2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು: ಅಚಂತ ಶರತ್ ಕಮಲ್
Team Udayavani, Aug 16, 2022, 7:30 AM IST
ಚೆನ್ನೈ: ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 4 ಪದಕ ಗೆದ್ದು, 40ನೇ ವರ್ಷದಲ್ಲೂ ಅಮೋಘ ಸಾಧನೆಗೈದ ಟಿಟಿಪಟು ಅಚಂತ ಶರತ್ ಕಮಲ್ ಒಲಿಂಪಿಕ್ಸ್ ಗ್ಲೋರಿಯೊಂದಿಗೆ ವೃತ್ತಿಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದಾರೆ.
ಕಳೆದ 20 ವರ್ಷಗಳಿಂದಲೂ ಉನ್ನತ ಮಟ್ಟದ ಪ್ರದರ್ಶನ ನೀಡುತ್ತಲೇ ಇರುವ ಅಚಂತ ಶರತ್ ಕಮಲ್, ತಮ್ಮ ಕ್ರೀಡಾ ಬದುಕಿನಲ್ಲಿ ಇನ್ನೂ ಒಲಿಂಪಿಕ್ಸ್ ಪದಕ ಗೆದ್ದಿಲ್ಲ. ಈಗಿನ ಬರ್ಮಿಂಗ್‌ಹ್ಯಾಮ್ ಗೇಮ್ಸ್ ಸಾಧನೆ ಕಂಡಾಗ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಬಾಗಿಲು ತೆರೆದೀತು ಎಂಬುದು ಅವರ ನಂಬಿಕೆ.
“ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನನ್ನ ಬದುಕಿನ ಶ್ರೇಷ್ಠ ಕ್ರೀಡಾಕೂಟ. ಈವರೆಗೆ ನಾನು ಒಂದೇ ಕೂಟದಲ್ಲಿ 3 ಪದಕ ಗೆದ್ದಿರಬಹುದು, ಆದರೆ 4 ಪದಕ ಜಯಿಸಿದ್ದು ಇದೇ ಮೊದಲು. ಸದ್ಯ ನಿವೃತ್ತಿ ನಿರ್ಧಾರ ಮಾಡಿಲ್ಲ. ನನ್ನ ಪದಕಗಳ ಹಸಿವು ಇನ್ನೂ ಇಂಗಿಲ್ಲ. ಫಿಟ್‌ನೆಸ್ ಎಂಬುದು ನಮ್ಮ ಪಾಲಿನ ಕೀ. ಇದನ್ನು ಕಾಪಾಡಿಕೊಂಡರೆ ಒಲಿಂಪಿಕ್ಸ್ ಅರ್ಹತೆ ಅಸಾಧ್ಯವಲ್ಲ. ಪ್ಯಾರಿಸ್ ತಂಡ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದೇ ಆದಲ್ಲಿ ಪದಕವೊಂದನ್ನು ಗೆಲ್ಲುವುದು ಖಚಿತ’ ಎಂಬ ದೃಢ ವಿಶ್ವಾಸ ಶರತ್ ಕಮಲ್ ಅವರದು.
ಹಂತ ಹಂತದ ಪ್ರಕ್ರಿಯೆ
“ಇದೊಂದು ಹಂತ ಹಂತದ ಪ್ರಕ್ರಿಯೆ. ಮೊದಲು ನಾವು ಕಾಮನ್ವೆಲ್ತ್ ಗೇಮ್ಸ್ ಹಂತ ತಲುಪಿದೆವು. ಮುಂದಿನದು ಏಷ್ಯಾಡ್. ಅನಂತರವೇ ಒಲಿಂಪಿಕ್ಸ್ ಸರದಿ. ಗೇಮ್ಸ್ ಚಿನ್ನಕ್ಕಾಗಿ ನಾನು 16 ವರ್ಷ ಕಾದೆ. 2006ರ ಬಳಿಕ ಇದು ಒಲಿದದ್ದು ಮೊನ್ನೆಯಷ್ಟೆ. 2006ರಲ್ಲಿ ನಾನು ಚಿಕ್ಕವ. ರ್‍ಯಾಂಕಿಂಗ್ 130ರಷ್ಟು ಕೆಳ ಮಟ್ಟದಲ್ಲಿತ್ತು. ನನ್ನ ಮೇಲೆ ಯಾವುದೇ ನಿರೀಕ್ಷೆ ಇರಲಿಲ್ಲ. ಈ ಬಾರಿ ನಿರೀಕ್ಷೆ ವಿಪರೀತವಾಗಿತ್ತು. ದೇಶದಲ್ಲಿ ಟಿಟಿ ಜನಪ್ರಿಯತೆ ಹೆಚ್ಚುತ್ತಿದೆ. ಯುವ ಜನಾಂಗದ ಮೇಲೆ ನಮ್ಮ ಸಾಧನೆ ಖಂಡಿತವಾಗಿಯೂ ಪ್ರಭಾವ ಬೀರಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಅಚಂತ ಶರತ್ ಕಮಲ್.
“ನಾನೀಗ 38ನೇ ರ್‍ಯಾಂಕಿಂಗ್ ಹೊಂದಿದ್ದೇನೆ.ನನಗಿಂತ ಉನ್ನತ ರ್‍ಯಾಂಕಿಂಗ್‌ನ ಜಿ. ಸಥಿಯನ್ (36) ನಮ್ಮಲ್ಲೇ ಇದ್ದಾರೆ. ಇಷ್ಟು ಮೇಲ್ಮಟ್ಟದ ರ್‍ಯಾಂಕಿಂಗ್ ಆಟಗಾರರನ್ನು ನಮ್ಮ ದೇಶ ಯಾವತ್ತೂ ಹೊಂದಿರಲಿಲ್ಲ’ ಎಂಬ ಖುಷಿ ಶರತ್ ಕಮಲ್ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.