ಶತಕವೀರ ಪೂಜಾರ; ಭಾರತಕ್ಕೆ ಆಧಾರ


Team Udayavani, Dec 7, 2018, 6:00 AM IST

ap1262018000001b.jpg

ಅಡಿಲೇಡ್‌: ಬಹು ನಿರೀಕ್ಷೆಯ ಹಾಗೂ ಭಾರೀ ಸವಾಲಿನ ಆಸ್ಟ್ರೇಲಿಯ ಪ್ರವಾಸವನ್ನು ಟೀಮ್‌ ಇಂಡಿಯಾ “ಬ್ಯಾಟಿಂಗ್‌ ವೈಫ‌ಲ್ಯ’ದೊಂದಿಗೆ ಆರಂಭಿಸಿದೆ. ಆದರೆ “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಕಾಂಗರೂ ಬೌಲರ್‌ಗಳಿಗೆ ಸವಾಲಾಗಿ ನಿಂತು ಅಡಿಲೇಡ್‌ ಟೆಸ್ಟ್‌ ಪಂದ್ಯದ ಮೊದಲ ದಿನ ತಂಡದ ಮರ್ಯಾದೆಯನ್ನು ಕಾಪಾಡಿದ್ದಾರೆ. ಭಾರತ 9 ವಿಕೆಟಿಗೆ 250 ರನ್‌ ಗಳಿಸುವಲ್ಲಿ ಯಶಸ್ವಿಯಾಗಿದೆ.

ಇದರಲ್ಲಿ ಚೇತೇಶ್ವರ್‌ ಪೂಜಾರ ಪಾಲು 123 ರನ್‌. ಭಾರತದ ಒಟ್ಟು ಮೊತ್ತದ ಅರ್ಧದಷ್ಟು ರನ್‌ ಪೂಜಾರ ಬ್ಯಾಟಿನಿಂದಲೇ ಹರಿದು ಬಂತು. 246 ಎಸೆತಗಳ ಈ ಅಮೋಘ ಆಟದ ವೇಳೆ 7 ಬೌಂಡರಿ ಜತೆಗೆ 2 ಸಿಕ್ಸರ್‌ಗಳೂ ಸಿಡಿಯಲ್ಪಟ್ಟವು. ದಿನದಾಟದ ಮುಕ್ತಾಯಕ್ಕೆ ಇನ್ನೇನು ಎರಡೂ ಚಿಲ್ಲರೆ ಓವರ್‌ ಇರುವಾಗ ರನೌಟಾಗಿ ನಿರ್ಗಮಿಸುವುದರೊಂದಿಗೆ ಪೂಜಾರ ಅವರ ಈ ಸೊಗಸಾದ ಆಟಕ್ಕೆ ತೆರೆ ಬಿತ್ತು. ಇದಕ್ಕೂ ಮುನ್ನ ಅವರು ಅಶ್ವಿ‌ನ್‌ ಜತೆ “ಮಿಕ್ಸ್‌ ಅಪ್‌’ ಮಾಡಿಕೊಂಡು ರನೌಟ್‌ನಿಂದ ಸ್ವಲ್ಪದರಲ್ಲೇ ಪಾರಾಗಿದ್ದರು.

ಇದು 65ನೇ ಟೆಸ್ಟ್‌ನಲ್ಲಿ ಪೂಜಾರ ಬಾರಿಸಿದ 16ನೇ ಶತಕ. ಆಸ್ಟ್ರೇಲಿಯದಲ್ಲಿ ಮೊದಲನೆಯದು. 3ನೇ ಓವರಿನಲ್ಲಿ ಬ್ಯಾಟ್‌ ಹಿಡಿದು ಬಂದ ಪೂಜಾರ, ಒಂದೆಡೆ ವಿಕೆಟ್‌ ಉರುಳುತ್ತಿದ್ದುದನ್ನೂ ಲೆಕ್ಕಿಸದೆ ಟಿಪಿಕಲ್‌ ಟೆಸ್ಟ್‌ ಶೈಲಿಯ ಬ್ಯಾಟಿಂಗ್‌ ಮೂಲಕ ಕಾಂಗರೂ ದಾಳಿಗೆ ಕಗ್ಗಂಟಾಗುತ್ತ ಹೋದರು. ಭಾರತವನ್ನು ನಿಧಾನವಾಗಿ ಮೇಲೆತ್ತುತ್ತ ಸಾಗಿದರು.

