ಫಾಲೋಆನ್‌ ಬಳಿಕ ಲಂಕಾ ಹೋರಾಟ

Team Udayavani, Aug 6, 2017, 7:30 AM IST

fall-on.jpg

ಕೊಲಂಬೊ: ನಿರೀಕ್ಷೆಯಂತೆ ಆತಿಥೇಯ ಶ್ರೀಲಂಕಾ ಕೊಲಂಬೊ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಸ್ಪಿನ್ನಿಗೆ ಕುಸಿದಿದೆ. ಗಾಲೆ ಪಂದ್ಯಕ್ಕೂ ಹೆಚ್ಚಿನ ಇನ್ನಿಂಗ್ಸ್‌ ಲೀಡ್‌ ಟೀಮ್‌ ಇಂಡಿಯಾ ಸಂಪಾದಿಸಿದೆ. ವ್ಯತ್ಯಾಸವೆಂದರೆ, ಅಲ್ಲಿ ಫಾಲೋಆನ್‌ ಹೇರದ ನಾಯಕ ವಿರಾಟ್‌ ಕೊಹ್ಲಿ ಇಲ್ಲಿ ಲಂಕಾ ಪಡೆಯನ್ನು ಮರಳಿ ಬ್ಯಾಟಿಂಗಿಗೆ ಇಳಿಸಿದ್ದಾರೆ.

ಫಾಲೋಆನ್‌ ಪಡೆದ ಬಳಿಕ ದಿಟ್ಟ ಹೋರಾಟ ವೊಂದನ್ನು ಸಂಘಟಿಸಿದ ಶ್ರೀಲಂಕಾ, ಶನಿವಾರದ ಆಟದ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 209 ರನ್‌ ಮಾಡಿದೆ. ವನ್‌ಡೌನ್‌ ಬ್ಯಾಟ್ಸ್‌ಮನ್‌ ಕುಸಲ್‌ ಮೆಂಡಿಸ್‌ ಬಾರಿಸಿದ ಶತಕ, ಆರಂಭಕಾರ ದಿಮುತ್‌ ಕರುಣರತ್ನೆ ಅವರ ಅಜೇಯ 92 ರನ್‌, ಇವರಿಬ್ಬರು ದ್ವಿತೀಯ ವಿಕೆಟಿಗೆ ನಡೆಸಿದ 192 ರನ್‌ ಜತೆಯಾಟ ಲಂಕಾ ಹೋರಾಟಕ್ಕೊಂದು ಸ್ಫೂರ್ತಿ ತುಂಬಿದೆ. ಆದರೆ ದಿನದಾಟದ ಮುಕ್ತಾಯಕ್ಕೆ 5 ಓವರ್‌ ಬಾಕಿ ಇರುವಾಗ ಶತಕವೀರ ಮೆಂಡಿಸ್‌ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದ ಭಾರತ, ಮತ್ತೆ ಆತಿಥೇಯರ ಮೇಲೆ ಒತ್ತಡ ಹೇರಿದೆ. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಚಂಡಿಮಾಲ್‌ ಪಡೆ ಇನ್ನೂ 230 ರನ್‌ ಗಳಿಸಬೇಕಿದೆ. ಹೀಗಾಗಿ ರವಿವಾರದ ಬ್ಯಾಟಿಂಗ್‌ ಆತಿಥೇಯರ ಪಾಲಿಗೆ ನಿರ್ಣಾಯಕ. 

ಮೆಂಡಿಸ್‌-ಕರುಣರತ್ನೆ ಸಾಹಸ
ದ್ವಿತೀಯ ಸರದಿಯಲ್ಲಿ ಆರಂಭ ಕಾರ ಉಪುಲ್‌ ತರಂಗ ಎರಡೇ ರನ್‌ ಮಾಡಿ ಯಾದವ್‌ಗೆ ಬೌಲ್ಡ್‌ ಆಗುವುದ ರೊಂದಿಗೆ ಶ್ರೀಲಂಕಾ ಮತ್ತೂಂದು ಕಂತಿನ ಕುಸಿತದ ಮುನ್ಸೂಚನೆ ನೀಡಿತು. ಆದರೆ ದಿಮುತ್‌ ಕರುಣರತ್ನೆ-ಕುಸಲ್‌ ಮೆಂಡಿಸ್‌ ಸೇರಿಕೊಂಡು ಅಮೋಘ ಹೋರಾಟವೊಂದನ್ನು ಸಂಘಟಿಸಿದರು. ದ್ವಿತೀಯ ವಿಕೆಟಿಗೆ 51.5 ಓವರ್‌ಗಳ ಜತೆಯಾಟ ನಡೆಸಿ 192 ರನ್‌ ಪೇರಿಸಿದರು. ಭಾರತದ ದಾಳಿಯನ್ನು, ಅದರಲ್ಲೂ ಸ್ಪಿನ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ಲಂಕಾ ಸರದಿಗೆ ಬಲ ತುಂಬಿದರು. ಇದರಲ್ಲಿ ಮೆಂಡಿಸ್‌ ಕೊಡುಗೆ 110 ರನ್‌. 135 ಎಸೆತಗಳ ಈ ಆಕ್ರಮಣಕಾರಿ ಆಟದ ವೇಳೆ 17 ಬೌಂಡರಿ ಸಿಡಿಯಲ್ಪಟ್ಟಿತು. ಇದು ಅವರ 3ನೇ ಶತಕವಾದರೆ, ಭಾರತದೆದುರು ಮೊದಲನೆಯದು. 

