ಸಮಗ್ರ ಪ್ರಶಸ್ತಿಯತ್ತ ಮಂಗಳೂರು ವಿವಿ ಓಟ
80ನೇ ಅಖೀಲ ಭಾರತ ಅಂತರ್ ವಿ.ವಿ. ಆ್ಯತ್ಲೆಟಿಕ್ಸ್
Team Udayavani, Jan 5, 2020, 11:57 PM IST
ಜ್ಯೋತಿ ವೈ.ನರೇಂದ್ರ ಪ್ರತಾಪ್ ಸಿಂಗ್,ಮನು ಡಿ.ಪಿ.
ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖೀಲ ಭಾರತ ಅಂತರ್ ವಿ.ವಿ. ಕ್ರೀಡಾಕೂಟದ 4ನೇ ದಿನವಾದ ರವಿವಾರ ಸಂಜೆ ವೇಳೆಗೆ ಮಂಗಳೂರು ವಿ.ವಿ. 6 ಚಿನ್ನ, 9 ಬೆಳ್ಳಿ, 4 ಕಂಚು ಸಹಿತ 127 ಅಂಕ ಗಳಿಸಿ ಸಮಗ್ರ ಚಾಂಪಿಯನ್ ಆಗುವತ್ತ ಓಟ ಬೆಳೆಸಿದೆ.
70 ಅಂಕ ಗಳಿಸಿರುವ ಮದ್ರಾಸ್ ವಿ.ವಿ. ದ್ವಿತೀಯ, 47 ಅಂಕ ಗಳಿಸಿರುವ ಕೊಟ್ಟಾಯಂನ ಎಂ.ಜಿ. ವಿ.ವಿ. ತೃತೀಯ ಸ್ಥಾನದಲ್ಲಿದೆ.
ನರೇಂದ್ರ ಮತ್ತೂಂದು ಪ್ರತಾಪ
ಕೂಟದ 2ನೇ ದಿನ 20 ಕಿ.ಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿ.ವಿ.ಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್ ಸಿಂಗ್ ರವಿವಾರ 5 ಸಾವಿರ ಮೀ. ಓಟವನ್ನು 14 ನಿ., 17.77 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಇನ್ನೊಂದು ಕೂಟ ದಾಖಲೆ ಸ್ಥಾಪಿಸಿದರು. ಪಂಜಾಬ್ ವಿ.ವಿ.ಯ ಸುರೇಶ್ ಕುಮಾರ್ ಅವರ ದಾಖಲೆಯನ್ನು (14ನಿ. 19.39 ಸೆ.) ಮುರಿದರು.
ಇದೇ ಓಟವನ್ನು ಮಂಗಳೂರು ವಿ.ವಿ.ಯ ಆಳ್ವಾಸ್ ಕಾಲೇಜಿನ ಆದೇಶ್ 14 ನಿ., 30.02 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಗೆದ್ದರು. ಸಾವಿತ್ರಿ ಬಾಯಿ ಫುಲೆ ವಿ.ವಿ.ಯ ತದ್ವಿ ಕಿಸನ್ ಕಂಚಿನ ಪದಕ (14 ನಿಮಿಷ, 36.77 ಸೆ.) ಪಡೆದರು.
100 ಮೀ. ಹರ್ಡಲ್ಸ್ ದಾಖಲೆ
ಮಹಿಳೆಯರ ವಿಭಾಗದ 100 ಮೀ. ಹರ್ಡಲ್ಸ್ ನಲ್ಲಿ ಆಚಾರ್ಯ ನಾಗಾರ್ಜುನ ವಿ.ವಿ.ಯ ಜ್ಯೋತಿ ವೈ. ಕೂಟ ದಾಖಲೆ ನಿರ್ಮಿಸಿದರು. 13.037 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿದ ಜ್ಯೋತಿ, ಈ ಹಿಂದೆ ಮದ್ರಾಸ್ ವಿ.ವಿ.ಯ ಜಿ. ಗಾಯತ್ರಿ (13.72 ಸೆ.) ಹಾಗೂ ವಿನೋಭಾ ಬಾವೆ ವಿ.ವಿ.ಯ ಸಪ್ನಾ ಕುಮಾರಿ (13.72 ಸೆ.) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಅನುರಾಧಾ ಭಂಸ್ವಾಲ್ ಅವರ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಗಿಂತ (13.38 ಸೆ.) ಉತ್ತಮ ಸಾಧನೆಗೈದರು.