86 ರನ್ನಿಗೆ ಬಿತ್ತು 5 ವಿಕೆಟ್‌
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿದ ಭಾರತದ ನಿರ್ಧಾರಕ್ಕೆ ನ್ಯಾಯ ಸಲ್ಲಿಸಲು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫ‌ಲರಾದರು. “ಅಡಿಲೇಡ್‌ ಹೀರೋ’ ಕೊಹ್ಲಿ ಕೂಡ ಈ ಸಾಲಲ್ಲಿದ್ದರು. 38ನೇ ಓವರಿನಲ್ಲಿ 86 ರನ್‌ ಆಗುವಷ್ಟರಲ್ಲಿ ಅರ್ಧದಷ್ಟು ಮಂದಿಯ ಆಟ ಮುಗಿದಾಗಿತ್ತು. 250 ರನ್‌ ಇರಲಿ, ನೂರೈವತ್ತರ ಗಡಿ ಮುಟ್ಟುವುದೂ ಪ್ರವಾಸಿಗರಿಗೆ ಭಾರೀ ಸವಾಲಾಗಿ ಕಂಡಿತ್ತು. ಆದರೆ ಜಾರುತ್ತಿದ್ದ ಭಾರತಕ್ಕೆ ಪೂಜಾರ ಜವಾಬ್ದಾರಿಯುತ ಶತಕದ ಮೂಲಕ ಆಸರೆಯಾದರು.

ವೇಗಿಗಳಾದ ಸ್ಟಾರ್ಕ್‌, ಹ್ಯಾಝಲ್‌ವುಡ್‌, ಕಮಿನ್ಸ್‌, ಸ್ಪಿನ್ನರ್‌ ಲಿಯೋನ್‌ ಅವರ ಸಾಂ ಕ ಬೌಲಿಂಗ್‌ ದಾಳಿ ಭಾರತದ ಇನ್ನಿಂಗ್ಸಿನ ದಿಕ್ಕು ತಪ್ಪಿಸಿತು. ಆರಂಭಿಕರಾದ ಕೆ.ಎಲ್‌. ರಾಹುಲ್‌ (2), ಮುರಳಿ ವಿಜಯ್‌ (11) 7 ಓವರ್‌ ಆಗುವಷ್ಟರಲ್ಲಿ ಆಟ ಮುಗಿಸಿ ಮರಳಿದರು. ಆಗ ಭಾರತ ಸ್ಕೋರ್‌ಬೋರ್ಡ್‌ ಕೇವಲ 15 ರನ್‌ ತೋರಿಸುತ್ತಿತ್ತು. ನಾಲ್ಕೇ ರನ್‌ ಅಂತರದಲ್ಲಿ ಕೊಹ್ಲಿ ವಿಕೆಟ್‌ ಕೂಡ ಉರುಳಿತು. 

ಕಳೆದ ಸಲ “ಅಡಿಲೇಡ್‌ ಓವಲ್‌’ನಲ್ಲಿ ಮೊದಲ ಸಲ ಭಾರತವನ್ನು ಟೆಸ್ಟ್‌ ಪಂದ್ಯದಲ್ಲಿ ಮುನ್ನಡೆಸಿದ “ಅವಳಿ ನೂರು’ ಹೊಡೆದಿದ್ದ ಕೊಹ್ಲಿಯ ಈ ಸಲದ ಗಳಿಕೆ ಬರೀ ಮೂರು. ಟೀಮ್‌ ಇಂಡಿಯಾ ಕಪ್ತಾನನನ್ನು ಅಗ್ಗಕ್ಕೆ ಉರುಳಿಸುವ ಕಾರ್ಯತಂತ್ರವನ್ನು ಕಮಿನ್ಸ್‌ ಯಶಸ್ವಿಗೊಳಿಸಿದ್ದರು. ಖ್ವಾಜಾ ಒಂದೇ ಕೈಯಲ್ಲಿ ಪಡೆದ ಈ ಅಮೋಘ ಕ್ಯಾಚ್‌ ಬಳಿಕ ವೈರಲ್‌ ಆಯಿತು. ರಹಾನೆ 13ರ ಗಡಿ ದಾಟಲಿಲ್ಲ. ಲಂಚ್‌ ವೇಳೆ ಭಾರತದ ಸ್ಕೋರ್‌ 4ಕ್ಕೆ 56 ರನ್‌.

