ಆ್ಯಡಂ ಪೀಟಿ ಈಜು ದಾಖಲೆ
Team Udayavani, Aug 6, 2018, 7:35 AM IST
ಲಂಡನ್, ವಿಶ್ವದ ಅಗ್ರಮಾನ್ಯ ಈಜುಗಾರ ಆ್ಯಡಂ ಪೀಟಿ ತಮ್ಮ ಸಾಮರ್ಥ್ಯವನ್ನು ಮತ್ತೂಮ್ಮೆ ರುಜುವಾತುಪಡಿಸಿದ್ದಾರೆ. 100 ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ತಮ್ಮದೇ ವಿಶ್ವ ದಾಖಲೆಯನ್ನು ಉತ್ತಮಪಡಿಸಿಕೊಂಡು, ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಬಾರಿ ಅವರು ಕೇವಲ 57 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ಅವರು 9ನೇ ಬಾರಿ ಯುರೋಪಿಯನ್ ಲಾಂಗ್ ಕೋರ್ಸ್ ಟೈಟಲ್ ಗೆದ್ದಂತಾಗಿದೆ.
ಇಂಗ್ಲೆಂಡಿನ 23ರ ಹರೆಯದ ಪೀಟಿ 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ದಾಖಲೆ ಸ್ಥಾಪಿಸಿದ್ದರು. ಈಗ ಇದಕ್ಕಿಂತ 0.13 ಸೆಕೆಂಡ್‌ಗಳಷ್ಟು ಬೇಗ ಈಜಿ ತಮ್ಮದೇ ದಾಖಲೆಯನ್ನು ತಿದ್ದಿ ಬರೆದರು. “ಇದು ಅಮೋಘ. ಆದರೆ, ನಾನು ದಾಖಲೆ ಮಾಡುವುದನ್ನು ಗುರಿಯಾಗಿಸಿಕೊಂಡಿರಲಿಲ್ಲ. ಕೊಳದಲ್ಲಿ ಮುಳುಗು ಹಾಕಿದೊಡನೆ ಅದಮ್ಯ ಚೈತನ್ಯ ಸಿಕ್ಕಂತಾಯಿತು. ಗುರಿ ಮುಟ್ಟಿದೊಡನೆ ಸಮಯ ನೋಡಿರಲಿಲ್ಲ. “ನೋ ವೇ’ ಎಂದು ಕಿರುಚಿದೆ. ಆದರೆ, ದಾಖಲೆ ನಿರ್ಮಾಣವಾಗಿದೆ ಎಂಬುದನ್ನು ಅರಿಯಲು ಸ್ವಲ್ಪ ಸಮಯ ಹಿಡಿಯಿತು’ ಎಂದಿದ್ದಾರೆ ಆ್ಯಡಂ ಪೀಟಿ.
ಬೆಳ್ಳಿ ಗೆದ್ದ ಇಂಗ್ಲೆಂಡ್‌ನವರೇ ಆದ ಜೇಮ್ಸ್ ವಿಲ್ಬಿ, ಪೀಟಿ ಅವರಿಗಿಂತ 1.54 ಸೆಕೆಂಡ್ ಹಿಂದಿದ್ದರು ಎಂದರೆ ಚಿನ್ನದ ಮೀನಿನ ಮಿಂಚಿನ ವೇಗವನ್ನು ಊಹಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open ಗ್ರ್ಯಾನ್ ಸ್ಲಾಮ್ ಟೆನಿಸ್ ಡ್ರಾ
Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್ ಫೈನಲ್‌ಗೆ
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.