4ನೇ ದಿನ 2 ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು, ಚಾಂಪಿಯನ್‌ಶಿಪ್‌ನ ಒಟ್ಟು ಕೂಟ ದಾಖಲೆಗಳ ಸಂಖ್ಯೆ 7ಕ್ಕೆ ಏರಿದೆ.
ನಗದು ಪುರಸ್ಕಾರ ಘೋಷಣೆ
ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನಗದು ಬಹುಮಾನ ಘೋಷಿಸಿದ್ದಾರೆ. ದಾಖಲೆ ನಿರ್ಮಿಸಿದವರಿಗೆ ರೂ. 25 ಸಾವಿರ, ಚಿನ್ನ ಗೆದ್ದವರಿಗೆ 15 ಸಾವಿರ ರಜತ ಪದಕ ವಿಜೇತರಿಗೆ 10 ಸಾವಿರ ಹಾಗೂ ಕಂಚಿನ ಪದಕ ವಿಜೇತರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.
ಮೂವರಿಗೆ ಅವಳಿ ಚಿನ್ನ
ಈ ಕೂಟದಲ್ಲಿ ಮೂವರು ಅವಳಿ ಚಿನ್ನದ ಪದಕ ಗೆದ್ದ ಸಾಧನೆಗೈದರು. ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿ.ಯ ನರೇಂದ್ರ ಪ್ರತಾಪ್ (20ಕಿ. ಮೀ. ನಡಿಗೆ, 5 ಸಾವಿರ ಮೀ. ಓಟ), ಮಹಿಳೆಯರ ವಿಭಾಗದಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿ.ವಿ.ಯ ಕೋಮಲ್ ಜಗದಾಲೆ (3 ಸಾವಿರ ಮೀ. ಸ್ಟೀಪಲ್ ಚೇಸ್, 5 ಸಾವಿರ ಮೀ. ಓಟ) ಹಾಗೂ ಆಚಾರ್ಯ ನಾಗಾರ್ಜುನ ವಿ.ವಿ.ಯ ಜ್ಯೋತಿ ವೈ. (100 ಮೀ, ಮತ್ತು 100 ಮೀ. ಹರ್ಡಲ್ಸ್) ಈ ಸಾಧಕರು.
ಇಂದು ಸಮಾರೋಪ
5 ದಿನಗಳ ಈ ಕೂಟ ಸೋಮವಾರ ಸಮಾಪನಗೊಳ್ಳಲಿದೆ. ಕೊನೆಯ ದಿನ ಒಟ್ಟು 14 ಸ್ಪರ್ಧೆಗಳ ಅಂತಿಮ ಹಣಾಹಣಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕುಲಪತಿ ಡಾ| ಎಸ್. ಚ್ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದ್ದು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ, ಹಾಗೂ ಕೆ. ಅಮರನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಾಲ್ಕನೇ ದಿನದ ಫಲಿತಾಂಶ
100 ಮೀ. ಹರ್ಡಲ್ಸ್ (ಮಹಿಳಾ ವಿಭಾಗ)
1. ಜ್ಯೋತಿ ವೈ. ( 13.037 ಸೆ.), ಆಚಾರ್ಯ ನಾಗಾರ್ಜುನ ವಿ.ವಿ.
2. ಸಪ್ನಾ ಕುಮಾರಿ (13.239 ಸೆ.), ವಿನೋಬಾ ಭಾವೆ ವಿ.ವಿ. ಹರ್ಯಾಣ.
3. ಅಪರ್ಣಾ ರಾಯ್ (13.554 ಸೆ.), ಕೇರಳ ವಿ.ವಿ.
5000ಮೀ. ಓಟ (ಮಹಿಳಾ ವಿಭಾಗ)
1. ಕೋಮಲ್ ಜಗದಾಲೆ (17 ನಿ., 04.13 ಸೆ.), ಸಾವಿತ್ರಿಬಾಯಿ ಪುಲೆ ವಿ.ವಿ.
2. ಕೆ.ಎಂ. ಜ್ಯೋತಿ (17 ನಿ., 04.92 ಸೆ.), ಪಂಜಾಬಿ ವಿ.ವಿ. ಚಂಡೀಗಢ.
3. ಸೀಮಾ (17 ನಿ., 08.03 ಸೆ.), ಪಂಜಾಬಿ ವಿ.ವಿ. ಪಟಿಯಾಲ.
ಹೆಪ್ಟತ್ಲಾನ್ (ಮಹಿಳಾ ವಿಭಾಗ)
1. ಸೋನು ಕುಮಾರಿ (4640 ಅಂಕ), ಲವಿÉ ಫೊÅಫೆಶನಲ್ ವಿ.ವಿ.
