ಭಾರತ “ಎ’ ತಂಡಕ್ಕೆ 4ನೇ ಗೆಲುವು
Team Udayavani, Jan 30, 2019, 4:37 AM IST
ತಿರುವನಂತಪುರ: ಈಗಾಗಲೇ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಏಕದಿನ ಸರಣಿಯನ್ನು ಜಯಿಸಿರುವ ಭಾರತ “ಎ’ ತಂಡ ಮಂಗಳವಾರ ಇಲ್ಲಿ ನಡೆದ 4ನೇ ಏಕದಿನ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತ “ಎ’ ತಂಡ 6 ವಿಕೆಟ್‌ಗಳಿಂದ ಜಯ ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಸರಣಿಯ 5ನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಇಂಗ್ಲೆಂಡ್ ತಂಡವನ್ನು ವೈಟ್‌ವಾಶ್ ಮಾಡುವ ವಿಶ್ವಾಸದಲ್ಲಿ ಭಾರತ ಇದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಲಯನ್ಸ್ 8 ವಿಕೆಟ್ ಕಳೆದುಕೊಂಡು 221 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಬಾರಿಸಿ ಜಯಭೇರಿ ಬಾರಿಸಿದೆ.
ಶಾದೂಲ್ ದಾಳಿಗೆ ಬೆಚ್ಚಿದ ಲಯನ್ಸ್
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ಶಾದೂìಲ್ ಠಾಕೂರ್ ಮಾರಕವಾಗಿ ಎರಗಿದರು. ಆರಂಭಿಕಕಾರರನ್ನು ಬೇಗನೇ ಪೆವಿಲಿಯನ್‌ಗೆ ಅಟ್ಟುವಲ್ಲಿ ಶಾದೂìಲ್ ಯಶಸ್ವಿಯಾದರು. ಅವರು ತನ್ನ 10 ಓವರ್‌ಗಳ ದಾಳಿಯಲ್ಲಿ 49 ರನ್ನಿಗೆ 4 ವಿಕೆಟ್ ಕಿತ್ತು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.
ಆಸರೆಯಾದ ಪಂತ್
222 ರನ್‌ಗಳ ಗುರಿ ಪಡೆದ ಭಾರತ 8 ರನ್ ಗಳಿಸುವಲ್ಲಿ ಮೊದಲ ವಿಕೆಟನ್ನು ಕಳೆದುಕೊಂಡಿತ್ತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರು. ಆದರೆ ಕೆಎಲ್ ರಾಹುಲ್ (42) ಮತ್ತು ಭುಯಿ (35) ಅವರ ಉತ್ತಮ ಆಟದಿಂದಾಗಿ ಭಾರತ ಚೇತರಿಸಿತು. 5ನೇ ವಿಕೆಟಿಗೆ ಕಣಕ್ಕಿಳಿದ ರಿಷಬ್ ಪಂತ್ ಅಜೇಯ 73 ರನ್ ಹಾಗೂ ದೀಪಕ್ ಹೂಡ ಅವರ 47 ರನ್‌ಗಳ ನೆರವಿನಿಂದ ಭಾರತ ಇನ್ನೂ 21 ಎಸೆತ ಬಾಕಿ ಇರುವಾಗಲೇ 222 ರನ್ ಹೊಡೆದು ಗೆಲುವು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ ಲಯನ್ಸ್-8 ವಿಕೆಟಿಗೆ 221 (ಸ್ಯಾಮ್ ಬಿಲ್ಲಿಂಗ್ಸ್ 24, ಪೋಪ್ 64, ಸ್ಟೀವನ್ ಮುಲ್ಲಾನಿ ಔಟಾಗದೆ 58 , ಶಾದೂìಲ್ ಠಾಕೂರ್ 49ಕ್ಕೆ 4, ದೀಪಕ್ ಚಹರ್ 38ಕ್ಕೆ 2)
ಭಾರತ “ಎ’-46.3 ಓವರ್‌ಗಳಲ್ಲಿ 4 ವಿಕೆಟಿಗೆ 222 (ರಾಹುಲ್ 42, ರಿಷಬ್ ಪಂತ್ ಔಟಾಗದೆ 73, ದೀಪಕ್ ಹೂಡ ಔಟಾಗದೆ 47, ಜಾಕ್ಸ್ 35ಕ್ಕೆ 2). ಪಂದ್ಯ ಶ್ರೇಷ್ಠ: ರಿಷಬ್ ಪಂತ್.
ಪ್ರೇಕ್ಷಕರ ಮೇಲೆ ಜೇನುನೊಣಗಳ ದಾಳಿ
ಇಂಗ್ಲೆಂಡ್ ಲಯನ್ಸ್ ಆಟದ ವೇಳೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರ ಮೇಲೆ ಜೇನುನೊಣ ದಾಳಿ ನಡೆಸಿದೆ. ದಾಳಿಯಿಂದ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾರಣದಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಯಾವುದೇ ಆಟಗಾರರ ಮೇಲೆ ಜೇನುನೊಣಗಳು ದಾಳಿ ನಡೆಸಿಲ್ಲ. ಆದರೆ 15 ನಿಮಿಷಗಳ ಕಾಲ ಆಟ ನಿಂತಿತು. ಕ್ರೀಡಾಂಗಣದಿಂದ ಜೇನುನೊಣಗಳನ್ನು ತೆರವುಗೊಳಿಸಿದ ಬಳಿಕ ಪಂದ್ಯ ಪುನರಾರಂಭಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.