ಪಂತ್‌, ಅಶ್ವಿ‌ನ್‌ ನೆರವು
2ನೇ ಅವಧಿಯ ಬಳಿಕ ಪೂಜಾರ ಕೆಳ ಸರದಿಯ ಆಟಗಾರರ ನೆರವಿನಿಂದ ಇನ್ನಿಂಗ್ಸ್‌ ಕಟ್ಟಲಾರಂಭಿಸಿದರು. ಈ ನಡುವೆ ರೋಹಿತ್‌ ಶರ್ಮ 37 ರನ್‌ ಸಿಡಿಸಿ ನಿರ್ಗಮಿಸಿದರು (61 ಎಸೆತ, 2 ಬೌಂಡರಿ, 3 ಸಿಕ್ಸರ್‌). ರಿಷಬ್‌ ಪಂತ್‌, ಆರ್‌. ಅಶ್ವಿ‌ನ್‌ (ತಲಾ 25) ಆಸೀಸ್‌ ದಾಳಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಟೀ ವೇಳೆ 6ಕ್ಕೆ 143 ರನ್‌ ಮಾಡಿದ್ದ ಭಾರತ, ಅಂತಿಮ ಅವಧಿಯಲ್ಲಿ 107 ರನ್‌ ಪೇರಿಸಿತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌

ಕೆ.ಎಲ್‌. ರಾಹುಲ್‌    ಸಿ ಫಿಂಚ್‌ ಬಿ ಹ್ಯಾಝಲ್‌ವುಡ್‌    2
ಮುರಳಿ ವಿಜಯ್‌    ಸಿ ಪೇನ್‌ ಬಿ ಸ್ಟಾರ್ಕ್‌    11
ಚೇತೇಶ್ವರ್‌ ಪೂಜಾರ    ರನೌಟ್‌    123
ವಿರಾಟ್‌ ಕೊಹ್ಲಿ    ಸಿ ಖ್ವಾಜಾ ಬಿ ಕಮಿನ್ಸ್‌    3
ಅಜಿಂಕ್ಯ ರಹಾನೆ    ಸಿ ಹ್ಯಾಂಡ್ಸ್‌ಕಾಂಬ್‌ ಬಿ ಹ್ಯಾಝಲ್‌ವುಡ್‌    13
ರೋಹಿತ್‌ ಶರ್ಮ    ಸಿ ಹ್ಯಾರಿಸ್‌ ಬಿ ಲಿಯೋನ್‌    37
ರಿಷಬ್‌ ಪಂತ್‌    ಸಿ ಪೇನ್‌ ಬಿ ಲಿಯೋನ್‌    25
ಆರ್‌. ಅಶ್ವಿ‌ನ್‌    ಸಿ ಹ್ಯಾಂಡ್ಸ್‌ಕಾಂಬ್‌ ಬಿ ಕಮಿನ್ಸ್‌    25
ಇಶಾಂತ್‌ ಶರ್ಮ    ಬಿ ಸ್ಟಾರ್ಕ್‌    4
ಮೊಹಮ್ಮದ್‌ ಶಮಿ    ಔಟಾಗದೆ    6
ಇತರ        1
ಒಟ್ಟು  (9 ವಿಕೆಟಿಗೆ)        250
ವಿಕೆಟ್‌ ಪತನ: 1-3, 2-15, 3-19, 4-41, 5-86, 6-127, 7-189, 8-210, 9-250.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        19-4-63-2
ಜೋಶ್‌ ಹ್ಯಾಝಲ್‌ವುಡ್‌        19.5-3-52-2
ಪ್ಯಾಟ್‌ ಕಮಿನ್ಸ್‌        19-3-49-2
ನಥನ್‌ ಲಿಯೋನ್‌        28-2-83-2
ಟ್ರ್ಯಾವಿಸ್‌ ಹೆಡ್‌        2-1-2-0

