ಬ್ರಾಡ್‌ಮನ್ ಸರಾಸರಿ ಮೀರಿಸಿದ ಅಫ್ಘಾನ್ ಕ್ರಿಕೆಟಿಗ
Team Udayavani, Jan 10, 2018, 1:04 PM IST
ಲಂಡನ್: ಕ್ರಿಕೆಟಿನ ಬ್ಯಾಟಿಂಗ್ ಸರಾಸರಿ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯದ ಸರ್ ಡೊನಾಲ್ಡ್ ಬ್ರಾಡ್‌ಮನ್ ಬಹಳ ಎತ್ತರದಲ್ಲಿ ಕಾಣಿಸಿಕೊಳ್ಳುತ್ತಾರೆ. ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗಳೆರಡರಲ್ಲೂ ಡಾನ್ ಸರ್ವಾಧಿಕ ಸರಾಸರಿ ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 99.94 ಸರಾಸರಿ ಹೊಂದಿರುವ ಬ್ರಾಡ್‌ಮನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 95.14 ಸರಾಸರಿ ದಾಖಲಿಸಿದ್ದಾರೆ. ಒಟ್ಟು 234 ಪ್ರಥಮ ದರ್ಜೆ ಪಂದ್ಯಗಳಿಂದ 28,067 ರನ್ ಪೇರಿಸಿರುವುದು ಬ್ರಾಡ್‌ಮನ್ ಸಾಧನೆ. ಆದರೆ ಅಫ್ಘಾನಿಸ್ಥಾನದ ಯುವ ಕ್ರಿಕೆಟಿಗನೋರ್ವ ಪ್ರಥಮ ದರ್ಜೆಯಲ್ಲಿ ಬ್ರಾಡ್‌ಮನ್ ಸರಾಸರಿಯನ್ನು ಮೀರಿದ್ದೀಗ ಸುದ್ದಿಯಾಗಿದೆ. 18ರ ಹರೆಯದ ಈತನ ಹೆಸರು ಬಹೀರ್ ಷಾ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕನಿಷ್ಠ ಸಾವಿರ ರನ್ ಗಳಿಸಿದವರ ಬ್ಯಾಟಿಂಗ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡಾಗ ಬಹೀರ್ ಷಾ ಬ್ರಾಡ್‌ಮನ್‌ಗಿಂತ ಎತ್ತರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖೀಸಿದೆ. ಸದ್ಯ ಬಹೀರ್ ಬ್ಯಾಟಿಂಗ್ ಸರಾಸರಿ 121.77 ಆಗಿದೆ.
2017ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ ಬಹೀರ್ ಷಾ, ಸ್ಪೀನ್ ಘರ್ ರೀಜನ್ ತಂಡದ ಪರ ಆಡುತ್ತ ಅಮೊ ರೀಜನ್ ವಿರುದ್ಧದ ಮೊದಲ ಪಂದ್ಯದಲ್ಲೇ 256 ರನ್ ಬಾರಿಸಿದರು. ಈವರೆಗಿನ 12 ಇನ್ನಿಂಗ್ಸ್‌ಗಳಿಂದ ಬಹೀರ್ 1,096 ರನ್ ಪೇರಿಸಿದ್ದು, ಇದರಲ್ಲಿ ಒಂದು ತ್ರಿಶತಕ ಹಾಗೂ ಶತಕ ಕೂಡ ಸೇರಿದೆ.
“ಇದುನ ನನ್ನ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ಕ್ಷಣ’ ಎಂದು ಹಾಶಿಮ್ ಆಮ್ಲ ಅವರನ್ನು ಮಾದರಿಯಾಗಿ ಇರಿಸಿಕೊಂಡಿರುವ ಬಹೀರ್ ಷಾ ಪ್ರತಿಕ್ರಿಯಿಸಿದ್ದಾರೆ. ಇದೇ ಉನ್ನತ ಸರಾಸರಿ ಉಳಿಸಿಕೊಂಡು ಹೋಗುವುದು ಅವರ ಗುರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.