ಸತತ 2 ಬಾರಿ ಶೂನ್ಯಕ್ಕೆ ಔಟಾದ ಆರನ್ ಫಿಂಚ್
Team Udayavani, Apr 18, 2018, 7:25 AM IST
ಹೊಸದಿಲ್ಲಿ: ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಆಸ್ಟ್ರೇಲಿಯದ ಆಟಗಾರ ಆರನ್ ಫಿಂಚ್ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ಮುಜುಗರಕ್ಕೆ ಒಳಗಾಗಿದ್ದಾರೆ. ಫಿಂಚ್ ಈ ವರ್ಷ ಕಿಂಗ್ಸ್ ಇಲೆವೆನ್ ಪಂಚಾಬ್ ಪರ ಆಡುತ್ತಿದ್ದಾರೆ. ಈ ವರ್ಷದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಫ್ರಾಂಚೈಸಿ ಫಿಂಚ್ ಅವರನ್ನು ಖರೀದಿಸಿತ್ತು.
ಫಿಂಚ್ ಅವರು ಇಷ್ಟರವರೆಗೆ ಏಳು ಫ್ರಾಂಚೈಸಿಯಲ್ಲಿ ಆಡಿದ ಮೊದಲ ಆಟಗಾರರೂ ಆಗಿದ್ದಾರೆ. ಅವರು ಈ ಮೊದಲು ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್, ಸನ್‌ರೈಸರ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ಪರ ಆಡಿದ್ದರು.ನಿಜವಾಗಿ ಹೇಳಬೇಕೆಂದರೆ ಶೂನ್ಯಕ್ಕೆ ಔಟಾಗಿರುವುದು ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಫಿಂಚ್ ಹೇಳಿದ್ದಾರೆ.
ವಿಕ್ಟೋರಿಯದಲ್ಲಿ ನಡೆದ ವಿವಾಹದಿಂದಾಗಿ ಫಿಂಚ್ ಈ ಋತುವಿನ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಮುಂದಿನೆರಡು ಪಂದ್ಯಗಳಲ್ಲಿ ಫಿಂಚ್ ಶೂನ್ಯಕ್ಕೆ ಔಟಾಗಿದ್ದರು.ಪಂಜಾಬ್ ಮುಂದಿನ ಪಂದ್ಯದಲ್ಲಿ ಎ. 19ರಂದು ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಾದರೂ ಫಿಂಚ್ ಅವರಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.