ಹಿಮಾ ದಾಸ್ಗೆ 5ನೇ ಚಿನ್ನ
Team Udayavani, Jul 22, 2019, 5:30 AM IST
ಹೊಸದಿಲ್ಲಿ: ಭಾರತೀಯ ಸ್ಪ್ರಿಂಟರ್ ಹಿಮಾ ದಾಸ್ ಜುಲೈ ತಿಂಗಳಲ್ಲಿ ಪ್ರಚಂಡ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. 20 ದಿನಗಳ ಅಂತರದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದನೇ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.
ಜೆಕ್ ಗಣರಾಜ್ಯದಲ್ಲಿ ನಡೆದ ಆ್ಯತ್ಲೆಟಿಕ್ಸ್ನಲ್ಲಿ ತನ್ನ ನೆಚ್ಚಿನ 400 ಮೀ. ಓಟದಲ್ಲಿ ಪಾಲ್ಗೊಂಡ ಹಿಮಾ ದಾಸ್ ಈ ಋತುವಿನ ಶ್ರೇಷ್ಠ ಸಮಯದೊಂದಿಗೆ (52.09 ಸೆ.) ಚಿನ್ನ ಗೆದ್ದರು. ಆದರೆ ಸ್ವಲ್ಪದರಲ್ಲಿ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ (51.80 ಸೆ.) ಗಳಿಸುವ ಅವಕಾಶ ಕಳೆದುಕೊಂಡರು. ಕಳೆದ ಜಕಾರ್ತಾ ಏಶ್ಯನ್ ಗೇಮ್ಸ್ನಲ್ಲಿ ಹಿಮಾ ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ (50.79 ಸೆ.) ನೀಡಿದ್ದರು.
ಯುರೋಪ್ನಲ್ಲಿ ಜು. 2ರಂದು ನಡೆದ 200 ಮೀ. ರೇಸ್ನಲ್ಲಿ ಪಾಲ್ಗೊಂಡಿರುವುದು ಹಿಮಾ ದಾಸ್ ಅವರ ಚೊಚ್ಚಲ ಸ್ಪರ್ಧೆಯಾಗಿತ್ತು. ಆಬಳಿಕ ಜು. 7, 13 ಮತ್ತು 17ರಂದು ನಡೆದ ಸ್ಪರ್ಧೆಯ 200 ಮೀ.ನಲ್ಲೂ ಚಿನ್ನ ಗೆದ್ದು ಸಾಹಸ ಮೆರೆದಿದ್ದರು.
400 ಮೀ.ನಲ್ಲಿ ಮೊದಲ ಬಂಗಾರ
“ದಿಂಗ್ ಎಕ್ಸ್ಪ್ರೆಸ್’ ಖ್ಯಾತಿಯ ಅಸ್ಸಾಂನ 19ರ ಹರೆಯದ ಹಿಮಾ ದಾಸ್ 400 ಮೀ.ನಲ್ಲಿ ಇದೇ ಮೊದಲ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅವರು ಕಳೆದ ಎಪ್ರಿಲ್ನಲ್ಲಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಏಶ್ಯನ್ ಆ್ಯತ್ಲೆಟಿಕ್ ಚಾಂಪಿಯನ್ಶಿಪ್ನ 400 ಮೀ. ಸ್ಪರ್ಧೆಯಲ್ಲಿ ಗುರಿ ತಲುಪಲು ಒದ್ದಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.