ಬಿಸಿಸಿಐ ಪ್ರಕಾರ ಕೊಹ್ಲಿ-ಕುಂಬ್ಳೆ ನಡುವೆ ವಿರಸವೇ ಇಲ್ಲವಂತೆ!
Team Udayavani, Jul 3, 2017, 3:45 AM IST
ನವದೆಹಲಿ: ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ ವಿವಾದ ತಾರಕ್ಕೇರಿದ್ದು, ಪರಿಣಾಮ ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಬಿಸಿಸಿಐ ಪ್ರಕಾರ ಇಬ್ಬರ ನಡುವೆ ಯಾವುದೇ ಸಮಸ್ಯೆಯಾಗಿಲ್ಲ!
ಹೌದು , ತಂಡದ ವ್ಯವಸ್ಥಾಪಕ ಕಪಿಲ್ ಮಲ್ಹೋತ್ರಾ ನೀಡಿರುವ ವರದಿಯಲ್ಲಿ ಇಬ್ಬರ ನಡುವಿನ ವಿರಸದ ಬಗ್ಗೆ ಒಂದೇ ಒಂದು ಘಟನೆ ಪ್ರಸ್ತಾಪವಾಗಿಲ್ಲವಂತೆ. ಹೀಗೆಂದು ಬಿಸಿಸಿಐ ಮಲ್ಹೋತ್ರಾ ವರದಿ ಉಲ್ಲೇಖೀಸಿ ಹೇಳಿಕೊಂಡಿದೆ.
ಸಾಮಾನ್ಯವಾಗಿ ಪ್ರತಿ ಸರಣಿಯಾದ ಮೇಲೆ ತಂಡದ ವ್ಯವಸ್ಥಾಪಕರು ವರದಿ ನೀಡುವುದು ಔಪಚಾರಿಕತೆ. ಆದರೆ ಈ ಬಾರಿ ಬಿಸಿಸಿಐ ಆಸಕ್ತಿ ವಹಿಸಿ ವರದಿ ಕೇಳಿತ್ತು. ಇಬ್ಬರ ನಡುವೆ ವಿರಸ ಉಂಟಾಗಿದ್ದರೆ ಅಂತಹ ನಿರ್ದಿಷ್ಟ ಘಟನೆಗಳನ್ನು ಉಲ್ಲೇಖೀಸಬೇಕು ಎಂದು ತಾಕೀತು ಮಾಡಿತ್ತು. ಆದರೆ ವ್ಯವಸ್ಥಾಪಕ ಮಲ್ಹೋತ್ರಾ ಅಂತಹ ಯಾವುದೇ ಘಟನೆ ಉಲ್ಲೇಖೀಸಿಲ್ಲ ಎಂದು ಬಿಸಿಸಿಐ ಹೇಳಿದೆ. ಈ ಮೂಲಕ ಇಬ್ಬರ ನಡುವೆ ವಿರಸವೇ ನಡೆದಿಲ್ಲ ಎಂದು ಹೇಳಿದೆ.
ಇಬ್ಬರ 6 ತಿಂಗಳಿಂದ ಮಾತುಕತೆಯೇ ಇರಲಿಲ್ಲವಲ್ಲ ಎಂಬ ಪ್ರಶ್ನೆಗೂ ಬಿಸಿಸಿಐನದ್ದು ಜಾಣ ಉತ್ತರವಾಗಿತ್ತು. ಮಲ್ಹೋತ್ರಾ ವರದಿಯಲ್ಲಿ ವಿರಸದ ಪ್ರಸ್ತಾಪವೇ ಇಲ್ಲ, ಹಾಗಿರುವಾಗ ಮಾತು ಬಿಡುವ ಪ್ರಶ್ನೆಯೆಲ್ಲಿ ಎಂದು ಕೇಳಿದೆ. ಗಮನಿಸಬೇಕಾದ ಸಂಗತಿಯೆಂದರೆ ಸ್ವತಃ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡುವಾಗ, ಕೊಹ್ಲಿಗೆ ಇಷ್ಟವಿಲ್ಲದಿರುವುದರಿಂದಲೇ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆಂದು ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.