ಸತತ 9 ಗೆಲುವು: ಭಾರತದ ಜಂಟಿ ದಾಖಲೆ
Team Udayavani, Sep 26, 2017, 8:59 AM IST
ಇಂದೋರ್: ಇಂದೋರ್‌ನಲ್ಲಿ ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ಭಾರತ ಸರಣಿಯನ್ನು ವಶಪಡಿಸಿಕೊಂಡಿತಲ್ಲದೇ, ಸತತ 9 ಏಕದಿನ ಪಂದ್ಯಗಳನ್ನು ಗೆದ್ದ ತನ್ನ ದಾಖಲೆಯನ್ನು ಸರಿದೂಗಿಸಿತು. 2008ರ ನವೆಂಬರ್ ಹಾಗೂ 2009ರ ಫೆಬ್ರವರಿ ನಡುವಿನ ಅವಧಿಯಲ್ಲೂ ಭಾರತ ಸತತ 9 ಪಂದ್ಯಗಳನ್ನು ಜಯಿಸಿತ್ತು. ಅಂದು ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ 4 ಪಂದ್ಯ ಹಾಗೂ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು.
ಈ ಗೆಲುವಿನ ಓಟದ ವೇಳೆ ವಿರಾಟ್ ಕೊಹ್ಲಿ ಸತತ ಅತ್ಯಧಿಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮಹೇಂದ್ರ ಸಿಂಗ್ ಧೋನಿ ಅವರ ಭಾರತೀಯ ನಾಯಕತ್ವದ ದಾಖಲೆಯನ್ನು ಸರಿದೂಗಿಸಿದರು (9 ಪಂದ್ಯ). ಧೋನಿ 2008-09ರ ಅವಧಿಯಲ್ಲಿ
ಈ ದಾಖಲೆ ನಿರ್ಮಿಸಿದ್ದರು. ಇನ್ನೊಂದೆಡೆ ಆಸ್ಟ್ರೇಲಿಯ ತವರಿನಾಚೆ ಸತತ 11 ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.