![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
Team Udayavani, Jan 29, 2025, 10:43 PM IST
ಮೆಲ್ಬರ್ನ್: ಗುರುವಾರ ಅಫ್ಘಾನಿಸ್ಥಾನ ಮಹಿಳಾ ಕ್ರಿಕೆಟ್ ತಂಡದ ಪಾಲಿಗೆ ಸ್ಮರಣೀಯ ದಿನ ದಿನ. ತಾಲಿಬಾನ್ ಆಡಳಿತಕ್ಕೆ ಬೆದರಿ ದೇಶ ತೊರೆದಿದ್ದ ಅಫ್ಘಾನ್‌ನ 21 ಕ್ರಿಕೆಟ್ ಆಟಗಾರ್ತಿಯರು 3 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ಮೆಲ್ಬರ್ನ್ನ “ಜಂಕ್ಷನ್ ಓವಲ್’ ಮೈದಾನದಲ್ಲಿ ಪ್ರದರ್ಶನ ಪಂದ್ಯವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದು ಆಟಗಾರ್ತಿಯರನ್ನು ಭಾವುಕರನ್ನಾಗಿಸಿದೆ. “ನಾವು ಹಕ್ಕುಗಳಿಂದ ವಂಚಿತರಾಗಿರುವ ಅಫ್ಘಾನಿಸ್ಥಾನದ ಲಕ್ಷಾಂತರ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದೇವೆ. ನಾವೀಗ ಬರೀ ತಂಡ ಕಟ್ಟುತ್ತಿಲ್ಲ. ಬದಲಾವಣೆ, ಬೆಳವಣಿಗೆಯ ಚಳವಳಿಯನ್ನು ಕಟ್ಟುತ್ತಿದ್ದೇವೆ’ ಎಂದು ನಾಯಕಿಯರಾದ ಫಿರೋಜಾ ಅಮಿರಿ, ನಹಿದಾ ಸಪನ್ ಹೇಳಿದ್ದಾರೆ.
“ಅಫ್ಘಾನಿಸ್ಥಾನ್ ವುಮೆನ್ಸ್-11′ ಎಂಬ ಹೆಸರಿನ ಈ ತಂಡ “ಕ್ರಿಕೆಟ್ ವಿದೌಟ್ ಬಾರ್ಡರ್ಸ್-11′ ತಂಡವನ್ನು ಎದುರಿಸಲಿದೆ. ಅಫ್ಘಾನ್ ಕ್ರಿಕೆಟ್ ಮಂಡಳಿಯ ಮಾನ್ಯತೆ ಇಲ್ಲದ ಕಾರಣ “ಅಫ್ಘಾನಿಸ್ಥಾನ್ ವುಮೆನ್ಸ್-11′ ಎಂಬ ಹೆಸರನ್ನು ಹೊಂದಿದ್ದು, ಸಮವಸ್ತ್ರವೂ ಬೇರೆಯೇ ಆಗಿರಲಿದೆ.
You seem to have an Ad Blocker on.
To continue reading, please turn it off or whitelist Udayavani.