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಚೇತೇಶ್ವರ್‌ ಪೂಜಾರ ಆಸ್ಟ್ರೇಲಿಯದಲ್ಲಿ ಆಡಲಾದ ಟೆಸ್ಟ್‌ ಸರಣಿಯ ಮೊದಲ ದಿನದಾಟದಲ್ಲೇ ಶತಕ ಹೊಡೆದ ಮೊದಲ ಭಾರತೀಯ. ಇದು ಅವರ 16ನೇ ಶತಕ.
* ಪೂಜಾರ ಆಸ್ಟ್ರೇಲಿಯ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕನಿಷ್ಠ ಒಂದು ಶತಕ ಹೊಡೆದ ಭಾರತದ 6ನೇ ಬ್ಯಾಟ್ಸ್‌ಮನ್‌. ಉಳಿದವರೆಂದರೆ ಅಜರುದ್ದೀನ್‌, ತೆಂಡುಲ್ಕರ್‌, ದ್ರಾವಿಡ್‌, ಸೆಹವಾಗ್‌ ಮತ್ತು ಕೊಹ್ಲಿ.
* ಪೂಜಾರ 108 ಇನ್ನಿಂಗ್ಸ್‌ಗಳಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಿದರು. ಅತೀ ವೇಗದಲ್ಲಿ 5 ಸಾವಿರ ರನ್‌ ಪೂರೈಸಿದ ಭಾರತದ ಸಾಧಕರಲ್ಲಿ ಅವರಿಗೆ ಜಂಟಿ 5ನೇ ಸ್ಥಾನ. ಇದೇ ವೇಳೆ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರೈಸಿದರು.
* ಪೂಜಾರ ಅವರ 123 ರನ್‌ ಎನ್ನುವುದು ಆಸ್ಟ್ರೇಲಿಯ ಸರಣಿಯ ಪ್ರಥಮ ದಿನದಲ್ಲಿ ವಿದೇಶಿ ಕ್ರಿಕೆಟಿಗನಿಂದ ದಾಖಲಾದ 3ನೇ ಅತ್ಯಧಿಕ ವೈಯಕ್ತಿಕ ಗಳಿಕೆ. 1960ರ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಗ್ಯಾರಿ ಸೋಬರ್ 132 ರನ್‌, 1936ರ ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ಮಾರಿಸ್‌ ಲೇಲ್ಯಾಂಡ್‌ 126 ರನ್‌ ಹೊಡೆದಿದ್ದರು.
* ಪೂಜಾರ 8ನೇ ಸಲ ರನೌಟಾದರು. ಟೆಸ್ಟ್‌ನಲ್ಲಿ ಇವರಿಗಿಂತ ಹೆಚ್ಚು ಸಲ ರನೌಟಾದ ಭಾರತೀಯರೆಂದರೆ ದ್ರಾವಿಡ್‌ (13) ಮತ್ತು ತೆಂಡುಲ್ಕರ್‌ (9).
* ಭಾರತ ವಿದೇಶಿ ಟೆಸ್ಟ್‌ ಪಂದ್ಯದ ಮೊದಲ ದಿನ 4 ವಿಕೆಟ್‌ಗಳನ್ನು ಕನಿಷ್ಠ ರನ್ನಿಗೆ ಕಳೆದುಕೊಂಡಿತು (41 ರನ್‌). ವೆಸ್ಟ್‌ ಇಂಡೀಸ್‌ ಎದುರಿನ 1962ರ ಪೋರ್ಟ್‌ ಆಫ್ ಸ್ಪೇನ್‌ ಟೆಸ್ಟ್‌ನಲ್ಲಿ 45 ರನ್ನಿಗೆ 4 ವಿಕೆಟ್‌ ಬಿದ್ದದ್ದು ಹಿಂದಿನ “ದಾಖಲೆ’.
* ರೋಹಿತ್‌ ಶರ್ಮ ಅಡಿಲೇಡ್‌ನ‌ಲ್ಲಿ ಆಡಿದ ಎಲ್ಲ 3 ಇನ್ನಿಂಗ್ಸ್‌ಗಳಲ್ಲೂ ನಥನ್‌ ಲಿಯೋನ್‌ಗೆ ವಿಕೆಟ್‌ ಒಪ್ಪಿಸಿದರು.
* ಈ ಇನ್ನಿಂಗ್ಸ್‌ನಲ್ಲಿ ಭಾರತ 7 ಸಿಕ್ಸರ್‌ ಸಿಡಿಸಿತು. ಇದು ಆಸ್ಟ್ರೇಲಿಯದಲ್ಲಿ ಆಡಲಾದ ಇನ್ನಿಂಗ್ಸ್‌ ಒಂದರಲ್ಲಿ ಭಾರತದ ನೂತನ ದಾಖಲೆ. 2003ರ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ 5 ಸಿಕ್ಸರ್‌ ದಾಖಲಾಗಿತ್ತು. ಅಂದು ಇವೆಲ್ಲವನ್ನೂ ಸೆಹವಾಗ್‌ ಒಬ್ಬರೇ ಹೊಡೆದಿದ್ದರು.
* ನಥನ್‌ ಲಿಯೋನ್‌ ಟೆಸ್ಟ್‌ ಇತಿಹಾಸದಲ್ಲಿ 200 ಸಿಕ್ಸರ್‌ ಬಿಟ್ಟುಕೊಟ್ಟ ವಿಶ್ವದ ಮೊದಲ ಬೌಲರ್‌ ಎನಿಸಿದರು. ಮುರಳೀಧರನ್‌ 2ನೇ ಸ್ಥಾನದಲ್ಲಿದ್ದಾರೆ (195).
* ಭಾರತ 1991-92ರ ಬಳಿಕ ಆಸ್ಟ್ರೇಲಿಯ ಪ್ರವಾಸದ ಟೆಸ್ಟ್‌ ಸರಣಿಯ ಮೊದಲ ದಿನದಾಟದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿತು.
* ವಿರಾಟ್‌ ಕೊಹ್ಲಿ ಅಡಿಲೇಡ್‌ನ‌ಲ್ಲಿ ಆಡಿದ ಎಲ್ಲ ಮಾದರಿಯ ಕ್ರಿಕೆಟಿನ 9 ಇನ್ನಿಂಗ್ಸ್‌ಗಳಲ್ಲಿ ಮೊದಲ ಸಲ ಎರಡಂಕೆಯ ಸ್ಕೋರ್‌ ದಾಖಲಿಸಲು ವಿಫ‌ಲರಾದರು.

