ಐಪಿಎಲ್‌ ತಂಡದಲ್ಲಿ 5 ವಿದೇಶಿಯರಿಗೆ ಅವಕಾಶ?

Team Udayavani, Nov 13, 2020, 11:43 PM IST

IPL

ಹೊಸದಿಲ್ಲಿ: ಮುಂದಿನ ವರ್ಷದ ಐಪಿಎಲ್‌ ಪಂದ್ಯಾವಳಿಯಲ್ಲಿ ತಂಡಗಳ ಸಂಖ್ಯೆಯನ್ನು 9ಕ್ಕೆ ಏರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ದೀಪಾವಳಿ ಮುಗಿದ ಬೆನ್ನಲ್ಲೇ ಬಿಸಿಸಿಐ ಇದಕ್ಕೆ ಟೆಂಡರ್‌ ಕರೆಯಲಿದೆ. ಎಂದಿನಂತೆ ಎಪ್ರಿಲ್‌-ಮೇ ತಿಂಗಳಲ್ಲೇ ಐಪಿಎಲ್‌ ನಡೆಯುವುದಾದರೆ ಸಮಯದ ಅಭಾವದಿಂದ ಎಲ್ಲ ಪ್ರಕ್ರಿ ಯೆಗಳೂ ಬಿರುಸುಗೊಳ್ಳಬೇಕಾದುದು ಅನಿವಾರ್ಯ.

ಇದೇ ವೇಳೆ ಐಪಿಎಲ್‌ನಲ್ಲಿ ಸಂಭ ವಿಸಬೇಕಾದ ಮತ್ತೂಂದು ಮಹತ್ವದ ಬದಲಾವಣೆ ಕುರಿತೂ ಚರ್ಚೆ ಆರಂಭ ಗೊಂಡಿದೆ. ಇದೆಂದರೆ, ಆಡುವ ಬಳಗದಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆಯನ್ನು ಹೆಚ್ಚಿಸುವುದು. 2008ರಿಂದಲೂ ಈ ಸಂಖ್ಯೆ ಕೇವಲ ನಾಲ್ಕೇ ಆಟಗಾರರಿಗೆ ಸೀಮಿತಗೊಂಡಿದೆ. ಇದನ್ನು ಐದಕ್ಕೆ ಏರಿಸಬಾರದೇಕೆ ಎಂಬುದು ಈಗಿನ ಪ್ರಶ್ನೆ.

ಬದಲಾವಣೆಗೆ ಇದು ಸಕಾಲ
ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಆಗ ವಿದೇಶಿ ಕ್ರಿಕೆಟಿಗರ ಸಂಖ್ಯೆಯನ್ನು ಐದಕ್ಕೆ ಏರಿಸುವುದರಿಂದ ನಷ್ಟವಿಲ್ಲ ಎಂಬುದೊಂದು ಲೆಕ್ಕಾಚಾರ. ಇದರಿಂದ ವಿದೇಶಿ ಕ್ರಿಕೆಟಿಗರು ಬೆಂಚ್‌ ಬಿಸಿ ಮಾಡುವುದು ತಪ್ಪುತ್ತದೆ, ತಂಡ ಹಾಗೂ ಪಂದ್ಯದ ಗುಣಮಟ್ಟ ಕೂಡ ಉತ್ತಮ ಉತ್ತಮಗೊಳ್ಳುತ್ತದೆ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಅನಿಸಿಕೆ. ಬದಲಾ ವಣೆಗೆ ಇದು ಸಕಾಲ ಎಂಬುದು ಅವರ ಅಭಿಪ್ರಾಯ.

“ಪ್ರತೀ ವರ್ಷವೂ ಉತ್ತಮ ದರ್ಜೆಯ ವಿದೇಶಿ ಕ್ರಿಕೆಟಿಗರನೇಕರು ಸರಿಯಾದ ಅವಕಾಶ ಪಡೆಯದೆ ನಿರಾಸೆಗೊಳ ಗಾಗುತ್ತಾರೆ. ವಿದೇಶಿ ಕ್ರಿಕೆಟಿಗರ ಸಂಖ್ಯೆ ಯನ್ನು ಐದಕ್ಕೆ ಹೆಚ್ಚಿಸಿದರೆ ಆಗ ತಂಡದ ಗುಣಮಟ್ಟ ಹೆಚ್ಚುತ್ತದೆ. ಉತ್ತಮ ಸಮ ತೋಲನದೊಂದಿಗೆ ಪೈಪೋಟಿಯೂ ತೀವ್ರಗೊಳ್ಳುತ್ತದೆ’ ಎಂಬುದು ಹೆಸರು ಹೇಳಬಯಸದ ಬಿಸಿಸಿಐ ಅಧಿಕಾರಿ ಯೊಬ್ಬರ ಅನಿಸಿಕೆ.

