Aamir Khan: ʼತಾರೆ ಜಮೀನ್ ಪರ್ʼ ಟೈಟಲ್ ಹೋಲುವ ಹೊಸ ಸಿನಿಮಾವನ್ನು ಘೋಷಿಸಿದ ಆಮಿರ್ ಖಾನ್
Team Udayavani, Oct 11, 2023, 10:56 AM IST
ಮುಂಬಯಿ: ಬಾಲಿವುಡ್ ನಟ ಆಮಿರ್ ಖಾನ್ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದ ಬಳಿಕ ಮತ್ತೆ ಯಾವ ಸಿನಿಮಾದಲ್ಲೂ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಆಮಿರ್ ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ.
2007 ರಲ್ಲಿ ಆಮಿರ್ ಖಾನ್ ಅವರು ಮೊದಲ ಬಾರಿ ನಿರ್ದೇಶಕನಾಗಿ ‘ತಾರೆ ಜಮೀನ್ ಪರ್ʼ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಬಾಲನಟನಾಗಿ ದರ್ಶೀಲ್ ಸಫಾರಿ ನಟಿಸಿದ್ದರು. ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.
ಇದೀಗ ಆಮಿರ್ ಖಾನ್ ತನ್ನ ಮುಂದಿನ ಸಿನಿಮಾಕ್ಕೆ ಇಂಥದ್ದೇ ಟೈಟಲ್ ನ್ನು ಇಟ್ಟಿದ್ದಾರೆ. ‘ಸಿತಾರೆ ಜಮೀನ್ ಪರ್’ ಎನ್ನುವ ಸಿನಿಮಾವನ್ನು ಮಾಡಲಿದ್ದೇನೆ ಎಂದು ಆಮಿರ್ ಹೇಳಿದ್ದಾರೆ.
ʼನ್ಯೂಸ್ 18ʼ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, “ನಾನು ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ ಮತ್ತು ಈಗ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಾನು ಸಿನಿಮಾದ ಟೈಟಲ್ ಮಾತ್ರ ಹೇಳಬಲ್ಲೆ. ‘ಸಿತಾರೆ ಜಮೀನ್ ಪರ್’ ಇದನ್ನು ಕೇಳಿದಾಗ ನಿಮಗೆ ‘ತಾರೆ ಜಮೀನ್ ಪರ್ʼ ನೆನಪಿಗೆ ಬರಬಹುದು. ಈ ಸಿನಿಮಾ ಆ ಸಿನಿಮಾಕ್ಕಿಂತ 10 ಹೆಜ್ಜೆ ಮುಂದಿರುತ್ತದೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆ” ಎಂದು ಆಮಿರ್ ಹೇಳಿದ್ದಾರೆ.
ಇದನ್ನೂ ಓದಿ: Missing Case: ದೇವರ ಮನೆ ಪ್ರವಾಸಕ್ಕೆ ಹೋಗಿ ನಾಪತ್ತೆಯಾದ ಯುವಕನ ಪ್ರಕರಣ ಸುಖಾಂತ್ಯ
“ಈ ಸಿನಿಮಾದ ಥೀಮ್ ‘ತಾರೆ ಜಮೀನ್ ಪರ್’ ಥೀಮ್ ರೀತಿಯೇ ಇರುತ್ತದೆ. ಅದಕ್ಕಾಗಿ ಸಿನಿಮಾದ ಟೈಟಲ್ ತುಂಬಾ ಯೋಚನೆ ಮಾಡಿ ಇಟ್ಟಿದ್ದೇವೆ. ನಾವೆಲ್ಲರೂ ಒಂದಲ್ಲ ಒಂದು ಸ್ಟ್ರಾಂಗ್ ವೀಕ್ ಪಾಯಿಂಟ್ ಗಳನ್ನು ಹೊಂದಿದ್ದೇವೆ. ಆದರೆ ನಾವೆಲ್ಲರೂ ವಿಶೇಷವಾದದ್ದನ್ನು ಕೂಡ ಹೊಂದಿದ್ದೇವೆ. ಇದೇ ಕಾರಣದಿಂದ ಈ ಥೀಮ್ ತೆಗೆದುಕೊಂಡಿದ್ದೇವೆ. ಈ ಸಿನಿಮಾದಲ್ಲಿ ಒಂಬತ್ತು ಹುಡುಗರು ನನಗೆ ಸಹಾಯ ಮಾಡುತ್ತಾರೆ” ಎಂದು ಅವರು ಹೇಳಿದ್ದಾರೆ.
ಸದ್ಯ ಆಮಿರ್ ಖಾನ್ ಸನ್ನಿ ಡಿಯೋಲ್ ಅವರ, ‘ಲಾಹೋರ್, 1947’ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.