ಪಿವಿ ಸಿಂಧು ಜತೆ ಮದುವೆ ಮಾಡಿಸಿ, ಇಲ್ಲದಿದ್ರೆ ಕಿಡ್ನಾಪ್; ಡಿಸಿಗೆ ಅಜ್ಜನ ಮನವಿ!
Team Udayavani, Sep 17, 2019, 3:28 PM IST
ಚೆನ್ನೈ: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಜತೆ ತಾನು ಮದುವೆಯಾಗಲು ವ್ಯವಸ್ಥೆ ಮಾಡಿಕೊಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಆಕೆಯನ್ನು ಅಪಹರಿಸಿ ಮದುವೆಯಾಗುತ್ತೇನೆ…ಇದು 70 ವರ್ಷದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗೆ ಅಧಿಕೃತವಾಗಿ ಸಲ್ಲಿಸಿದ ಮನವಿ!
ನಿಮಗೆ ಈ ಸುದ್ದಿ ಓದಿ ಅಚ್ಚರಿಯಾಗಬಹುದು ಇಲ್ಲವೇ ಜೋಕ್ ಎನಿಸಬಹುದು. ಆದರೆ ತಮಿಳುನಾಡು ಜಿಲ್ಲೆಯ ರಾಮನಾಥಪುರಂನ ನಿವಾಸಿ 70 ವರ್ಷದ ಮಲಯ್ಯಸಾಮಿ ಎಂಬಾತ ಪಿವಿ ಸಿಂಧುವನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ವ್ಯಕ್ತಿ!
ತಾನು ಪಿವಿ ಸಿಂಧುವನ್ನು ಮದುವೆಯಾಗಬೇಕು. ಅದಕ್ಕೆ ಬೇಕಾದ ಅನುಕೂಲ ಕಲ್ಪಿಸಿಕೊಡಬೇಕು. ಒಂದು ವೇಳೆ ಮದುವೆಯಾಗಲು ಅಗತ್ಯ ನೆರವು ಕೊಡದಿದ್ದಲ್ಲಿ ಆಕೆಯನ್ನು ಅಪಹರಿಸಿ ವಿವಾಹವಾಗುವುದಾಗಿಯೂ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಜಿಲ್ಲಾಧಿಕಾರಿಯವರು ವಾರಕ್ಕೊಮ್ಮೆ ನಡೆಸುವ ಸಾರ್ವಜನಿಕ ಸಭೆಯಲ್ಲಿ ಮಲಯ್ಯಸಾಮಿ ಈ ಮನವಿ ಸಲ್ಲಿಸಿದ್ದಾರೆ. ಕುತೂಹಲದ ವಿಷಯ ಏನೆಂದರೆ ಪಿವಿ ಸಿಂಧು ಫೋಟೊ ಮತ್ತು ತನ್ನ ಫೋಟೋವನ್ನು ಮನವಿ ಪತ್ರದ ಜತೆ ಲಗತ್ತಿಸಿದ್ದು!
ಅದೇ ರೀತಿ ತಾನು 2004ರ ಏಪ್ರಿಲ್ 4ರಂದು ಜನಿಸಿದ್ದು, ಕೇವಲ 16ವರ್ಷವಷ್ಟೇ ಆಗಿದೆ. ಹೀಗಾಗಿ ಪಿವಿ ಸಿಂಧುವನ್ನು ತಾನು ಮದುವೆಯಾಗಿ ಆಕೆಯ ಬದುಕಿನ ಏಳಿಗೆಗೆ ಪ್ರೋತ್ಸಾಹ ನೀಡುವುದಾಗಿ ಮಲಯ್ಯ ಸಾಮಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.