ಉದಾಹರಣೆಗೆ ಸನ್‌ರೈಸರ್…
ಪಂದ್ಯಾವಳಿ ಪ್ಲೇ ಆಫ್ ಸುತ್ತು ಪ್ರವೇಶಿಸಿದಾಗ ಇಂಥ ನಿರ್ಧಾರಗಳು ಹೆಚ್ಚು ಫ‌ಲಪ್ರದಗೊಳ್ಳುತ್ತವೆ. ಇಲ್ಲವಾದರೆ ತಂಡ ಸೂಕ್ತ ಕಾಂಬಿನೇಶನ್‌ ಇಲ್ಲದೇ ಹೊರಬೀಳಬೇಕಾದ ಸಂಕಟಕ್ಕೆ ಸಿಲುಕ ಬೇಕಾಗುತ್ತದೆ. ಈ ಸೀಸನ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ಇಂಥದೇ ಸ್ಥಿತಿ ಅನುಭವಿಸಿದೆ.

ಜಾನಿ ಬೇರ್‌ಸ್ಟೊ ಅವರನ್ನು ಕೈಬಿಟ್ಟು ಜಾಸನ್‌ ಹೋಲ್ಡರ್‌ ಅವರನ್ನು ಸೇರಿಸಿಕೊಂಡ ಬಳಿಕ ಹೈದರಾಬಾದ್‌ ಅಮೋಘ ಪ್ರದರ್ಶನ ನೀಡಿದ್ದು ನಿಜ. ಸಾಹಾ ಓಪನಿಂಗ್‌ನಲ್ಲಿ ಕ್ಲಿಕ್‌ ಆದದ್ದೂ ಇದಕ್ಕೊಂದು ಕಾರಣ. ಆದರೆ ಸಾಹಾ ಗಾಯಾಳಾಗಿ ಹೊರಬಿದ್ದಾಗ ಕೀಪರ್‌ ಬೇರ್‌ಸ್ಟೊ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆಗಲೇ ಅಲ್ಲಿ ನಾಲ್ಕು ಮಂದಿ ಗಟ್ಟಿ ವಿದೇಶಿ ಕ್ರಿಕೆಟಿಗರಿದ್ದರು-ವಾರ್ನರ್‌, ವಿಲಿಯಮ್ಸನ್‌, ಹೋಲ್ಡರ್‌ ಮತ್ತು ರಶೀದ್‌ ಖಾನ್‌. ಇವರ್ಯಾರನ್ನೂ ಕೈಬಿಡು ವಂತಿರಲಿಲ್ಲ. ಅಕಸ್ಮಾತ್‌ ಆಗ ಐವರು ವಿದೇಶಿಯರಿಗೆ ಅವಕಾಶವಿದ್ದರೆ ಗೋಸ್ವಾಮಿ ಬದಲು ಬೇರ್‌ಸ್ಟೊ ಬರುತ್ತಿದ್ದರು. ತಂಡ ಇನ್ನಷ್ಟು ಬಲಿಷ್ಠಗೊಳ್ಳುತ್ತಿತ್ತು.

ದ್ರಾವಿಡ್‌ ಸ್ವಾಗತ
ಐಪಿಎಲ್‌ ತಂಡಗಳ ಹೆಚ್ಚಳಕ್ಕೆ ಮಾಜಿ ಕ್ರಿಕೆಟಿಗ, ಎನ್‌ಸಿಎ ನಿರ್ದೇಶಕ ರಾಹುಲ್‌ ದ್ರಾವಿಡ್‌ ತಮ್ಮ ಬೆಂಬಲ ಸೂಚಿಸಿದ್ದಾರೆ. “ನಮ್ಮಲ್ಲೀಗ ಕ್ರಿಕೆಟ್‌ ಪ್ರತಿಭೆಗಳ ಮಹಾಪೂರವೇ ಇದೆ. ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಇವರಿಗೆಲ್ಲ ಅವಕಾಶ ಸಿಗಲಿದೆ. ಇದರಿಂದ ಇವರ ಬೆಳವಣಿಗೆಯೂ ಸಾಧ್ಯವಾಗುತ್ತದೆ’ ಎಂದು ದ್ರಾವಿಡ್‌ ಹೇಳಿದರು.
ರಾಜಸ್ಥಾನ್‌ ರಾಯಲ್ಸ್‌ ತಂಡದ ಸಹ ಮಾಲಕ ಮನೋಜ್‌ ಬಡಾಲೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರು ಬರೆದ “ಎ ನ್ಯೂ ಇನ್ನಿಂಗ್ಸ್‌’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ದ್ರಾವಿಡ್‌ ಮಾತಾಡುತ್ತಿದ್ದರು.

“ಆರಂಭದಲ್ಲಿ ಯುವ ಆಟಗಾರರು ಕೇವಲ ರಾಜ್ಯ ಕ್ರಿಕೆಟ್‌ ಮಂಡಳಿಗಳನ್ನಷ್ಟೇ ನಂಬಿ ಕೂರಬೇಕಿತ್ತು. ಇಲ್ಲಿ ಆಯ್ಕೆಯಾದರಷ್ಟೇ ರಣಜಿ ಅಥವಾ ಇನ್ನಿತರ ದೇಶಿ ಪಂದ್ಯಾವಳಿಗಳಲ್ಲಿ ಆಡಬಹುದಿತ್ತು. ಆದರೆ ಐಪಿಎಲ್‌ನಿಂದ ಬಹಳಷ್ಟು ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಯಿತು. ಇದರಿಂದ ಭಾರತಕ್ಕೂ ಲಾಭ ವಾಯಿತು’ ಎಂದರು.

ಟಾಪ್ ನ್ಯೂಸ್

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.