲೆಯೊಂದಿಗೆ ಗುರುತಿಲ್ಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಪಲ್ಲೆಕಿಲೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 85 ರನ್ ಬಾರಿಸುವ ಮೂಲಕ ಅವರು ಸತತ 7 ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ಬಾರಿಸಿದ ವಿಶ್ವದ 6ನೇ ಬ್ಯಾಟ್ಸ್‌ಮನ್ ಎನಿಸಿದರು. ಇದು ಜಂಟಿ ವಿಶ್ವದಾಖಲೆಯಾಗಿದೆ.
ಈ ಸಾಧನೆ ಮಾಡಿದ ಉಳಿದವರೆಂದರೆ ವೆಸ್ಟ್ ಇಂಡೀಸಿನ ಎವರ್ಟನ್ ವೀಕ್ಸ್, ಶಿವನಾರಾಯಣ್ ಚಂದರ್‌ಪಾಲ್, ಜಿಂಬಾಬ್ವೆಯ ಆ್ಯಂಡಿ ಫ್ಲವರ್, ಶ್ರೀಲಂಕಾದ ಕುಮಾರ ಸಂಗಕ್ಕರ ಮತ್ತು ಆಸ್ಟ್ರೇಲಿಯದ ಕ್ರಿಸ್ ರೋಜರ್. ಇವರಲ್ಲಿ ವೀಕ್ಸ್ ಮತ್ತು ರಾಹುಲ್ ಮಾತ್ರ ಬಲಗೈ ಬ್ಯಾಟ್ಸ್‌ಮನ್‌ಗಳು. ಮುಂದಿನ ಇನ್ನಿಂಗ್ಸ್‌ನಲ್ಲೂ 50 ರನ್ ಬಾರಿಸಿದರೆ ರಾಹುಲ್ ಈ ವಿಶ್ವದಾಖಲೆಯ ಏಕೈಕ ಸಾಧಕನೆನಿಸಲಿದ್ದಾರೆ.
ರಾಹುಲ್ ಕಳೆದ ಆಸ್ಟ್ರೇಲಿಯ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ 90 ಹಾಗೂ 51 ರನ್ ಮಾಡುವ ಮೂಲಕ ಅರ್ಧ ಶತಕಗಳ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಬಳಿಕ ಆಸೀಸ್ ವಿರುದ್ಧವೇ ರಾಂಚಿಯಲ್ಲಿ 67 ರನ್, ಧರ್ಮಶಾಲಾದಲ್ಲಿ 60 ಮತ್ತು ಅಜೇಯ 51 ರನ್, ಈ ಸರಣಿಯ ಕೊಲಂಬೊ ಪಂದ್ಯದಲ್ಲಿ 57 ರನ್ ಹಾಗೂ ಇದೀಗ ಪಲ್ಲೆಕಿಲೆಯಲ್ಲಿ 85 ರನ್ ಹೊಡೆದು “ಫಿಫ್ಟಿ ಓಟ’ವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ರಾಹುಲ್ ಸತತ 7 ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ದಾಖಲಿಸಿದ ಭಾರತದ ಮೊದಲ ಕ್ರಿಕೆಟಿಗ. ಜಿ.ಆರ್. ವಿಶ್ವನಾಥ್ ಮತ್ತು ರಾಹುಲ್ ದ್ರಾವಿಡ್ ಸತತ 6 ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ಹೊಡೆದಿದ್ದಾರೆ.
ಇದು 19ನೇ ಟೆಸ್ಟ್‌ನಲ್ಲಿ ರಾಹುಲ್ ದಾಖಲಿಸಿದ 9ನೇ ಅರ್ಧ ಶತಕವಾಗಿದ್ದು, ಇದರಲ್ಲಿ 7 ಅರ್ಧ ಶತಕಗಳು ಕಡೆಯ 5 ಟೆಸ್ಟ್‌ಗಳಲ್ಲಿ ಬಂದಿರುವುದು ಉಲ್ಲೇಖನೀಯ.