2. ರಿಂಪಿ ದಬಾಸ್ (4565 ಅಂಕ) ಮಂಗಳೂರು ವಿ.ವಿ.
3. ಮರಿಯಾ ತೋಮಸ್ (4492) ಮಹಾತ್ಮಾಗಾಂಧಿ ಕೊಟ್ಟಾಯಂ.
ಜಾವೆಲಿನ್ ತ್ರೋ (ಮಹಿಳಾ ವಿಭಾಗ)
1. ಎನ್. ಹೇಮಾಮಾಲಿನಿ (48.81 ಮೀ.), ಮದ್ರಾಸ್ ವಿ.ವಿ.
2. ಮೋನಿಕಾ (46.27 ಮೀ.), ಚೌಧರಿ ದೇವಿಲಾಲ್ ವಿ.ವಿ.
3. ಮನ್‌ಪ್ರೀತ್ ಕೌರ್ (45.67 ಮೀ), ಗುರುನಾನಕ್ ದೇವ್ ವಿ.ವಿ.
ಶಾಟ್‌ಪುಟ್ (ಮಹಿಳಾ ವಿಭಾಗ)
1. ಕಿರಣ್ ಬಲಿಯನ್ (15.69 ಮೀ.) ಮೀರತ್ ವಿ.ವಿ.
2. ಪೂರ್ಣಾ ರಾವ್‌ರಾಣಿ (14.45 ಮೀ) ಮುಂಬೆ„ ವಿ.ವಿ.
3. ಸೃಷ್ಟಿ ವಿಗ್ (14.32ಮೀ) ಎಂಜೆಪಿ ವಿ.ವಿ. ಬರೇಲಿ
110 ಮೀ. ಹರ್ಡಲ್ಸ್ (ಪುರುಷರ ವಿಭಾಗ)
1. ಎಲ್ದನ್ ನೊರೋನ್ಹ (14.26 ಸೆ.), ಮುಂಬೈ ವಿ.ವಿ.
2. ದೇಬಾರ್ಜುನ್ ಮುರ್ಮು (14.40ಸೆ.), ಮಂಗಳೂರು ವಿ.ವಿ.
3. ರೊನಾಲ್ಡ್ ಬಾಬು, (14.55 ಸೆ.), ಮಹಾತ್ಮಾ ಗಾಂ ಧಿ ವಿ.ವಿ. ಕೊಟ್ಟಾಯಂ.
5000 ಮೀ. ಓಟ (ಪುರುಷರ ವಿಭಾಗ)
1. ನರೇಂದ್ರ ಪ್ರತಾಪ್ ಸಿಂಗ್ (14 ನಿ. 17.77 ಸೆ.), ಮಂಗಳೂರು ವಿ.ವಿ.
2. ಅದೇಶ್ (14 ನಿ., 30.02 ಸೆ.), ಮಂಗಳೂರು ವಿ.ವಿ.
3. ತದ್ವಿ ಕಿಸನ್ (14 ನಿ., 36.77 ಸೆ.), ಸಾವಿತ್ರಿ ಬಾಯಿ ಫುಲೆ ವಿ.ವಿ. ಪುಣೆ.
ಜಾವೆಲಿನ್ ತ್ರೋ (ಪುರುಷರ ವಿಭಾಗ)
1. ಮನು ಡಿ.ಪಿ. (73.94 ಮೀ.), ಮಂಗಳೂರು ವಿ.ವಿ.
2. ಯಶ್‌ವೀರ್ ಸಿಂಗ್ (73.47 ಮೀ.), ಮಹರ್ಷಿ ದಯಾನಂದ ವಿ.ವಿ.
3. ಹರೀಶ್ ಕುಮಾರ್, (73.17 ಮೀ.) ಎಂಜಿಎಸ್ ವಿ.ವಿ. ಬಿಕಾನೇರ್
4/400 ಮಿ. ಮಿಕ್ಸ್‌ಡ್ ರಿಲೇ
1. ಕ್ಯಾಲಿಕಟ್ ವಿ.ವಿ. (3 ನಿ., 24.655 ಸೆ.).
2. ಮಹಾತ್ಮಾ ಗಾಂ ಧಿ ವಿ.ವಿ. ಕೊಟ್ಟಾಯಂ (3 ನಿ., 27.947 ಸೆ.)
3. ಪಂಜಾಬ್ ವಿ.ವಿ. ಪಟಿಯಾಲ (3 ನಿ., 28.189 ಸೆ.)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.