Bengaluru Chinnaswamy stadium; ಟೆಸ್ಟ್ ಆತಿಥ್ಯಕ್ಕೆ 50 ವರ್ಷ; ಟೆಸ್ಟ್ ಸಂಖ್ಯೆ 25
Team Udayavani, Oct 16, 2024, 7:20 AM IST
ಬೆಂಗಳೂರು: ಭಾರತ- ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯದ ವೇಳೆ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಅವಳಿ ಸಂಭ್ರಮ ದಲ್ಲಿ ಮಿಂದೇಳಲಿದೆ. ಮೊದಲನೆಯದಾಗಿ ಇಲ್ಲಿನ ಟೆಸ್ಟ್ ಆತಿಥ್ಯಕ್ಕೆ 50 ವರ್ಷ ತುಂಬಲಿದೆ. ಹಾಗೆಯೇ ಇದು ಈ ಅಂಗಳದಲ್ಲಿ ನಡೆಯಲಿರುವ 25ನೇ ಟೆಸ್ಟ್ ಪಂದ್ಯವಾಗಿದೆ.
1974ರ ನವೆಂಬರ್ 22-27ರಂದು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಗಿತ್ತು. ವಿಂಡೀಸ್ ಕ್ರಿಕೆಟಿನ ಮಹಾನ್ ಬ್ಯಾಟರ್‌ಗಳಾಗಿ ರೂಪುಗೊಂಡ ಗಾರ್ಡನ್ ಗ್ರೀನಿಜ್ ಮತ್ತು ವಿವಿಯನ್ ರಿಚರ್ಡ್ಸ್ ಇದೇ ಪಂದ್ಯದ ಮೂಲಕ ಟೆಸ್ಟ್ ಪದಾರ್ಪಣೆ ಮಾಡಿದ್ದು ಬೆಂಗಳೂರು ಪಾಲಿಗೊಂದು ಹೆಮ್ಮೆ. ಆದರೆ ಮನ್ಸೂರ್ ಅಲಿ ಖಾನ್ ಪಟೌಡಿ ನೇತೃತ್ವದ ಭಾರತದ ಪಾಲಿಗೆ ಇದೊಂದು ಕಹಿ ನೆನಪಿನ ಪಂದ್ಯವಾಗಿತ್ತು. ಕ್ಲೈವ್ ಲಾಯ್ಡ ಪಡೆಯ ವಿರುದ್ಧ 267 ರನ್ನುಗಳ ಭಾರೀ ಸೋಲು ಎದುರಾಗಿತ್ತು!
ಭಾರತದ 5ನೇ ಮೈದಾನ
ಚಿನ್ನಸ್ವಾಮಿ ಸ್ಟೇಡಿಯಂ 25 ಟೆಸ್ಟ್ ಪಂದ್ಯಗಳ ಆತಿಥ್ಯ ವಹಿಸುತ್ತಿರುವ ಭಾರತದ 5ನೇ ಮೈದಾನ. ದಾಖಲೆ ಕೋಲ್ಕತಾ ಈಡನ್ ಗಾರ್ಡನ್ಸ್ ಹೆಸರಲ್ಲಿದೆ. ಇಲ್ಲಿ ಆಡಲಾದ ಟೆಸ್ಟ್ ಪಂದ್ಯಗಳ ಸಂಖ್ಯೆ 42. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಮತ್ತು ಡೆಲ್ಲಿಯ ಫಿರೋಜ್ ಶಾ ಕೋಟ್ಲಾದಲ್ಲಿ (ಈಗ ಅರುಣ್ ಜೇಟಿÉ ಸ್ಟೇಡಿಯಂ) ತಲಾ 35, ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ 26 ಟೆಸ್ಟ್‌ಗಳನ್ನು ಆಡಲಾಗಿದೆ.
ಒಂದೇ ನಗರದಲ್ಲಿ ಅತೀ ಹೆಚ್ಚು ಟೆಸ್ಟ್‌ಗಳನ್ನಾಡಿಸಿದ ಭಾರತೀಯ ದಾಖಲೆ ಮುಂಬಯಿಗೆ ಸಲ್ಲುತ್ತದೆ. ವಾಂಖೇಡೆಯಲ್ಲಿ 26 ಹಾಗೂ ಬ್ರೆಬೋರ್ನ್ನಲ್ಲಿ 18, ಹೀಗೆ 44 ಟೆಸ್ಟ್‌ಗಳಿಗೆ ಮುಂಬಯಿ ಆತಿಥ್ಯ ವಹಿಸಿದೆ.
ಲಾರ್ಡ್ಸ್ ವಿಶ್ವದಾಖಲೆ
ವಿಶ್ವದಲ್ಲೇ ಅತ್ಯಧಿಕ ಟೆಸ್ಟ್ ಪಂದ್ಯಗಳ ಆತಿಥ್ಯ ವಹಿಸಿದ ದಾಖಲೆ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದ ಹೆಸರಲ್ಲಿದೆ. ಇಲ್ಲಿ ಆಡಲಾದ ಟೆಸ್ಟ್ ಪಂದ್ಯಗಳ ಸಂಖ್ಯೆ 147. “ಟೆಸ್ಟ್ ಶತಕ’ ಬಾರಿಸಿದ ವಿಶ್ವದ ಉಳಿದ 3 ಕ್ರೀಡಾಂಗಣಗಳೆಂದರೆ ಮೆಲ್ಬರ್ನ್ (116), ಸಿಡ್ನಿ (112) ಮತ್ತು ಓವಲ್ (107).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leh; ಐಸ್ ಹಾಕಿ ಲೀಗ್ ದ್ವಿತೀಯ ಆವೃತ್ತಿಯ ಟ್ರೋಫಿ- ಜೆರ್ಸಿ ಅನಾವರಣ
NZvsENG: 147 ವರ್ಷಗಳಲ್ಲೇ ಮೊದಲ ಬಾರಿ..; ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್
SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
MUST WATCH
ಹೊಸ ಸೇರ್ಪಡೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.