World Cup Final; ಕನಸು ನನಸಾಯಿತು….: ಟಾಸ್ ವೇಳೆ ನಾಯಕ ರೋಹಿತ್ ಶರ್ಮಾ
Team Udayavani, Nov 19, 2023, 2:55 PM IST
ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಕೂಟದ ಫೈನಲ್ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೆಗಾ ಕಪ್ ಗಾಗಿ ಸ್ಪರ್ಧೆಯಲ್ಲಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ವೇಳೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ ಇದೀಗ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾವುಕರಾದ ರೋಹಿತ್ ಈ ಅವಕಾಶದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
2011 ರಿಂದ 2023 ರವರೆಗಿನ ಅವರ ಪ್ರಯಾಣದ ಬಗ್ಗೆ ಟಾಸ್ ವೇಳೆ ರವಿ ಶಾಸ್ತ್ರಿ ಕೇಳಿದಾಗ, ರೋಹಿತ್ ತಮ್ಮ ಕನಸು ನನಸಾಗಿದೆ ಎಂದು ಒಪ್ಪಿಕೊಂಡರು.
ಇದನ್ನೂ ಓದಿ:Bangladesh; ರಾಜಕೀಯಕ್ಕಿಳಿದ ಶಕೀಬ್ ಅಲ್ ಹಸನ್; ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ
“ಫೈನಲ್‌ನಲ್ಲಿ ತಂಡದ ನಾಯಕನಾಗುವುದು ಕನಸಿನ ಮಾತು. ನಮ್ಮ ಮುಂದೆ ಏನಿದೆ ಎಂದು ನನಗೆ ತಿಳಿದಿದೆ. ನಾವು ಚೆನ್ನಾಗಿ ಆಡಬೇಕು ಮತ್ತು ಫಲಿತಾಂಶವನ್ನು ಪಡೆಯಬೇಕು. ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದು ನಮಗೆ ಮುಖ್ಯ. ಕಳೆದ 10 ಪಂದ್ಯಗಳಲ್ಲಿ ಸತತವಾಗಿ ಮಾಡಿದ್ದೇವೆ” ಎಂದು ಅವರು ಹೇಳಿದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ. ಬ್ಯಾಟಿಂಗ್ ಆರಂಭಿಸಿದ ಭಾರತವು 11 ಓವರ್ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.
ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭಿಸಿದ ನಾಯಕ ರೋಹಿತ್ ಶರ್ಮಾ 47 ರನ್ ಗಳಿಸಿದರು. 31 ಎಸೆತ ಎದುರಿಸಿದ ರೋಹಿತ್ ಮೂರು ಸಿಕ್ಸರ್ ಬಾರಿಸಿದರು. ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ತಲಾ ನಾಲ್ಕು ರನ್ ಗಳಿಸಿ ಔಟಾದರು.
Most runs by a captain in a single World Cup edition ever 👏
Brilliant with the bat in the tournament skip, and today was no exception! 💪#PlayBold #CWC23 #TeamIndia #WorldCupFinal #INDvAUS @ImRo45 pic.twitter.com/JcVw2VoSyu
— Royal Challengers Bangalore (@RCBTweets) November 19, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.