40 ರ ಹರೆಯದಲ್ಲೂ ಕಮಾಲ್: 16 ವರ್ಷಗಳ ನಂತರ ಟಿಟಿ ಸಿಂಗಲ್ಸ್ ಚಿನ್ನ ಗೆದ್ದ ಶರತ್
ಈ ಬಾರಿ ಮೂರು ಪದಕ ಗೆದ್ದು, 13 ಕಾಮನ್ವೆಲ್ತ್ ಪದಕಗಳಿಗೆ ಕೊರಳೊಡ್ಡಿದ ಸಾಧಕ
Team Udayavani, Aug 8, 2022, 7:49 PM IST
ಬರ್ಮಿಂಗ್ ಹ್ಯಾಮ್ : ಸೋಮವಾರ ಇಲ್ಲಿ ನಡೆದ ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 40 ರ ಹರೆಯದ ಅನುಭವಿ ಆಟಗಾರ ಅಚಂತಾ ಶರತ್ ಕಮಲ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು.
ಶರತ್ 11-13, 11-7, 11-2, 11-6, 11-8 ಪಾಯಿಂಟ್ ಗಳಲ್ಲಿ ರಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿ ಈ ಬಾರಿಯ ಗೇಮ್ಸ್ ನಲ್ಲಿ ಮೂರನೇ ಚಿನ್ನದ ಪದಕ ಗೆದ್ದರು. 2006 ರಲ್ಲಿ ಮೊದಲ ಬಾರಿಗೆ ಸಿಂಗಲ್ಸ್ ಚಿನ್ನ ಗೆದ್ದಿದ್ದ ಶರತ್,16 ವರ್ಷಗಳ ನಂತರ ಮತ್ತೆ ಗೆದ್ದು ಬಂಗಾರದ ಪದಕ ತನ್ನದಾಗಿಸಿಕೊಂಡರು.
ಶ್ರೀಜಾ ಅಕುಲಾ ಅವರೊಂದಿಗೆ ಮಿಶ್ರ ಡಬಲ್ಸ್ ಮತ್ತು ಸುಭಜಿತ್ ಸಹಾ ಅವರೊಂದಿಗೆ ಡಬಲ್ಸ್ ಈವೆಂಟ್‌ನಲ್ಲಿ ಈಗಾಗಲೇ ಎರಡು ಚಿನ್ನವನ್ನು ಗೆದ್ದಿದ್ದರು. ಐದು ಕಾಮನ್‌ವೆಲ್ತ್ ಗೇಮ್ಸ್ ಆಟಗಳಲ್ಲಿ ತಮ್ಮ ಪದಕಗಳ ಸಂಖ್ಯೆಯನ್ನು 13 ಕ್ಕೆ ಹೆಚ್ಚಿಸಿಕೊಂಡರು.
ತಮಿಳುನಾಡಿನ ಚೆನ್ನೈನಲ್ಲಿ ಹುಟ್ಟಿ ಬೆಳೆದ ಸಾಧಕ ಶರತ್ ಅವರಿಗೆ ಕೇಂದ್ರ ಸರಕಾರ ಕ್ರೀಡಾ ರಂಗದ ಸಾಧನೆಗಾಗಿ 2004 ರಲ್ಲಿ ಅರ್ಜುನ ಪ್ರಶಸ್ತಿ,2019 ರಲ್ಲಿ ಪದ್ಮಶ್ರೀ ನೀಡಿ ಗೌರವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.