IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
ಕೆಕೆಆರ್ -ರಾಜಸ್ಥಾನ್ ಪಂದ್ಯಕ್ಕೆ ಮಳೆ ಅಡ್ಡಿ.. ಟಾಸ್ ಕೂಡ ಆಗಿಲ್ಲ
Team Udayavani, May 19, 2024, 9:36 PM IST
ಹೈದರಾಬಾದ್ : ಭಾನುವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು.
ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪಂಜಾಬ್ ಕಿಂಗ್ಸ್ ಪ್ರಭಾಸಿಮ್ರಾನ್ ಸಿಂಗ್ ಅವರ 45 ಎಸೆತಗಳಲ್ಲಿ 71 ಮತ್ತು ನಾಯಕ ಜಿತೇಶ್ ಶರ್ಮ ಅವರ ಅಂತಿಮ ಓವರ್‌ನ ಅಮೋಘ ಆಟದಿಂದಾಗಿ 5 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿತು. ಹೈದರಾಬಾದ್ ಮೊದಲ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರ ವಿಕೆಟ್ ಕಳೆದುಕೊಂಡ ನಂತರ ಸಂಪೂರ್ಣ ನಿಯಂತ್ರಣವನ್ನು ತೋರಿ ಐದು ಎಸೆತಗಳು ಬಾಕಿ ಇರುವಂತೆಯೇ ದೊಡ್ಡ ಗುರಿಯನ್ನು ಬೆನ್ನಟ್ಟಿತು. ಅಭಿಷೇಕ್ ಶರ್ಮ ಅವರ ಸ್ಪೋಟಕ ಅರ್ಧಶತಕ, ಕ್ಲಾಸೆನ್ ಅವರ ಅಬ್ಬರದ 42, ರಾಹುಲ್ ತ್ರಿಪಾಠಿ 33 ಮತ್ತು ನಿತೀಶ್ ರೆಡ್ಡಿ ಅವರ 37 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅಭಿಷೇಕ್ ಶರ್ಮ28 ಎಸೆತಗಳಲ್ಲಿ 66 ರನ್ ಚಚ್ಚಿದರು.5 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಸಿಡಿಸಿದರು.
ಅರ್ಶದೀಪ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತರೆ, ಹರ್ ಪ್ರೀತ್ ಬ್ರಾರ್ ಮತ್ತು ಶಶಾಂಕ್ ಸಿಂಗ್ ತಲಾ 1 ವಿಕೆಟ್ ಪಡೆದರು. ಪಂಜಾಬ್ ಪರ ಆರಂಭಿಕರಾಗಿ ಬಂದ ಅಥರ್ವ ಟೈಡೆ 46 ರನ್ ಗಳಿಸಿ ಔಟಾದರು. ರೋಸ್ಸೌ 49 ರನ್ ಗಳಿಸಿ ಅರ್ಧ ಶತಕ ವಂಚಿತರಾದರು. ನಟರಾಜನ್ 2 ವಿಕೆಟ್ ಪಡೆದರು.
ರಾಜಸ್ಥಾನಕ್ಕೆ ಗೆಲುವು ಅಗತ್ಯ
ಇಂದಿನ ಗೆಲುವಿನಿಂದ 14 ಪಂದ್ಯಗಳಿಂದ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಹೈದರಾಬಾದ್ ಎರಡನೇ ಸ್ಥಾನವನ್ನು ಪಡೆದುಕೊಂಡಿತು.ಗುವಾಹಟಿಯಲ್ಲಿ ಭಾನುವಾರ ನಡೆಯುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯುತ್ತಿದೆ.
ಕೆಕೆಆರ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 16 ಅಂಕಗಳನ್ನು ಹೊಂದಿರುವ ರಾಜಸ್ಥಾನ ಗೆದ್ದರೆ 2ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡವನ್ನು ಕೆಳಕ್ಕೆ ಜಾರಿಸುವ ಸಾಧ್ಯತೆ ಇದೆ. ಪಂದ್ಯ ಮಳೆಯಿಂದಾಗಿ ವಿಳಂಬವಾಗಿದೆ.ಟಾಸ್ ಕೂಡ ಸಾಧ್ಯವಾಗಿಲ್ಲ. ಐದು ಓವರ್‌ಗಳ ಆಟಕ್ಕೆ ಕಟ್-ಆಫ್ ಸಮಯ ರಾತ್ರಿ 10:56 ಆಗಿದೆ. ಅದಕ್ಕಿಂತ 15 ನಿಮಿಷಗಳ ಮೊದಲು ಟಾಸ್ ಆಗಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.