ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದ ಅಫ್ಘಾನ್
Team Udayavani, Sep 10, 2019, 5:35 AM IST
ಚಿತ್ತಗಾಂಗ್: ಆತಿಥೇಯ ಬಾಂಗ್ಲಾದೇಶವನ್ನು 224 ರನ್ನುಗಳ ಭರ್ಜರಿ ಅಂತರದಿಂದ ಬಗ್ಗುಬಡಿದ ಅಫ್ಘಾನಿಸ್ಥಾನ ತನ್ನ ಟೆಸ್ಟ್ ಇತಿಹಾಸದ ಅಮೋಘ ಹಾಗೂ ಸ್ಮರಣೀಯ ಜಯವನ್ನು ದಾಖಲಿಸಿದೆ. ಗೆಲುವಿಗೆ 398 ರನ್ ಗುರಿ ಪಡೆದ ಬಾಂಗ್ಲಾದೇಶ, ಅಂತಿಮ ದಿನವಾದ ಸೋಮವಾರ 173ಕ್ಕೆ ಸರ್ವಪತನ ಕಂಡಿತು.
ಮಳೆ ಹಾಗೂ ಮೋಡ ಕವಿದ ವಾತಾವರಣದ ಕಾರಣ ಮೊದಲ ಅವಧಿಯಲ್ಲಿ 2.1 ಓವರ್‌ಗಳ ಆಟವಷ್ಟೇ ಸಾಗಿತ್ತು. ದ್ವಿತೀಯ ಅವಧಿಯ ಆಟ ನಡೆಯಲೇ ಇಲ್ಲ. ಅಫ್ಘಾನಿಸ್ಥಾನವನ್ನು ಗೆಲ್ಲಿಸಬೇಕೆಂಬ ಕಾರಣಕ್ಕೋ ಏನೋ, ಅಂತಿಮ ಅವಧಿಯಲ್ಲಿ 10 ಓವರ್‌ಗಳ ಆಟಕ್ಕೆ ಅವಕಾಶ ಲಭಿಸಿತು. ಬಾಂಗ್ಲಾ 6ಕ್ಕೆ 136 ರನ್ ಮಾಡಿ 4ನೇ ದಿನದಾಟ ಮುಗಿಸಿತ್ತು.
ಇದು ಕೊನೆಯ ಟೆಸ್ಟ್ ಪಂದ್ಯವಾಡಿದ ಅಫ್ಘಾನ್ ಸ್ಪಿನ್ನರ್ ಮೊಹಮ್ಮದ್ ನಬಿಗೆ ಲಭಿಸಿದ ಗೆಲುವಿನ ವಿದಾಯವಾಗಿ ದಾಖಲಾಯಿತು.
ರಶೀದ್ ನಾಯಕತ್ವದ ದಾಖಲೆ
ಇದು ಅಫ್ಘಾನ್ ನಾಯಕ ರಶೀದ್ ಖಾನ್ ಪಾಲಿಗೆ ಸ್ಮರಣೀಯ ಟೆಸ್ಟ್ ಎನಿಸಿತು. ಅವರು ಲೆಗ್‌ಸ್ಪಿನ್ ದಾಳಿಯಲ್ಲಿ 49 ರನ್ನಿಗೆ 6 ವಿಕೆಟ್ ಹಾರಿಸಿ ಬಾಂಗ್ಲಾ ಪತನದ ರೂವಾರಿ ಎನಿಸಿದರು. ಮೊದಲ ಸರದಿಯಲ್ಲಿ ರಶೀದ್ 5 ವಿಕೆಟ್ ಉರುಳಿಸಿದ್ದರು. ಇದರೊಂದಿಗೆ ಟೆಸ್ಟ್ ಪಂದ್ಯದಲ್ಲಿ ಮೊದಲ ಸಲ “10 ಪ್ಲಸ್’ ವಿಕೆಟ್ ಉರುಳಿಸಿದ ಸಾಧನೆಗೈದರು.
ರಶೀದ್ ಇದೇ ಮೊದಲ ಸಲ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದರು. ಈಗ ಮೊದಲ ಟೆಸ್ಟ್‌ನಲ್ಲೇ ಗೆಲುವು ಕಂಡ ವಿಶ್ವದ ಅತ್ಯಂತ ಕಿರಿಯ ಕಪ್ತಾನನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಶೀದ್ ನಾಯಕತ್ವ ವಹಿಸಿದ ಪ್ರಥಮ ಟೆಸ್ಟ್‌ನಲ್ಲೇ “10 ಪ್ಲಸ್’ ವಿಕೆಟ್ ಹಾಗೂ ಅರ್ಧ ಶತಕ ದಾಖಲಿಸಿದ ವಿಶ್ವದ ಮೊದಲ ಕ್ರಿಕೆಟಿಗನೂ ಹೌದು.
3 ಟೆಸ್ಟ್, 2 ಗೆಲುವು
ಈ ಸಾಧನೆಯೊಂದಿಗೆ ಅಫ್ಘಾನಿಸ್ಥಾನ ಅತೀ ಕಡಿಮೆ ಟೆಸ್ಟ್ ಗಳಲ್ಲಿ 2 ಗೆಲುವು ಸಾಧಿಸಿದ ಆಸ್ಟ್ರೇಲಿಯದ ದಾಖಲೆಯನ್ನು ಸರಿದೂಗಿಸಿತು. ಇದು ಅಫ್ಘಾನ್ ಆಡಿದ ಕೇವಲ 3ನೇ ಟೆಸ್ಟ್ ಆಗಿದೆ. ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ 4 ಟೆಸ್ಟ್ ಗಳಲ್ಲಿ 2 ಜಯ ಸಾಧಿಸಿ ದ್ವಿತೀಯ ಸ್ಥಾನದಲ್ಲಿದೆ. ಭಾರತ 2 ಗೆಲುವಿಗೆ 30 ಟೆಸ್ಟ್ ತೆಗೆದುಕೊಂಡಿತ್ತು. ಇದೇ ಸಾಧನೆಗಾಗಿ ಬಾಂಗ್ಲಾ ಅತ್ಯಧಿಕ 60 ಟೆಸ್ಟ್ ಆಡಿದೆ. ಬಾಂಗ್ಲಾ ಈಗ ಎಲ್ಲ 10 ರಾಷ್ಟ್ರಗಳ ವಿರುದ್ಧ ಟೆಸ್ಟ್ ಸೋಲುಂಡ ವಿಶ್ವದ ಮೊದಲ ರಾಷ್ಟ್ರವೆಂಬ ಸಂಕಟಕ್ಕೆ ಸಿಲುಕಿತು.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ಥಾನ-342 ಮತ್ತು 260. ಬಾಂಗ್ಲಾದೇಶ-205 ಮತ್ತು 173 (ಶಕಿಬ್ 44, ಶದ್ಮಾನ್ 41, ರಶೀದ್ 49ಕ್ಕೆ 6, ನಬಿ 59ಕ್ಕೆ 3).
ಪಂದ್ಯಶ್ರೇಷ್ಠ: ರಶೀದ್ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.