ಎಎಫ್ಸಿ ಏಶ್ಯನ್ ಕಪ್: ಭಾರತ ಹೊರಕ್ಕೆ, ಕೋಚ್ ರಾಜೀನಾಮೆ
Team Udayavani, Jan 16, 2019, 4:18 AM IST
ಶಾರ್ಜಾ: ಎಎಫ್ಸಿ ಏಶ್ಯನ್ ಕಪ್ ಫುಟ್‌ಬಾಲ್ ಕೂಟದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ ಬಹ್ರೈನ್ ವಿರುದ್ಧ 0-1 ಅಂತರದಿಂದ ಸೋತಿದೆ. ಪಂದ್ಯದ ಕೊನೆಯ ಹಂತದವರೆಗೂ ರಕ್ಷಣಾತ್ಮಕವಾಗಿ ಆಟವಾಡಿದ ಭಾರತ 90+1 ನಿಮಿಷದಲ್ಲಿ ಬಹ್ರೈನ್ ತಂಡಕ್ಕೆ ಪೆನಾಲ್ಟಿ ಅವಕಾಶವನ್ನು ನೀಡುವ ಮೂಲಕ ಡ್ರಾ ಮಾಡಿಕೊಳ್ಳಬಹುದಾದ ಪಂದ್ಯವನ್ನು ಕೈಚೆಲ್ಲಿದೆ. “ಎ’ ಗುಂಪಿನಲ್ಲಿ 4ನೇ ಸ್ಥಾನವನ್ನು ಸಂಪಾದಿಸಿ ಟೂರ್ನಿಯಿಂದ ನಿರ್ಗಮಿಸಿದೆ.
ಕೋಚ್ ರಾಜೀನಾಮೆ
ಭಾರತ ಏಶ್ಯನ್ ಕಪ್‌ನಿಂದ ಹೊರಬೀಳುತ್ತಿದ್ದಂತೆ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ರಾಜೀನಾಮೆ ನೀಡಿದ್ದಾರೆ.
“4 ವರ್ಷಗಳಿಂದ ತಂಡವನ್ನು ಮುನ್ನಡೆಸಿದ್ದೇನೆ. ವೃತ್ತಿಯ ಮೊದಲ ದಿನದಿಂದಲೇ ನನಗಿದ್ದ ಗುರಿ ಎಎಫ್ಸಿ ಏಶ್ಯನ್ ಕಪ್‌ಗೆ ಅರ್ಹತೆ ಸಂಪಾದಿಸಿಕೊಳ್ಳುವುದಾಗಿತ್ತು. ಈ ಗುರಿ ತಲುಪಿದ್ದೇನೆ. ಹೊರನಡೆಯಲು ಇದು ಉತ್ತಮ ಸಮಯ ಎಂದು ಭಾವಿಸಿದ್ದೇನೆ. ಆದರೆ ಬಹಳ ಬೇಸರವಾಗುತ್ತಿದೆ’ ಎಂದು ಸ್ಟೀಫನ್ ಹೇಳಿದರು.
ಸ್ಟೀಫನ್ 2ನೇ ಬಾರಿಗೆ ಭಾರತದ ಕೋಚ್ ಆಗಿ ನೇಮಕಗೊಂಡಿದ್ದು, ಇವರ ಒಪ್ಪಂದ ಇದೇ 31ಕ್ಕೆ ಮುಕ್ತಾಯಗೊಳ್ಳುವುದಿತ್ತು. ಇವರ ಮಾರ್ಗದರ್ಶನದಲ್ಲಿ ಭಾರತ ಫಿಫಾ ರ್‍ಯಾಂಕಿಂಗ್‌ನಲ್ಲಿ 173ರಿಂದ 96ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.