ಗಾವಸ್ಕರ್ ಹೇಳಿಕೆಗೆ ಅನುಷ್ಕಾ ಕಿಡಿ
Team Udayavani, Sep 26, 2020, 6:24 AM IST
ಮುಂಬಯಿ: ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯವರ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಯಿಂದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೆರಳಿದ್ದಾರೆ.
ಗಾವಸ್ಕರ್ ಅವರು ತಮ್ಮ ಹೇಳಿಕೆಯ ಅರ್ಥವನ್ನು ವಿವರಿಸಬೇಕೆಂದು ಆಗ್ರಹಿಸಿದ್ದಾರೆ.
ಆರ್‌ಸಿಬಿ-ಪಂಜಾಬ್ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಗಾವಸ್ಕರ್, “ಲಾಕ್‌ಡೌನ್ ಅವಧಿಯಲ್ಲಿ ಕೊಹ್ಲಿ ಕ್ರಿಕೆಟ್ ಅಭ್ಯಾಸ ನಡೆಸಿಲ್ಲ. ಅವರು ಕೇವಲ ಅನುಷ್ಕಾ ಬೌಲಿಂಗ್ ಮಾತ್ರ ಎದುರಿಸಿದ್ದಾರೆ ಎನ್ನಿಸುತ್ತದೆ. ಹಾಗಾಗಿಯೇ ಅವರ ಪ್ರದರ್ಶನ ಕಳಪೆಯಾಗಿದೆ’ ಎಂದಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಾವಸ್ಕರ್ ಅವರನ್ನು ಕಮೆಂಟ್ರಿ ತಂಡದಿಂದ ಕಿತ್ತುಹಾಕಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅನುಷ್ಕಾ, “ಗೌರವಾನ್ವಿತ ಗಾವಸ್ಕರ್ ಅವರೇ, ನೀವು ಜಂಟ್ಲಮನ್ ಕ್ರೀಡೆಯ ಲೆಜೆಂಡ್. ನಿಮ್ಮ ಹೇಳಿಕೆ ಅಸಹ್ಯ ಹುಟ್ಟಿಸುವಂತಿದೆ. ಪ್ರತೀ ಬಾರಿಯೂ ಕೊಹ್ಲಿ ವಿಫಲವಾದಾಗ ಅದಕ್ಕೆ ನಾನೇ ಕಾರಣ ಎಂಬಂತೆ ಮಾತನಾಡುವುದೇಕೋ ತಿಳಿಯದು. ಈ ಚಾಳಿ ಎಲ್ಲಿಗೆ ಕೊನೆಗೊಳ್ಳುತ್ತದೋ ನಾ ಕಾಣೆ. ದಯವಿಟ್ಟು ತಮ್ಮ ಹೇಳಿಕೆಯನ್ನು ವಿವರಿಸಿ ಹೇಳಬೇಕು…’ ಎಂದಿದ್ದಾರೆ.
ಗಾವಸ್ಕರ್ ಸ್ಪಷ್ಟನೆ
ಅನುಷ್ಕಾ ಅವರ ಹೇಳಿಕೆಗೆ ಸುನೀಲ್ ಗಾವಸ್ಕರ್ ಸ್ಪಷ್ಟನೆ ನೀಡಿದ್ದಾರೆ.ತನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿದ್ದೇ ವಿವಾದಕ್ಕೆ ಕಾರಣ ಎಂದಿದ್ದಾರೆ.
“ನನ್ನ ಹೇಳಿಕೆಯನ್ನು ಮತ್ತೂಮ್ಮೆ ಕೇಳಿ. ನಾನು ಎಲ್ಲೂ ಅನುಷ್ಕಾ ಅವರನ್ನು ಬೈಯ್ದಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಕೊಹ್ಲಿ ಮನೆಯಲ್ಲೇ ಕ್ರಿಕೆಟ್ ಅಭ್ಯಾಸ ಮಾಡಿರಬೇಕು. ಆಗ ಅವರು ಕೇವಲ ಅನುಷ್ಕಾ ಅವರ ಬೌಲಿಂಗ್ ಅನ್ನು ಎದುರಿಸುತ್ತಾರೆ. ಬಹುಶಃ ಮನೆಯಲ್ಲಿ ಅವರು ಟೆನಿಸ್ ಬಾಲ್‌ನಿಂದ ಅಭ್ಯಾಸ ನಡೆಸಿರಬೇಕು. ಹಾಗಾಗಿ ವೃತ್ತಿಪರರ ಬೌಲಿಂಗ್ ಎದುರಿಸುವಾಗ ಅವರಿಗೆ ಸಮಸ್ಯೆಯಾಗುತ್ತಿದೆ ಎಂಬರ್ಥದಲ್ಲಿ ಹೇಳಿದ್ದೆ’ ಎಂಬುದಾಗಿ ಗಾವಸ್ಕರ್ ಸ್ಪಷ್ಟನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕೊಕೇನ್, ಚರಸ್ ಸೇವನೆ; ಮೂವರ ಬಂಧನ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Brahmavar: ಕಂಟೈನರ್ ಢಿಕ್ಕಿ; ಬೈಕ್ ಸಹಸವಾರೆ ಸಾವು
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.