ಪಾಕಿಸ್ಥಾನಕ್ಕೆ ಉಭಯಸಂಕಟ… ಗೆದ್ದರೂ ಹಾದಿ ದುರ್ಗಮ
Team Udayavani, Jun 11, 2024, 10:10 AM IST
ನ್ಯೂಯಾರ್ಕ್: ಅಮೆರಿಕ ಮತ್ತು ಭಾರತದ ಕೈಯಲ್ಲಿ ಸೋಲಿನೇಟು ತಿಂದಿರುವ ಪಾಕಿಸ್ಥಾನದ ಸ್ಥಿತಿ ಈಗ ಚಿಂತಾಜನಕವಾಗಿದೆ. ಬಾಬರ್ ಪಡೆಯ ಮೇಲೆ ಎಲ್ಲ ದಿಕ್ಕುಗಳಿಂದಲೂ ಒತ್ತಡ ಬಿದ್ದಿದೆ. ಮಂಗಳವಾರ ಗಡಗಡ ಎನ್ನುತ್ತಲೇ ಕೆನಡಾವನ್ನು ಎದುರಿಸಲಿದ್ದು, ಇದನ್ನು ಹಾಗೂ ಮುಂದಿನ ಐರ್ಲೆಂಡ್ ಎದುರಿನ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದರಷ್ಟೇ ಪಾಕ್ ಸೂಪರ್-8 ರೇಸ್‌ನಲ್ಲಿ ಉಳಿಯಲಿದೆ ಎಂಬುದು ಸದ್ಯದ ಸ್ಥಿತಿ.
ಇಷ್ಟೇ ಸಾಲದು. ಈ ನಡುವೆ ಬುಧವಾರ ಭಾರತ-ಅಮೆರಿಕ ಎದುರಾ ಗಲಿದ್ದು, ಇಲ್ಲಿ ಗೆದ್ದ ತಂಡಕ್ಕೆ ಮುಂದಿನ ಸುತ್ತಿನ ಟಿಕೆಟ್ ಪಕ್ಕಾ ಆಗಲಿದೆ. ಒಂದು ವೇಳೆ ಭಾರತ ಗೆದ್ದರೆ, ಅಮೆರಿಕ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌ಗೆ ಸೋಲುಣಿಸಿದರೆ ಆಗ ಪಾಕಿಸ್ಥಾನದ ಕತೆ ಮುಗಿಯಲಿದೆ.
ಪಾಕಿಸ್ಥಾನದ ಮುಂದಿರುವ ಒಂದು ಕ್ಷೀಣ ಅವಕಾಶವೆಂದರೆ, ಅಮೆರಿಕ ಉಳಿದೆಡರಡೂ ಪಂದ್ಯಗಳಲ್ಲಿ ದೊಡ್ಡ ಸೋಲನುಭವಿಸುವುದು, ಪಾಕ್ ಎರಡನ್ನೂ ಭಾರೀ ಅಂತರದಿಂದ ಗೆಲ್ಲುವುದು. ಆಗ ಎರಡೂ ತಂಡಗಳ ಅಂಕ ಸಮನಾಗಲಿದ್ದು (ತಲಾ 4), ರನ್‌ರೇಟ್ ಗಣನೆಗೆ ಬರಲಿದೆ. ಸದ್ಯ ಅಮೆರಿಕ +0.626ರಷ್ಟು ಉತ್ಕೃಷ್ಟ ನೆಟ್ ರನ್‌ರೇಟ್ ಹೊಂದಿದ್ದು, ಪಾಕಿಸ್ಥಾನ ಕೇವಲ -0.150 ನೆಟ್ ರನ್‌ರೇಟ್ ಹೊಂದಿದೆ. ಇಲ್ಲಿಯೂ ಬಾಬರ್ ಪಡೆಗೆ ಭಾರೀ ಹಿನ್ನಡೆಯಾಗಿದೆ.
ಅಕಸ್ಮಾತ್ ಮಂಗಳವಾರ ರಾತ್ರಿ ಕೆನಡಾ ವಿರುದ್ಧ ಸೋತರೆ ಯಾವ ಲೆಕ್ಕಾಚಾರವೂ ಅಗತ್ಯ ಬೀಳದು. ಆಗ ಪಾಕಿಸ್ಥಾನ ಹ್ಯಾಟ್ರಿಕ್ ಸೋಲು ಹೊತ್ತು ನೇರವಾಗಿ ನಿರ್ಗಮಿಸಲಿದೆ.
ಭರವಸೆ ಮೂಡಿಸದ ಆಟ
2009ರ ಚಾಂಪಿಯನ್ ಆಗಿರುವ ಪಾಕಿಸ್ಥಾನ, ಈ ಬಾರಿ ಯಾವ ವಿಭಾಗ ದಲ್ಲೂ ಭರವಸೆಯ ಪ್ರದರ್ಶನ ನೀಡಿಲ್ಲ. ಭಾರತದೆದುರು ಬೌಲಿಂಗ್‌ನಲ್ಲಿ ಮಿಂಚಿದ್ದೊಂದೇ ಗಮನಾರ್ಹ ಸಾಧನೆ. ಇಲ್ಲಿ ನಸೀಮ್ ಶಾ ಮತ್ತು ಆಮಿರ್ ಉತ್ತಮ ನಿರ್ವಹಣೆಗೈದಿದ್ದರು. ಆದರೆ ಪ್ರಧಾನ ವೇಗಿ ಶಾಹೀನ್ ಶಾ ಅಫ್ರಿದಿ ಕ್ಲಿಕ್ ಆಗಿಲ್ಲ.
ಇತ್ತ ಕೆನಡಾ “ಎ’ ವಿಭಾಗದಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕಕ್ಕೆ 7 ವಿಕೆಟ್‌ಗಳಿಂದ ಸೋತ ಬಳಿಕ ಐರ್ಲೆಂಡ್‌ಗೆ 12 ರನ್ನುಗಳ ಸೋಲುಣಿಸಲು ಯಶಸ್ವಿಯಾಗಿದೆ. ಆದರೆ ಅಮೆರಿಕ ವಿರುದ್ಧ ಕೆನಡಾ 194 ರನ್ ಪೇರಿಸಿದ್ದನ್ನು ಮರೆ ಯುವಂತಿಲ್ಲ ಕೆನಡಾ ಕಳೆದುಕೊಳ್ಳುವಂಥ ದ್ದೇನೂ ಇಲ್ಲವಾದ ಕಾರಣ ಪಾಕ್ ವಿರುದ್ಧ ಬಿಂದಾಸ್ ಆಟವಾಡೀತು.
ಇದನ್ನೂ ಓದಿ: Tennis Rankings: 77ನೇ ಸ್ಥಾನಕ್ಕೆ ಜಿಗಿದ ನಾಗಲ್‌ಗೆ ಪ್ಯಾರಿಸ್ ಟಿಕೆಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.