ಜಡೇಜ ಬದಲು ಕುಲದೀಪ್
ನಿರೀಕ್ಷೆಯಂತೆ ನಿಷೇಧಿತ ರವೀಂದ್ರ ಜಡೇಜ ಬದಲು ಚೈನಾಮನ್ ಬೌಲರ್ ಕುಲದೀಪ್ ಯಾದವ್ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಭಾರತ ತಂಡದಲ್ಲಿ ಸಂಭವಿಸಿದ ಬದಲಾವಣೆ ಇದೊಂದೇ. ಜಡೇಜ ಬದಲು ದೂರದ ದಕ್ಷಿಣ ಆಫ್ರಿಕಾದಿಂದ ಹಾರಿಬಂದ ಅಕ್ಷರ್ ಪಟೇಲ್ ಅವರಿಗೆ ಕೊನೆಗೂ ಟೆಸ್ಟ್‌ಕ್ಯಾಪ್ ಧರಿಸುವ ಯೋಗ ಕೂಡಿಬರಲಿಲ್ಲ.
ಶ್ರೀಲಂಕಾ ತಂಡದಲ್ಲಿ 3 ಬದಲಾವಣೆ ಮಾಡಿಕೊಳ್ಳಲಾಯಿತು. ರಂಗನ ಹೆರಾತ್, ನುವಾನ್ ಪ್ರದೀಪ್ ಮತ್ತು ಧನಂಜಯ ಡಿ’ಸಿಲ್ವ ಬದಲು ಲಕ್ಷಣ ಸಂದಕನ್, ಲಹಿರು ಕುಮಾರ ಹಾಗೂ ವಿಶ್ವ ಫೆರ್ನಾಂಡೊ ಅವರಿಗೆ ಅವಕಾಶ ಕಲ್ಪಿಸಲಾಯಿತು.ಕುಲದೀಪ್ ಯಾದವ್ ಮತ್ತು ಲಕ್ಷಣ ಸಂದಕನ್ ಸೇರ್ಪಡೆಯೊಂದಿಗೆ ಟೆಸ್ಟ್ ಪಂದ್ಯವೊಂದರಲ್ಲಿ 2004ರ ಬಳಿಕ ಇಬ್ಬರು ಚೈನಾಮನ್ ಬೌಲರ್‌ಗಳು ಒಟ್ಟಿಗೇ ಆಡಿದಂತಾಯಿತು. ಅಂದಿನ ಕೇಪ್‌ಟೌನ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಪಾಲ್ ಆ್ಯಡಮ್ಸ್ ಮತ್ತು ವೆಸ್ಟ್ ಇಂಡೀಸಿನ ಡೇವ್ ಮೊಹಮ್ಮದ್ ಆಡಿದ್ದರು.
ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
ಶಿಖರ್ ಧವನ್ ಸಿ ಚಂಡಿಮಾಲ್ ಬಿ ಪುಷ್ಪಕುಮಾರ 119
ಕೆ.ಎಲ್. ರಾಹುಲ್ ಸಿ ಕರುಣರತ್ನೆ ಬಿ ಪುಷ್ಪಕುಮಾರ 85
ಚೇತೇಶ್ವರ್ ಪೂಜಾರ ಸಿ ಮ್ಯಾಥ್ಯೂಸ್ ಬಿ ಸಂದಕನ್ 8
ವಿರಾಟ್ ಕೊಹ್ಲಿ ಸಿ ಕರುಣರತ್ನೆ ಬಿ ಸಂದಕನ್ 42
ಅಜಿಂಕ್ಯ ರಹಾನೆ ಬಿ ಪುಷ್ಪಕುಮಾರ 17
ಆರ್. ಅಶ್ವಿನ್ ಸಿ ಡಿಕ್ವೆಲ್ಲ ಬಿ ಫೆರ್ನಾಂಡೊ 31
ವೃದ್ಧಿಮಾನ್ ಸಾಹಾ ಬ್ಯಾಟಿಂಗ್ 13
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ 1
ಇತರ 13
ಒಟ್ಟು (6 ವಿಕೆಟಿಗೆ) 329
ವಿಕೆಟ್ ಪತನ: 1-188, 2-219, 3-229, 4-264, 5-296, 6-322.
