ಖೇಲ್ ರತ್ನ ಪ್ರಶಸ್ತಿ ರೇಸ್‌ನಲ್ಲಿ 7 ಕಲಿಗಳು
ರೋಹಿತ್, ನೀರಜ್ ಪ್ರಮುಖರು ; ಯಾರಿಗೆ ಉನ್ನತ ಕ್ರೀಡಾ ಪ್ರಶಸಿ?
Team Udayavani, Jun 2, 2020, 10:57 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದಿಂದ ಕ್ರೀಡಾ ಕ್ಷೇತ್ರದ ಅನನ್ಯ ಸಾಧಕರಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗೆ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಈ ಸಲ ಅರ್ಜಿ ಆಹ್ವಾನಿಸುವುದು ಸ್ವಲ್ಪ ವಿಳಂಬವಾಗಿದ್ದರೂ ಇದೀಗ ಪ್ರಕ್ರಿಯೆ ಚುರುಕಿನ ಆರಂಭ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳಿಗೆ ದೇಶದ ವಿವಿಧ ಕ್ರೀಡಾ ಸಂಸ್ಥೆಗಳಿಂದ ಕ್ರೀಡಾ ತಾರೆಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಪ್ರತಿಷ್ಠಿತ ಖೇಲ್ ರತ್ನಕ್ಕೆ ಕ್ರಿಕೆಟಿಗ ರೋಹಿತ್ ಶರ್ಮ ಸೇರಿದಂತೆ ಒಟ್ಟಾರೆ 7 ಮಂದಿ ಹೆಸರನ್ನು ಶಿಫಾರಸುಗೊಳಿಸಲಾಗಿದೆ. ಈ ಪೈಕಿ ಯಾರಿಗೆ ಖೇಲ್ ರತ್ನ ಒಲಿಯುವುದು ಎನ್ನುವುದು ಈಗ ಕುತೂಹಲವಾಗಿದೆ.
ಮಾನದಂಡವೇನು?
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕ್ರೀಡಾ ಸಾಧಕರಿಗೆ ಕೊಡಮಾಡುವ ಅತ್ಯುನ್ನತ ಗೌರವ, ಕಳೆದ 4 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕೂಟಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇರೆಗೆ ಕೇಂದ್ರ ಸರ್ಕಾರದ ತಜ್ಞರ ಸಮಿತಿ ಪ್ರಶಸ್ತಿಗೆ ಅರ್ಹ ಕ್ರೀಡಾಪಟುವನ್ನು ಆಯ್ಕೆ ಮಾಡಲಿದೆ. ಅರ್ಜುನ ಪ್ರಶಸ್ತಿಯ ಆಯ್ಕೆಗೂ ನಾಲ್ಕು ವರ್ಷಗಳ ಹಿಂದಿನ ಕ್ರೀಡಾ ಸಾಧನೆ ಪರಿಗಣನೆಯಾಗುತ್ತದೆ, ಜತೆಗೆ ನಾಯಕತ್ವ ಕೌಶಲ್ಯ, ಶಿಸ್ತು ಹಾಗೂ ಕ್ರೀಡಾ ಸ್ಫೂರ್ತಿಯನ್ನೂ ಪರಿಗಣಿಸಲಾಗುತ್ತದೆ.
ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡವರು
● ಬಾಕ್ಸಿಂಗ್: ಮನೀಷ್ ಕೌಶಿಕ್, ಲೌಲೀನಾ, ಸಿಮ್ರಾನ್‌ಜಿತ್
● ಅಥ್ಲೆಟಿಕ್ಸ್: ಅರ್ಪಿಂದರ್, ದ್ಯುತಿ ಚಂದ್
● ಶೂಟಿಂಗ್: ಸೌರಭ್ ಚೌಧರಿ, ಮನು ಭಾಕರ್, ಅಭಿಷೇಕ್ ವರ್ಮ
● ಲಾನ್ ಟೆನಿಸ್: ದಿವಿಜ್ ಶರಣ್, ಅಂಕಿತಾ ರೈನಾ
ಖೇಲ್ ರತ್ನಕ್ಕೆ ಶಿಫಾರಸುಗೊಂಡವರ ಪಟ್ಟಿ
?ರೋಹಿತ್ ಶರ್ಮ (ಕ್ರಿಕೆಟಿಗ): ಹಾಲಿ ಭಾರತ ತಂಡದ ಉಪನಾಯಕ, ಕಳೆದ ವರ್ಷ ವಿಶ್ವಕಪ್ ಏಕದಿನ ಕೂಟದಲ್ಲಿ ಒಟ್ಟಾರೆ 9 ಪಂದ್ಯಗಳಿಂದ 648 ರನ್ ಸಿಡಿಸಿದ್ದರು. 81ರ ಸರಾಸರಿಯಲ್ಲಿ ರನ್‌ಗಳಿಸಿದ್ದರು. 5 ಶತಕ, 1 ಅರ್ಧಶತಕ ಬಾರಿಸಿದ್ದರು. ಒಟ್ಟಾರೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 5 ಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎನ್ನುವ ದಾಖಲೆಗೆ ರೋಹಿತ್ ಪಾತ್ರರಾಗಿದ್ದರು.
