ಪ್ರೊ ಕಬಡ್ಡಿ: ಯು ಮುಂಬಾಗೆ ಭರ್ಜರಿ ಗೆಲುವು
Team Udayavani, Sep 10, 2019, 10:41 PM IST
ಕೋಲ್ಕತಾ: ಯು ಮುಂಬಾ ತಂಡವು ಪ್ರೊ ಕಬಡ್ಡಿ 7ನೇ ಆವೃತ್ತಿ ಕೋಲ್ಕತ ಚರಣದ ಮಂಗಳವಾರದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 41-27 ಅಂಕಗಳ ಭಾರೀ ಅಂತರದಲ್ಲಿ ಜಯ ಸಾಧಿಸಿತು. ಈ ಮೂಲಕ ಮುಂಬಾ ಕೂಟದಲ್ಲಿ ಒಟ್ಟು 42 ಅಂಕಗಳಿಸಿ ಮೇಲಕ್ಕೇರಿತು. ಪರಾಜಿತ ತೆಲುಗು ಟೈಟಾನ್ಸ್ ತಂಡದ ಪರಿಸ್ಥಿತಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದು, ಪ್ಲೇ-ಆಫ್ ಸಾಧ್ಯತೆ ಕ್ಷೀಣಿಸಿದೆ.
ಇಲ್ಲಿನ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ತೆಲುಗು ಟೈಟಾನ್ಸ್ ತಂಡವನ್ನು ಮೂರು ಬಾರಿ ಆಲೌಟ್ ಮಾಡಿತು. ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪಂದ್ಯ ನೀರಸವಾಗಿ ಸಾಗಿತು. ಟೈಟಾನ್ಸ್ ವಿರುದ್ಧ ಮುಂಬೈ ಸವಾರಿ ಮಾಡುತ್ತಲೇ ಸಾಗಿತು. ಅರ್ಜುನ್ ದೆಶ್ವಾಲ್ (9 ಅಂಕ) ಉತ್ತಮ ದಾಳಿ ಮಾಡಿದರು. ಇವರಿಗೆ ರೋಹಿತ್ ಬಲಿಯಾನ್ ಸಾಥ್ ನೀಡಿದರು. ಮುಂಬಾ ಪರ ಫಜಲ್ ಅಟ್ರಾಚೆಲಿ ರಕ್ಷಣೆಯಲ್ಲಿ 6 ಅಂಕಗಳಿಸಿ ತಂಡದ ಗೆಲುವಿಗೆ ನೆರವಾದರು. ತಾರಾ ಆಟಗಾರ ರಾಹುಲ್ ಚೌಧರಿ ತಮಿಳ್ ತಲೈವಾಸ್‌ಗೆ ವಲಸೆ ಹೋಗಿರುವುದರಿಂದ, ತೆಲುಗು ಟೈಟಾನ್ಸ್‌ಗೆ ಅದರಿಂದ ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಸತತ ಸೋಲನು ಅನುಭವಿಸುತ್ತ ಕೂಟದಲ್ಲಿ 9ನೆ ಸ್ಥಾನದಲ್ಲಿದೆ. ತೆಲುಗು ಪರ ಇದ್ದಿದ್ದರಲ್ಲಿ ರಾಕೇಶ್ ಗೌಡ (7 ಅಂಕ) ಹಾಗೂ ಸಿದ್ಧಾರ್ಥ್ ದೇಸಾಯಿ ( 4 ಅಂಕ) ಪರವಾಗಿಲ್ಲ ಎನ್ನುವಂತಹ ಆಟವಾಡಿದರು.
ಸಮಬಲದ ಹೋರಾಟ:
ಮೊದಲ ಅವಧಿಯ ಅಂತ್ಯದಲ್ಲಿ ಉಭಯ ತಂಡಗಳು 15-15 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ, ಎರಡನೆ ಅವಧಿಯ ಆಟ ಆರಂಭವಾಗಿ ಎರಡೇ ನಿಮಿಷದಲ್ಲಿ ಯು ಮುಂಬಾ ತಂಡ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿತು. ಈ ಹಂತದಲ್ಲಿ ಯು ಮುಂಬಾ 19-16ರಿಂದ ಮುನ್ನಡೆ ಪಡೆದಿತ್ತು.
ನಂತರದ ಹಂತದಲ್ಲಿಯೂ ಯು ಮುಂಬಾ ತಂಡ ತನ್ನ ಆಕ್ರಮಣದ ಆಟವನ್ನು ಮುಂದುವರಿಸಿತು. ಟೈಟಾನ್ಸ್ ಕೋಟೆಯಲ್ಲಿದ್ದ ಒಬ್ಬೊಬ್ಬರೇ ಆಟಗಾರರು ಅಂಕಣದಿಂದ ಹೊರ ಹೋಗುತ್ತಿದ್ದರು. ಇದರ ಫಲವಾಗಿ ಪಂದ್ಯ ಮುಗಿಯಲು ಇನ್ನೂ 9 ನಿಮಿಷ ಬಾಕಿ ಇರುವಂತೆಯೇ ಟೈಟಾನ್ಸ್ ತಂಡ ಮತ್ತೂಮ್ಮೆ ಆಲೌಟ್ ಆಯಿತು. ಈ ಹಂತದಲ್ಲಿ ಮುಂಬಾ ತಂಡ 30-22ರಿಂದ ಭಾರೀ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.