ಒಂದೇ ಸ್ಥಾನಕ್ಕೆ ಇಶಾನ್-ಗಿಲ್ ಪೈಪೋಟಿ; ತೂಗುಯ್ಯಾಲೆಯಲ್ಲಿದೆ ಶಿಖರ್ ಧವನ್ ಸ್ಥಾನ
Team Udayavani, Dec 11, 2022, 3:54 PM IST
ಮುಂಬೈ: ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಏಕದಿನ ಭವಿಷ್ಯದ ಬಗ್ಗೆ ಹೊಸ ಆಯ್ಕೆ ಸಮಿತಿಯು ಚರ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇಶಾನ್ ಕಿಶನ್ ಅವರು ಬಾಂಗ್ಲಾದೇಶ ವಿರುದ್ಧ ಅದ್ಭುತ ದ್ವಿಶತಕದೊಂದಿಗೆ ಆರಂಭಿಕ ಸ್ಥಾನಕ್ಕೆ ತಾನು ಪ್ರಬಲ ಆಯ್ಕೆಯಾಗಿ ಹೊರಹೊಮ್ಮಿದ ನಂತರ ಧವನ್ ಸ್ಥಾನಕ್ಕೆ ಕುತ್ತು ಬಂದಿದೆ. ಹೊಸದಾಗಿ ನೇಮಕವಾಗಲಿರುವ ಆಯ್ಕೆ ಸಮಿತಿಯು ಈ ಬಗ್ಗೆ ಚರ್ಚೆ ನಡೆಸಲಿದೆ.
ಧವನ್ ಅವರು ಇತ್ತೀಚಿನ ದಿನಗಳಲ್ಲಿ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಎಡವುತ್ತಿದ್ದಾರೆ. ಅಲ್ಲದೆ, ಪವರ್ ಪ್ಲೇ ಓವರ್ ಗಳ ಸಮಯದಲ್ಲಿ ಎಡಗೈ ಆಟಗಾರನು ಅತ್ಯಂತ ನಿಧಾನವಾಗಿ ಆಡುತ್ತಿರುವುದು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಶುಭ್ಮನ್ ಗಿಲ್ ಅಥವಾ ಇಶಾನ್ ಕಿಶನ್ ಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು.
ಕೆಲವೇ ದಿನಗಳಲ್ಲಿ ಬಿಸಿಸಿಐ ತಂಡದ ಪ್ರದರ್ಶನದ ಪರಿಶೀಲನಾ ಸಭೆಯನ್ನು ನಡೆಸಲಿದೆ. ಮುಂದಿನ ಹಾದಿಯ ಬಗ್ಗೆ ಮುಖ್ಯ ಕೋಚ್ ದ್ರಾವಿಡ್ ಮತ್ತು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಮಾರ್ಗಸೂಚಿಯನ್ನು ಚರ್ಚಿಸುತ್ತದೆ.
ಇದನ್ನೂ ಓದಿ:ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು ಅಭಿಷೇಕ್ – ಅವಿವಾ ಎಂಗೇಜ್‌ಮೆಂಟ್
“ಹೊಸ ಆಯ್ಕೆ ಸಮಿತಿಯನ್ನು ನೇಮಿಸಿದ ನಂತರವೇ ಶಿಖರ್ ಅವರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವುದು. ಆದರೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಬೆಳವಣಿಗೆಗಳ ಬಗ್ಗೆ ಹಿರಿಯ ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.
ಕೊನೆಯದಾಗಿ ಜನವರಿಯಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧವನ್ ಗೆ ಅವಕಾಶ ನೀಡಬೇಕು. ನಂತರ ಮಾರ್ಚ್ ಅಂತ್ಯದಲ್ಲಿ ಆಸ್ಟ್ರೇಲಿಯಾ ಏಕದಿನ ಸರಣಿಗೆ ಮೊದಲು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಹಿರಿಯ ಎಡಗೈ ಬ್ಯಾಟರ್ ನ ಭವಿಷ್ಯ ತೂಗುಕತ್ತಿಯಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.