ಏಶ್ಯದ ಆಚೆ ಮೊದಲ ದಿನವೇ ಟೆಸ್ಟ್‌ ಶತಕ ಹೊಡೆದ ಭಾರತೀಯರು
ಬ್ಯಾಟ್ಸ್‌ಮನ್‌    ರನ್‌    ವಿರುದ್ಧ    ಅಂಗಳ    ವರ್ಷ
ವಿಜಯ್‌ ಮಾಂಜ್ರೆàಕರ್‌    133    ಇಂಗ್ಲೆಂಡ್‌    ಲೀಡ್ಸ್‌    1952
ಸಚಿನ್‌ ತೆಂಡುಲ್ಕರ್‌    155    ದಕ್ಷಿಣ ಆಫ್ರಿಕಾ    ಬ್ಲೋಮ್‌ಫಾಂಟೇನ್‌    2001
ವೀರೇಂದ್ರ ಸೆಹವಾಗ್‌    105    ದಕ್ಷಿಣ ಆಫ್ರಿಕಾ    ಬ್ಲೋಮ್‌ಫಾಂಟೇನ್‌    2001
ವಿರಾಟ್‌ ಕೊಹ್ಲಿ    119    ದಕ್ಷಿಣ ಆಫ್ರಿಕಾ    ಜೊಹಾನ್ಸ್‌ಬರ್ಗ್‌    2013
ಮುರಳಿ ವಿಜಯ್‌    122    ಇಂಗ್ಲೆಂಡ್‌    ಟ್ರೆಂಟ್‌ಬ್ರಿಜ್‌    2014
ವಿರಾಟ್‌ ಕೊಹ್ಲಿ    143    ವೆಸ್ಟ್‌ ಇಂಡೀಸ್‌    ನಾರ್ತ್‌ ಸೌಂಡ್‌    2016
ಚೇತೇಶ್ವರ್‌ ಪೂಜಾರ    123    ಆಸ್ಟ್ರೇಲಿಯ    ಅಡಿಲೇಡ್‌    2018

ಟಾಪ್ ನ್ಯೂಸ್

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.