ಆಡಳಿತಾಧಿಕಾರಿ ನೇಮಕ ಮುಂದೂಡಿದ ಸುಪ್ರೀಂ
Team Udayavani, Jan 25, 2017, 3:45 AM IST
ಹೊಸದಿಲ್ಲಿ: ಬಿಸಿಸಿಐಗೆ ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯ ಮತ್ತೆ ಜ. 30ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಒಳಗೊಂಡ ತ್ರಿಸದಸ್ಯ ಪೀಠ ಮಂಗಳವಾರ ಆಡಳಿತಾಧಿಕಾರಿ ನೇಮಕ ವಿಚಾರಣೆ ಕೈಗೆತ್ತಿಕೊಂಡಿತು. ಕಳೆದ ವಾರ ಅಮಿಕಸ್ ಕ್ಯೂರಿ (ಇಬ್ಬರು ನ್ಯಾಯಾಧೀಶರ ಸಮಿತಿ) ನೀಡಿದ್ದ 9 ಮಂದಿ ಬಿಸಿಸಿಐ ಆಡಳಿತಾಧಿಕಾರಿಗಳ ಪಟ್ಟಿಯನ್ನು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ, ಅಮಿಕಸ್ ಕ್ಯೂರಿ ನೀಡಿರುವ ಪಟ್ಟಿ ಉದ್ದವಾಯಿತು. ದೇಶದ ಕ್ರಿಕೆಟ್‌ನಲ್ಲಿ ಆಡಳಿತಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ಲೋಧಾ ಸಮಿತಿ ನೀಡಿರುವ ಶಿಫಾರಸುಗೆ ಅಮಿಕಸ್ ಕ್ಯೂರಿ ನೀಡಿರುವ ಪಟ್ಟಿಯಲ್ಲಿನ ಹೆಸರುಗಳು ವ್ಯತಿರಿಕ್ತ ವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು. ಹೀಗಾಗಿ ನ್ಯಾಯಾಲಯ ಆಡಳಿತಾಧಿಕಾರಿಗಳ ನೇಮಕ ವಿಷಯ ಸಂಬಂಧ ಯಾವುದೇ ಅಧಿಕೃತ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಮುಂದಿನ ಆದೇಶವನ್ನು ಕಾಯ್ದಿರಿಸಿತು.
ಐಸಿಸಿ ಸಭೆಗೆ ಪ್ರತಿನಿಧಿಗಳ ಆಯ್ಕೆ: ಫೆಬ್ರವರಿ ಮೊದಲ ವಾರ ದುಬಾೖ ಯಲ್ಲಿ ಐಸಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಸಿಸಿಐನ ಅಧ್ಯಕ್ಷರು ಸೇರಿದಂತೆ ಮೂವರು ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ. ಈ ಸಲ ಬಿಸಿಸಿಐ ಅತಂತ್ರವಾಗಿದೆ. ಹೀಗಾಗಿ ಬಿಸಿಸಿಐನಿಂದ ಸಭೆಯಲ್ಲಿ ಯಾರು ಪ್ರತಿನಿಧಿಸುತ್ತಾರೆ ಎನ್ನುವುದು ಚರ್ಚೆಗೆ ಬಂತು. ಆಗ ನ್ಯಾಯಾಲಯ ಈ ನಿರ್ಧಾರವನ್ನು ಬಿಸಿಸಿಐಗೇ ಬಿಡಲು ತೀರ್ಮಾನಿಸಿತು. ಲೋಧಾ ಆದೇಶಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿತು.
ಜ. 27ರೊಳಗೆ ಹೆಸರು ಸೂಚಿಸಿ
ಬಿಸಿಸಿಐಗೆ ಆಡಳಿತಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಸರ್ವೋಚ್ಚ ನ್ಯಾಯಾಲಯ ಈಗ ಕೇಂದ್ರ ಹಾಗೂ ಬಿಸಿಸಿಐನ ಸಲಹೆ ಕೇಳಿದೆ. ಜ. 27ರೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಆಡಳಿತಾಧಿಕಾರಿಗಳ ಹೆಸರನ್ನು ಸೂಚಿಸುವಂತೆ ಸೂಚಿಸಿದೆ. ಅನಂತರವಷ್ಟೇ ಮುಂದಿನ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಿಬಲ್ ಸಲಹೆ ಕೇಳಿದ ಸುಪ್ರೀಂ
ಬಿಸಿಸಿಐಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಂದ ಸರ್ವೋಚ್ಚ ನ್ಯಾಯಾಲಯ ಸಲಹೆ ಕೇಳಿದೆ. ಬಿಸಿಸಿಐಗೆ ಹೊಸ ಚುನಾವಣೆ ನಡೆದು ಮುಂದಿನ ಅಧ್ಯಕ್ಷರು ಆಯ್ಕೆಯಾಗಬೇಕಿದೆ. ಅಲ್ಲಿಯ ತನಕ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೆ ಸಿಬಲ್ ಸಲಹೆ ನೀಡಬಹುದು ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.