ರನ್ ನೀಡದೆ 6 ವಿಕೆಟ್ ಕಿತ್ತ ನೇಪಾಲಿ ಬೌಲರ್!
ಮಾಲ್ಡೀವ್ಸ್ ವಿರುದ್ಧದ ವನಿತಾ ಟಿ20 ಪಂದ್ಯದಲ್ಲಿ ಅಂಜಲಿ ಚಂದ್ ಸಾಧನೆ
Team Udayavani, Dec 2, 2019, 11:42 PM IST
ಪೋಖರಾ (ನೇಪಾಲ): ವಿಶ್ವ ಮಟ್ಟದಲ್ಲಿ ನೇಪಾಲ ಇನ್ನೂ “ಕ್ರಿಕೆಟ್ ಶಿಶು’. ಆದರೆ ಇಲ್ಲಿನ ವನಿತಾ ತಂಡದ ಬೌಲರ್ ಒಬ್ಬರು ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ಸಾಧನೆಯ ಮೂಲಕ ಸುದ್ದಿಯಾಗಿದ್ದಾರೆ.
ಪೋಖರಾದಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಒಂದೂ ರನ್ ನೀಡದೆ 6 ವಿಕೆಟ್ ಹಾರಿಸಿದ್ದಾರೆ! ಈ ಬೌಲರ್ ಹೆಸರು ಅಂಜಲಿ ಚಂದ್.
ಸೋಮವಾರ ನಡೆದ “ಸೌತ್ ಏಶ್ಯನ್ ಗೇಮ್ಸ್ ಕ್ರಿಕೆಟ್ ಚಾಂಪಿಯನ್‌ಶಿಪ್’ ಸರಣಿಯ ನೇಪಾಲ ವಿರುದ್ಧದ ಪಂದ್ಯದಲ್ಲಿ ಮಾಲ್ಡೀವ್ಸ್ 11 ಓವರ್‌ಗಳೊಳಗೆ 16 ರನ್ನಿಗೆ ಆಲೌಟ್ ಆಯಿತು. ಆತಿಥೇಯ ನೇಪಾಲ ಇದನ್ನು ಕೇವಲ 5 ಎಸೆತಗಳಲ್ಲಿ ಬೆನ್ನಟ್ಟಿ ವಿಜಯಿಯಾಯಿತು.
ಮಾಲ್ಡೀವ್ಸ್ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಜಲಿ ಚಂದ್ 7ನೇ ಓವರಿನಲ್ಲಿ 3 ವಿಕೆಟ್ ಹಾಗೂ 9ನೇ ಓವರಿನಲ್ಲಿ 2 ವಿಕೆಟ್ ಕಿತ್ತರು. ಒಟ್ಟು 2.1 ಓವರ್ ಎಸೆದ ಅಂಜಲಿ ಒಂದೂ ರನ್ ನೀಡದೆ 6 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಇದು ವನಿತಾ ಟಿ20 ಕ್ರಿಕೆಟ್‌ನ ನೂತನ ದಾಖಲೆಯಾಗಿದೆ. ಇದೇ ವರ್ಷ ಮಾಲ್ಡೀವ್ಸ್‌ನ ಮಾಸ್ ಎಲಿಸಾ ಚೀನ ವಿರುದ್ಧ 3 ರನ್ನಿಗೆ 6 ವಿಕೆಟ್ ಉರುಳಿಸಿದ ದಾಖಲೆ ಪತನಗೊಂಡಿತು.
ಚಹರ್‌ಗೂ ಮಿಗಿಲಾದ ಸಾಧನೆ
ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನೊಂದಿಗೆ ಸಮೀಕರಿಸಿದಾಗಲೂ ಅಂಜಲಿ ಸಾಧನೆ ವಿಶ್ವದಾಖಲೆ ಎನಿಸಿಕೊಳ್ಳುತ್ತದೆ. ನ. 10ರಂದು ನಾಗ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ದೀಪಕ್ ಚಹರ್ 3.2 ಓವರ್‌ಗಳಲ್ಲಿ 7 ರನ್ನಿತ್ತು 6 ವಿಕೆಟ್ ಹಾರಿಸಿದ್ದು, ಇದು ಪುರುಷರ ಟಿ20 ಪಂದ್ಯದ ದಾಖಲೆಯಾಗಿದೆ. ಇದಕ್ಕೂ ಮೊದಲು ಶ್ರೀಲಂಕಾದ ಅಜಂತ ಮೆಂಡಿಸ್ 8 ರನ್ನಿಗೆ 6 ವಿಕೆಟ್ ಉರುಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.