ಬೌಲಿಂಗ್:
ವಿಶ್ವ ಫೆರ್ನಾಂಡೊ 19-2-68-1
ಲಹಿರು ಕುಮಾರ 15-1-67-0
ದಿಮುತ್ ಕರುಣರತ್ನೆ 5-0-23-0
ದಿಲುÅವಾನ್ ಪೆರೆರ 8-1-36-0
ಲಕ್ಷಣ ಸಂದಕನ್ 25-2-84-2
ಮಲಿಂದ ಪುಷ್ಪಕುಮಾರ 18-2-40-3
ಎಕ್ಸ್‌ಟ್ರಾ ಇನ್ನಿಂಗ್ಸ್
– ಶಿಖರ್ ಧವನ್ 26ನೇ ಟೆಸ್ಟ್‌ನಲ್ಲಿ 6ನೇ ಶತಕ ಹೊಡೆದರು. ಇದು ಲಂಕಾ ವಿರುದ್ಧ ಧವನ್ ದಾಖಲಿಸಿದ 3ನೇ ಹಾಗೂ ಪ್ರಸಕ್ತ ಸರಣಿಯಲ್ಲಿ ಬಾರಿಸಿದ 2ನೇ ಶತಕ. ಗಾಲೆ ಪಂದ್ಯದಲ್ಲಿ ಅವರು 190 ರನ್ ಹೊಡೆದಿದ್ದರು.
– ಧವನ್ 2011ರ ಬಳಿಕ ವಿದೇಶಿ ಸರಣಿಯೊಂದರಲ್ಲಿ 2 ಶತಕ ಬಾರಿಸಿದ ಭಾರತದ ಮೊದಲ ಆರಂಭಿಕನೆನಿಸಿದರು. ಅಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ 3 ಶತಕ ಹೊಡೆದಿದ್ದರು. ಇದರಲ್ಲಿ 2 ಶತಕ ಓಪನಿಂಗ್ ವೇಳೆ ಬಂದಿತ್ತು (ನಾಟಿಂಗಂನಲ್ಲಿ 117 ಹಾಗೂ ಓವಲ್‌ನಲ್ಲಿ ಅಜೇಯ 146). ಈ ಟೆಸ್ಟ್‌ಗಳಲ್ಲಿ ಮುಕುಂದ್ ಹಾಗೂ ಸೆಹವಾಗ್ ಜತೆ ದ್ರಾವಿಡ್ ಇನ್ನಿಂಗ್ಸ್ ಆರಂಭಿಸಿದ್ದರು.
– ರಾಹುಲ್-ಧವನ್ ಶ್ರೀಲಂಕಾದಲ್ಲಿ ಆಡಲಾದ ಟೆಸ್ಟ್‌ನಲ್ಲಿ ಮೊದಲ ವಿಕೆಟಿಗೆ ಸರ್ವಾಧಿಕ ರನ್ (188) ಪೇರಿಸಿದ ಜೋಡಿ ಎನಿಸಿತು. ಹಿಂದಿನ ದಾಖಲೆ ಕೂಡ ಭಾರತದ ಹೆಸರಲ್ಲೇ ಇತ್ತು. 1993ರ ಕೊಲಂಬೊ ಟೆಸ್ಟ್‌ನಲ್ಲಿ ನವಜೋತ್ ಸಿಂಗ್ ಸಿದ್ದು ಮತ್ತು ಮನೋಜ್ ಪ್ರಭಾಕರ್ 171 ರನ್ ಒಟ್ಟುಗೂಡಿಸಿದ್ದರು.
– ಭಾರತ ಈ ಸರಣಿಯಲ್ಲಿ ಸತತ 3 ಸಲ ಟಾಸ್ ಜಯಿಸಿತು, 3 ಸಲವೂ ಮೊದಲು ಬ್ಯಾಟಿಂಗ್ ನಡೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.