Archery World Cup Stage 3: ಚಿನ್ನ ಗೆದ್ದ ಅಭಿಷೇಕ್ ವರ್ಮ
Team Udayavani, Jun 19, 2023, 8:30 AM IST
ಮೆಡೆಲಿನ್ (ಕೊಲಂಬಿಯ): ಭಾರತದ ಅಭಿಷೇಕ್ ವರ್ಮ ಅವರು ಇಲ್ಲಿ ಸಾಗುತ್ತಿರುವ ವಿಶ್ವಕಪ್ ಆರ್ಚರಿ ಮೂರನೇ ಹಂತದ ಪುರುಷರ ಕಾಂಪೌಂಡ್ ವೈಯಕ್ತಿಯ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಪದಕಗಳ ಪಟ್ಟಿಗೆ ಇನ್ನೊಂದು ಪದಕ ಸೇರಿಸಿದ್ದಾರೆ.
2014ರ ಇಂಚಿಯಾನ್ ಏಷ್ಯನ್ ಗೇಮ್ಸ್ನ ಕಾಂಪೌಂಡ್ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ವೈಯಕ್ತಿಕವಾಗಿ ಬೆಳ್ಳಿ ಜಯಿಸಿದ್ದ 33ರ ಹರೆಯದ ಅಭಿಷೇಕ್ ಫೈನಲ್ ಹೋರಾಟದಲ್ಲಿ ಅಮೆರಿಕದ ಜೇಮ್ಸ್ ಲುಟ್ಜ್ ಅವರನ್ನು 148-146 ಅಂತರದಿಂದ ಸೋಲಿಸಿದರು.
ವಿಶ್ವಕಪ್ನಲ್ಲಿ ಹಲವು ಚಿನ್ನದ ಪದಕ ಗೆದ್ದಿರುವ ಅಭಿಷೇಕ್ ಈ ವಿಶ್ವಕಪ್ನ ಮೊದಲೆರಡು ಹಂತಗಳಲ್ಲಿ ಆಡಿರಲಿಲ್ಲ. ಮೂರನೇ ಹಂತದ ಈ ಹಿಂದಿನ ಸುತ್ತುಗಳಲ್ಲಿ ಅವರು ವಿಶ್ವದ ನಂಬರ್ ವನ್ ಮತ್ತು ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್ನ ಮೈಕ್ ಸ್ಕೋಸ್ಸರ್ ಅವರನ್ನು ಶೂಟ್ ಆಫ್ನಲ್ಲಿ ಸೋಲಿಸಿ ಸೆಮಿಫೈನಲ್ ಹಂತಕ್ಕೇರಿದ್ದರು. ಎಂಟನೇ ಶ್ರೇಯಾಂಕದ ವರ್ಮ ಆಬಳಿಕ ಬ್ರಝಿಲ್ನ ಲುಕಾಸ್ ಅಬ್ರೆಯು ಅವರನ್ನು ಸೋಲಸಿ ಫೈನಲಿಗೇರಿದ್ದರು.
ಇದು ವಿಶ್ವಕಪ್ನಲ್ಲಿ ಅಭಿಷೇಕ್ ಪಡೆದ ಮೂರನೇ ವೈಯಕ್ತಿಕ ಚಿನ್ನವಾಗಿದೆ. 2021ರ ಪ್ಯಾರಿಸ್ ಬಳಿಕ ಗೆದ್ದ ಮೊದಲ ಪದಕವೂ ಆಗಿದೆ. 2015ರಲ್ಲಿ ಪೋಲಂಡಿನ ವ್ರೊಕ್ಲಾದಲ್ಲಿ ನಡೆದ ವಿಶ್ವಕಪ್ನಲ್ಲಿ ಅವರು ಮೊದಲ ಬಾರಿ ಚಿನ್ನ ಜಯಿಸಿದ್ದರು. ವಿಶ್ವಕಪ್ನಲ್ಲಿ ಅವರು ಈ ಹಿಂದೆ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದ್ದರು.
ಭಾರತೀಯ ತಂಡ ಈ ವಿಶ್ವಕಪ್ನಲ್ಲಿ ಇದೀಗ ಒಂದು ಚಿನ್ನ ಸಹಿತ ಮೂರು ಕಂಚಿನ ಪದಕ ಗೆದ್ದುಕೊಂಡಿದೆ. ರಿಕರ್ವ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಅವಕಾಶ ಪಡೆದಿದೆ. ಈ ತಂಡ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಸೆಮಿಫೈನಲಿಗೇರಿತ್ತು. ಆದರೆ ಅಲ್ಲಿ ಕೊರಿಯಕ್ಕೆ ಶರಣಾಗಿತ್ತು. ಇದೀಗ ಕಂಚಿನ ಪದಕಕ್ಕಾಗಿ ಚೈನೀಸ್ ತೈಪೆ ಜತೆ ಹೋರಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.