ಮೂಡುಬಿದಿರೆಯಲ್ಲಿ ಅರಳಲಿದೆ ಕ್ರೀಡಾಲೋಕ
ಅ.ಭಾ. ಅಂತರ್ ವಿ.ವಿ. ಕ್ರೀಡಾಕೂಟ
Team Udayavani, Jan 2, 2020, 5:49 AM IST
ಮೂಡುಬಿದಿರೆ: 80ನೇ ಅಖೀಲ ಭಾರತ ಅಂತರ್ ವಿವಿ ಕ್ರೀಡಾಕೂಟಕ್ಕೆ ಮೂಡುಬಿದಿರೆಯ ಸ್ವರಾಜ್ಯ ಮೈದಾನ ಸರ್ವವಿಧದಲ್ಲೂ ಸಜ್ಜಾಗಿದೆ.
ಗುರುವಾರದಿಂದ ಒಟ್ಟು 5 ದಿನಗಳ ಕಾಲ ಆ್ಯತ್ಲೆಟಿಕ್ಸ್ ಸ್ಪರ್ಧೆ ನಡೆಯಲಿದ್ದು, ದೇಶದ ವಿವಿ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪಣಕ್ಕಿಡಲಿದ್ದಾರೆ.
ಗುರುವಾರ ಸಂಜೆ 5.45ಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ| ಎಸ್. ಸಚ್ಚಿದಾನಂದ ಅವರ ಅಧ್ಯಕ್ಷತೆಯಲ್ಲಿ, ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.
ದೇಶದ ವಿವಿಧೆಡೆಯ 400 ವಿವಿಗಳ ಸುಮಾರು 5 ಸಾವಿರದಷ್ಟು ಆತ್ಲೀಟ್‌ಗಳು ಕಳೆದ 2-3 ದಿನಗಳಿಂದ ಸ್ವರಾಜ್ಯ ಮೈದಾನದಲ್ಲಿ ಅಂತಿಮ ಅಭ್ಯಾಸ ನಡೆಸುತ್ತಿದ್ದಾರೆ.
ನವೀಕೃತ ಸಿಂಥೆಟಿಕ್ ಟ್ರ್ಯಾಕ್
ಸ್ವರಾಜ್ಯ ಮೈದಾನದ ಕ್ರೀಡಾ ಇಲಾಖೆಯ ಸಿಂಥೆಟಿಕ್ ಟ್ರಾÂಕ್ ನವೀಕರಣಗೊಂಡು ಹೊಸ ಬಣ್ಣ ಲೇಪಿಸಿಕೊಂಡಿದೆ. ಗುರುವಾರ ಅಪರಾಹ್ನ ಹನುಮಂತ ದೇವಸ್ಥಾನದ ಬಳಿಯಿಂದ ಸಾಂಸ್ಕೃತಿಕ ಮೆರವಣಿಗೆ ಹೊರಡಲಿದೆ. ಆಳ್ವಾಸ್‌ನ 2 ಸಾವಿರ ವಿದ್ಯಾರ್ಥಿಗಳು ದೇಶದ ವೈವಿಧ್ಯಮಯ ಉಡುಪು ಧರಿಸಿ ರಂಗೇರಿಸಲಿದ್ದಾರೆ. ಸುಮಾರು 5 ಸಾವಿರ ಮಂದಿ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. ಒಟ್ಟು 10 ಸಾವಿರ ಮಂದಿ ಪಥಸಂಚಲನದಲ್ಲಿ ಜನಮನ ಸೂರೆಗೊಳ್ಳಲಿದ್ದಾರೆ.
10 ಸಾವಿರ ಮಂದಿ ಆರಾಮವಾಗಿ ಕುಳಿತುಕೊಳ್ಳಬಲ್ಲ ವೀಕ್ಷಕರ ಗ್ಯಾಲರಿಗಳು ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ತಲೆ ಎತ್ತಿವೆ. 1,500 ಮೀ. ಉದ್ದ 700 ಮೀ. ಅಗಲದ ವೇದಿಕೆಯೂ ಸಿದ್ಧವಾಗಿದೆ. ಊಟೋಪಚಾರಕ್ಕಾಗಿ ಕ್ರೀಡಾಂಗಣದ ಬಳಿಯೇ ಇರುವ “ನೂತನ ಕನ್ನಡ ಭವನ’ ಸಜ್ಜಾಗಿದೆ.
ಹೊನಲು ಬೆಳಕಿನ ಕ್ರೀಡಾಕೂಟ
ಇದು ಹೊನಲು ಬೆಳಕಿನ ಕ್ರೀಡಾಕೂಟವಾಗಿರುವುದೊಂದು ವಿಶೇಷ. ವಿದ್ಯುದ್ದೀಪಾಲಂಕಾದೊಂದಿಗೆ ಬಣ್ಣಬಣ್ಣದ ಆಕಾಶಬುಟ್ಟಿಗಳು ಈಗಾಗಲೇ ಮಿಂಚಲಾರಂಭಿಸಿವೆ. ವಿವಿಧ ಕ್ರೀಡಾ ಸಲಕರಣೆ, ಉಡುಪು, ಆಹಾರ, ಲಘು ಪಾನೀಯದ ಮಳಿಗೆಗಳು ಸಿದ್ಧಗೊಂಡಿವೆ. ಈ ಬೃಹತ್ ಕ್ರೀಡಾಜಾತ್ರೆಯಲ್ಲಿ ಅದೆಷ್ಟು ದಾಖಲೆಗಳು ನಿರ್ಮಾಣವಾದಾವು ಎಂಬುದೊಂದು ಕುತೂಹಲ.
ಅಖೀಲ ಭಾರತ ವಿ.ವಿ.ಗಳ ಒಕ್ಕೂಟದ ಸಹಭಾಗಿತ್ವದಲ್ಲಿ ರಾಜೀವ್ ಗಾಂಧಿ ಆರೋಗ್ಯವಿ.ವಿ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಘಟಿಸಿರುವ ಈ ಕೂಟದ ಯಶಸ್ಸಿಗಾಗಿ ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಆಹಾರ, ಸಾರಿಗೆ, ತಾಂತ್ರಿಕ, ಬಹುಮಾನ ವಿತರಣೆ, ದಾಖಲೀಕರಣ ಸೇರಿದಂತೆ ಸುಮಾರು 20 ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.