?ನೀರಜ್ ಚೋಪ್ರಾ (ಜಾವೆಲಿನ್): ನೀರಜ್ ಚೋಪ್ರಾ ಭಾರತದ ಅಪ್ರತಿಮ ಜಾವೆಲಿನ್ ತಾರೆ. ಹಲವಾರು ಕೂಟಗಳಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದಾರೆ, ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭರವಸೆಯಾಗಿದ್ದಾರೆ. 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಅದೇ ವರ್ಷ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲೂ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು.
?ವಿನೇಶ್ ಪೊಗಟ್ (ಕುಸ್ತಿ): ಹರ್ಯಾಣದ ವೀರ ವನಿತೆ, 48/50/53 ಕೆ.ಜಿ ವಿಭಾಗಗಳ ಕುಸ್ತಿ ಸ್ಪರ್ಧೆಯಲ್ಲಿ ಪ್ರಚಂಡ ಸಾಧಕಿ, 2018 ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 2019 ವಿಶ್ವ ಚಾಂಪಿಯನ್‌ಶಿಪ್‌ನ 53 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮಣಿಕಾ ಬಾತ್ರಾ (ಟಿಟಿ): ಟೇಬಲ್ ಟೆನಿಸ್ ನಕ್ಷತ್ರ ಮಣಿಕಾ ಬಾತ್ರಾ, 2018 ಕಾಮನ್ವೆಲ್ತ್ ಗೇಮ್ಸ್ ಕ್ರೀಡಾ ಕೂಟದ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ, ಅದೇ ಕೂಟದ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
?ವಿಕಾಸ್ ಕೃಷ್ಣನ್ (ಬಾಕ್ಸಿಂಗ್): ಹರ್ಯಾಣದ ಪಂಚ್ ಮಾಸ್ಟರ್ ಬಾಕ್ಸರ್ ವಿಕಾಸ್ ಕೃಷ್ಣನ್ ಭಾರತದ ಹೆಮ್ಮೆ. 2018ರ ಕಾಮನ್ವೆಲ್ತ್ ಗೇಮ್ಸ್‌ನ ಮಿಡಲ್‌ವೇಟ್ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದರು. ಅದೇ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್ ಕೂಟದ ಮಿಡಲ್‌ವೇಟ್ ವಿಭಾಗದಲ್ಲಿ ಕಂಚು ಜಯಿಸಿದ್ದರು.
?ಅಮಿತ್ ಪಾಂಗಲ್ (ಕುಸ್ತಿ): 2019ರಲ್ಲಿ ವಿಶ್ವ ಚಾಂಪಿಯನ್ ಶಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಅಮಿತ್ ಪಾಂಗಲ್ ಗೆದ್ದುಕೊಂಡಿದ್ದರು, ಅದೇ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಫ್ಲೈವೇಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಅಮಿತ್ ಜಯಿಸಿದ್ದರು. 52 ಕೆ.ಜಿ ವಿಭಾಗದಲ್ಲಿ ಭವಿಷ್ಯದಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲಬಲ್ಲ ಸಾಮರ್ಥ್ಯ ಅಮಿತ್‌ರಲ್ಲಿ ಇದೆ.
?ಅಂಜುಮ್ ಮೌದ್ಗಿಲ್: ಚಂಡೀಗಢದ 26 ವರ್ಷದ ಮಹಿಳಾ ಶೂಟರ್ ಅಂಜುಮ್ ಮೌದ್ಗಿಲ್ 2018 ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಮೀ. ಏರ್ ರೈಫಲ್ ಹಾಗೂ 10 ಮೀ. ಏರ್ ರೈಫಲ್ ತಂಡ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಪದಕ ಜಯಿಸಿದ್ದರು. 2018 ಕಾಮನ್ವೆಲ್ತ್ ಗೇಮ್ಸ್‌ನ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.