ವಿಶ್ವ ಗೆದ್ದ ಕುಬ್ಜ ಕ್ರೀಡಾಪಟುಗಳ ನಿರ್ಲಕ್ಷಿಸಿದ ರಾಜ್ಯ ಸರ್ಕಾರ
Team Udayavani, Aug 20, 2017, 6:35 AM IST
ಬೆಂಗಳೂರು: “ಹೆಂಡತಿ ಮಕ್ಕಳ ಚೂರು ಪಾರು ಬಂಗಾರ ಅಡ ಇಟ್ಟು ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದು ಬಂದಿದ್ದೇನೆ. ಸರ್ಕಾರ ಗೌರವಿಸುವುದಿರಲಿ ಬಿಡಿಗಾಸಿನ ಸಹಾಯವನ್ನೂ ಮಾಡಿಲ್ಲ. ನಮ್ಮಂಥವರ ಸಾಧನೆ ಅವರಿಗೆ ಬೇಕಿಲ್ಲವೇ?’
ಇದು ಅಂತಾರಾಷ್ಟ್ರೀಯ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗೆದ್ದ ರಾಜ್ಯದ ಸಿ.ವಿ ರಾಜನ್ ಅವರ ನೋವಿನ ಮಾತು. ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಮಾತನಾಡಿದರು. ಆಗಸ್ಟ್ 4ರಿಂದ12ರವರೆಗೆ ಕೆನಡಾದಲ್ಲಿ ವಿಶ್ವ ಕುಬ್ಜರ ಕ್ರೀಡಾಕೂಟವು ನಡೆದಿತ್ತು. ಇದರಲ್ಲಿ ಭಾರತದಿಂದ ಒಟ್ಟು 21 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಅದರಲ್ಲಿ ಭಾಗವಹಿಸಿದ್ದ ರಾಜ್ಯದ 7 ಮಂದಿಯೂ ಪದಕ ಗೆದ್ದಿದ್ದಾರೆ. ಆದರೆ ಸರ್ಕಾರದ ವತಿಯಿಂದ ಸಿಗಬೇಕಾದ ಆರ್ಥಿಕ ಬೆಂಬಲ ಇನ್ನೂ ಸಿಕ್ಕಿಲ್ಲ. ಇದರ ವಿರುದ್ಧ ಕ್ರೀಡಾಪಟುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಶುಭಾಶಯವನ್ನೂ ಹೇಳದ ಸರ್ಕಾರ: ಭಾರತವನ್ನು ಪ್ರತಿನಿಧಿಸಿ, ಕರ್ನಾಟಕಕ್ಕೆ ಕೀರ್ತಿತಂದರೂ ಈವರೆಗೂ
ಸರ್ಕಾರದಿಂದ ಹಣವಿರಲಿ ಒಂದು ಚಿಕ್ಕ ಶುಭಾಶಯವೂ ಸರ್ಕಾರದ ವತಿಯಿಂದ ಬಂದಿಲ್ಲ. ಕ್ರೀಡಾಕೂಟಕ್ಕೆ ತೆರಳುವ
ಮೊದಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ರಿಂದ ಆರ್ಥಿಕ ಸಹಕಾರದ
ಭರವಸೆ ಸಿಕ್ಕಿತ್ತು. ಆದರೆ ಈಗ ಎಲ್ಲರು ನಮ್ಮನ್ನು ಮರೆತೆ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಯಾವ ಪುರಸ್ಕಾರವೂ ಬೇಡ, ಕೆನಡಾಗೆ ತೆರಳಲು ವಿಮಾನದ ಭತ್ಯೆ 1.50 ಲಕ್ಷ ರೂ. ಕೊಟ್ಟರೆ ಮಾಡಿದ ಸಾಲ ತೀರಿಸುತ್ತೇವೆ
– ಎಂ.ಪ್ರಕಾಶ್ ಬೊಚಿಯಾ,
ಪದಕ ವಿಜೇತ ಕುಬ್ಜ ಕ್ರೀಡಾಪಟು
ಗೆದ್ದಿರುವ ಬಂಗಾರದ ಪದಕವನ್ನಾದರೂ ಮಾರಿ ಸಾಲ ತೀರಿಸೋಣ ಎಂದರೆ ಒಂದು ಪದಕದಲ್ಲಿರುವುದು ಶೇ.20ರಷ್ಟು ಬಂಗಾರ ಮಾತ್ರ, ಮಾರಿದರೆ ಐದತ್ತು ಸಾವಿರ ಸಿಗುತ್ತದೆ ಅಷ್ಟೆ.
– ನಾಗೇಶ್, ಪದಕ ವಿಜೇತ ಕುಬ್ಜ ಕ್ರೀಡಾಪಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.