ಟೆಸ್ಟ್ ತಂಡಕ್ಕೆ ಎಬಿಡಿ, ಸ್ಟೇನ್
Team Udayavani, Dec 20, 2017, 11:19 AM IST
ಜೊಹಾನ್ಸ್‌ಬರ್ಗ್: ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ ಮತ್ತು ವೇಗಿ ಡೇಲ್ ಸ್ಟೇನ್ ಬಹಳ ಸಮಯದ ಬಳಿಕ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
“ಬಾಕ್ಸಿಂಗ್ ಡೇ’ಯಂದು (ಡಿ. 26) ಪ್ರವಾಸಿ ಜಿಂಬಾಬ್ವೆ ವಿರುದ್ಧ ಆರಂಭವಾಗಲಿರುವ ಮೊದಲ ಚತು ರ್ದಿನ ಟೆಸ್ಟ್ ಪಂದ್ಯಕ್ಕಾಗಿ ಪ್ರಕಟಿಸಲಾದ ತಂಡದಲ್ಲಿ ಈ ಅನುಭವಿಗಳನ್ನು ಸೇರಿಸಿ ಕೊಳ್ಳಲಾಗಿದೆ. ಎಬಿಡಿ ಕಳೆದ ವರ್ಷದ ಜನವರಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಹಾಗೆಯೇ ಕಳೆದ ವರ್ಷ ಪರ್ತ್ ಟೆಸ್ಟ್ ವೇಳೆ ಭುಜದ ನೋವಿಗೆ ಸಿಲುಕಿದ ಬಳಿಕ ಸ್ಟೇನ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಇವರಿಬ್ಬರೊಂದಿಗೆ ವೇಗಿ ವೆರ್ನನ್ ಫಿಲಾಂಡರ್, ಮಾರ್ನೆ ಮಾರ್ಕೆಲ್ ಅವರೂ ಅವಕಾಶ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್ (ನಾಯಕ), ಹಾಶಿಮ್ ಆಮ್ಲ, ಟೆಂಬ ಬವುಮ, ಕ್ವಿಂಟನ್ ಡಿ ಕಾಕ್, ತಿಯುನಿಸ್ ಡಿ ಬ್ರುಯಿನ್, ಎಬಿ ಡಿ ವಿಲಿಯರ್, ಡೀನ್ ಎಲ್ಗರ್, ಕೇಶವ್ ಮಹಾರಾಜ್, ಐಡನ್ ಮಾರ್ಕ್ ರಾಮ್, ಮಾರ್ನೆ ಮಾರ್ಕೆಲ್, ಅಡಿಲ್ ಫೆಲುಕ್ವಾಯೊ, ವೆರ್ನನ್ ಫಿಲಾಂಡರ್, ಕಾಗಿಸೊ ರಬಾಡ, ಡೇಲ್ ಸ್ಟೇನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?