2 ತಿಂಗಳಲ್ಲಿ 94 ಯೋಜನೆಗೆ ಅಸ್ತು: 12,296 ಕೋಟಿ ಹೂಡಿಕೆ
Team Udayavani, Feb 28, 2018, 6:00 AM IST
ಬೆಂಗಳೂರು: ರಾಜ್ಯ ಸರ್ಕಾರ ಕಳೆದ 2 ತಿಂಗಳಲ್ಲಿ 94 ಯೋಜನೆಗಳಿಗೆ ಅನು ಮೋದನೆ ನೀಡುವ ಮೂಲಕ 12,296 ಕೋಟಿ ರೂ.
ಹೂಡಿಕೆಗೆ ಅವಕಾಶ ಕಲ್ಪಿಸುವ ಜತೆಗೆ 93,357 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ ಎಂದು ಸಚಿವ ಆರ್. ವಿ.ದೇಶಪಾಂಡೆ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಶುಕ್ರವಾರ ನಡೆದ ರಾಜ್ಯ ಉನ್ನತ ಮಟ್ಟದ
ಒಪ್ಪಿಗೆ ನೀಡಿಕೆ ಸಮಿತಿ ಐದು ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಅದರಂತೆ 6,706.15 ಕೋಟಿ ರೂ.
ಹೂಡಿಕೆಯಾಗಲಿದ್ದು, 59,200 ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು. ಈ ಹಿಂದೆ ಅಂದರೆ ಜ.30, ಫೆ.15 ಹಾಗೂ
ಫೆ.27ರಂದು ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ 5591.40 ಕೋಟಿ ರೂ. ಬಂಡವಾಳ ಹೂಡಿಕೆ ಯೋಜನೆಗಳ ಮೂಲಕ 34,057 ಉದ್ಯೋಗ ಸೃಷ್ಟಿ ನಿರೀಕ್ಷೆಯಿದೆ ಎಂದು ತಿಳಿಸಿದರು.
12.16 ಲಕ್ಷ ಉದ್ಯೋಗ ಸೃಷ್ಟಿ: ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ಕೈಗಾರಿಕಾ ವಲಯದಲ್ಲಿ
12.16 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ ಹೇಳಿದರು.
ಫೆ.23ರಂದು ಒಪ್ಪಿಗೆ ನೀಡಿರುವ ಯೋಜನೆಗಳು
ಸ್ಮಾರ್ಟ್‌ಫೋನ್ಸ್, ಐಒಟಿ ಉತ್ಪನ್ನ, ಬಯೋ ಟೆಕ್ ಉಪಕರಣ: ವೆಸ್ಟ್ರೋನ್ ಇನ್ ಫೋಕಾಂ ಮ್ಯಾನುಫ್ಯಾಕ್ಷರಿಂಗ್ ಇಂಡಿಯಾ
ಪ್ರೈ. ಲಿ. ಕೋಲಾರದ ಅಕ್ಕಚಾತನಹಳ್ಳಿ ಗ್ರಾಮದಲ್ಲಿ 43 ಎಕರೆ ಭೂಮಿ. 682 ಕೋಟಿ ರೂ. ಹೂಡಿಕೆ. 6000 ಉದ್ಯೋಗ.
ಟೆಕ್ನಿಕಲ್ ಟೆಕ್ಸ್‌ಟೈಲ್ಸ್ ಮತ್ತು ಆ್ಯಕ್ಟಿವ್ ವೇರ್ ಫ್ಯಾಬ್ರಿಕ್ಸ್ : ಸತ್ಲೆàಜ್ ಟೆಕ್ಸ್‌ಟೈಲ್ಸ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್. ಚಾಮರಾಜ
ನಗರದ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 46 ಎಕರೆ. 786 ಕೋಟಿ ರೂ. ಹೂಡಿಕೆ. 1800 ಉದ್ಯೋಗ.
5000 ಟಿಸಿಡಿ ಸಕ್ಕರೆ ಘಟಕ, 30 ಮೆ.ವ್ಯಾ. ಕೋ-ಜನ್, 60 ಕೆಎಲ್‌ಪಿಡಿ ಡಿಸ್ಟಿಲರಿ: ಅಂಜಲಿತಾಯ್ ಕೇನ್ಸ್ ಪ್ರೈ.ಲಿ. ಖಾನಾ
ಪುರದ ಹಾಲಗದಲ್ಲಿ 31.12 ಎಕರೆ. 532 ಕೋಟಿ ರೂ. ಹೂಡಿಕೆ. 800 ಉದ್ಯೋಗ.
ಐಟಿ/ಐಟಿಇಎಸ್ ಕಚೇರಿ ಸ್ಥಳ, ಹೋಟೆಲ್, ಸರ್ವಿಸ್ ಅಪಾರ್ಟ್‌ಮೆಂಟ್, ಸಾಮಾನ್ಯ ಸೌಲಭ್ಯ: ಬಿಪಿಕೆ ಡೆವಲಪ್‌ಮೇಟ್ಸ್ ಎಲ್
ಎಲ್‌ಪಿ. ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡನೆಕ್ಕುಂದಿ ಗ್ರಾಮದಲ್ಲಿ 90.15 ಎಕರೆ ಭೂಮಿಯನ್ನು ಕೆಐಎಡಿಬಿ ವತಿಯಿಂದ
ಒಪ್ಪಿಗೆ ಆಧಾರಿತ ಏಕ ಸಂಕೀರ್ಣ ಘಟಕ ಅಡಿ ಸ್ವಾಧೀನ- ಹಂಚಿಕೆ. 3,495 ಕೋಟಿ ರೂ. ಹೂಡಿಕೆ. 50000 ಉದ್ಯೋಗ.
ವಿದ್ಯುತ್‌ಚಾಲಿತ ವಾಹನಗಳಿಗೆ ಲಿಥಿಯಂ ಬ್ಯಾಟರಿ ಮತ್ತು ಸಂಗ್ರಹಣೆ: ಅಂಪೀರಿಯಾ ಲಿಥಿಯಂ ಬ್ಯಾಟರಿ ಮ್ಯಾನುಫ್ಯಾಕ್ಚರಿಂಗ್
ಪ್ರೈ. ಲಿ. ಕೋಲಾರದ ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ 76 ಎಕರೆ ಕೆಐಎಡಿಬಿ ಭೂಮಿ. 1,210 ಕೋಟಿ ರೂ.
ಹೂಡಿಕೆ. 600 ಉದ್ಯೋಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.