ಈ ಜೋಡಿ 3ನೇ ದಿನದ ಕೊನೆಯ ವರೆಗೂ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿತು. ಆದರೆ ಹಾರ್ದಿಕ್‌ ಪಾಂಡ್ಯ ಇದಕ್ಕೆ ಅವಕಾಶ ಕೊಡಲಿಲ್ಲ. ಸಾಹಾ ಕೈಗೆ ಕ್ಯಾಚ್‌ ಕೊಡಿಸಿ ಶತಕವೀರ ಮೆಂಡಿಸ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟುವಲ್ಲಿ ಯಶಸ್ವಿಯಾದರು.

ಕರುಣರತ್ನೆ ಜವಾಬ್ದಾರಿಯುತ ಆಟದ ಮೂಲಕ 92 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಸರಿಯಾಗಿ 200 ಎಸೆತ ಎದುರಿಸಿದ್ದು, 12 ಬೌಂಡರಿ ಹೊಡೆದಿದ್ದಾರೆ. ಇವರೊಂದಿಗೆ ಕ್ರೀಸಿನಲ್ಲಿರುವವರು ನೈಟ್‌ ವಾಚ್‌ಮನ್‌ ಪುಷ್ಪಕುಮಾರ (2).

ಲಂಚ್‌ ಒಳಗೆ ಲಂಕಾ ಲಾಗ!
ಶನಿವಾರದ ಮೊದಲ ಅವಧಿಯಲ್ಲಿ ಶ್ರೀಲಂಕಾ ನಾಟಕೀಯ ಕುಸಿತಕ್ಕೊಳಗಾಯಿತು. 2ಕ್ಕೆ 50 ರನ್‌ ಮಾಡಿದ್ದ ಆತಿಥೇಯ ತಂಡ, ಭೋಜನ ವಿರಾಮಕ್ಕೆ ಸರಿಯಾಗಿ 183ಕ್ಕೆ ಸರ್ವಪತನ ಕಂಡಿತು. ಗಾಯಾಳು ನುವಾನ್‌ ಪ್ರದೀಪ್‌ ಕೂಡ ಬ್ಯಾಟ್‌ ಹಿಡಿದು ಬಂದದ್ದು ಲಂಕಾ ಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. 51 ರನ್‌ ಮಾಡಿದ ನಿರೋಷನ್‌ ಡಿಕ್ವೆಲ್ಲ ಅವರಿಂದ ತಂಡದ ಏಕೈಕ ಅರ್ಧ ಶತಕ ದಾಖಲಾಯಿತು.

69ಕ್ಕೆ 5 ವಿಕೆಟ್‌ ಹಾರಿಸಿದ ಆರ್‌. ಅಶ್ವಿ‌ನ್‌ ಶ್ರೀಲಂಕಾ ಕುಸಿತದಲ್ಲಿ ಮಹತ್ವದ ಪಾತ್ರ ವಹಿಸಿದರು. ಜಡೇಜ ಮತ್ತು ಶಮಿ ತಲಾ 2 ವಿಕೆಟ್‌ ಕಿತ್ತರೆ, ಉಳಿದೊಂದು ವಿಕೆಟ್‌ ಯಾದವ್‌ ಪಾಲಾಯಿತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌9 ವಿಕೆಟಿಗೆ ಡಿಕ್ಲೇರ್‌ 622
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌(ನಿನ್ನೆ 2 ವಿಕೆಟಿಗೆ 50)
ಕುಸಲ್‌ ಮೆಂಡಿಸ್‌    ಸಿ ಕೊಹ್ಲಿ ಬಿ ಯಾದವ್‌    24
ದಿನೇಶ್‌ ಚಂಡಿಮಾಲ್‌    ಸಿ ಪಾಂಡ್ಯ ಬಿ ಜಡೇಜ    10
ಏಂಜೆಲೊ ಮ್ಯಾಥ್ಯೂಸ್‌    ಸಿ ಪೂಜಾರ ಬಿ ಅಶ್ವಿ‌ನ್‌    26
ನಿರೋಷನ್‌ ಡಿಕ್ವೆಲ್ಲ    ಬಿ ಶಮಿ    51
ಧನಂಜಯ ಡಿ’ಸಿಲ್ವ    ಬಿ ಜಡೇಜ    0
ದಿಲುÅವಾನ್‌ ಪೆರೆರ    ಬಿ ಅಶ್ವಿ‌ನ್‌    25
ರಂಗನ ಹೆರಾತ್‌    ಬಿ ಶಮಿ    2
ಮಲಿಂದ ಪುಷ್ಪಕುಮಾರ    ಔಟಾಗದೆ    15
ನುವಾನ್‌ ಪ್ರದೀಪ್‌    ಬಿ ಅಶ್ವಿ‌ನ್‌    0
ಇತರ        5
ಒಟ್ಟು  (ಆಲೌಟ್‌)        183
ವಿಕೆಟ್‌ ಪತನ:
3-60, 4-64, 5-117, 6-122, 7-150, 8-152, 9-171.
ಬೌಲಿಂಗ್‌:
ಮೊಹಮ್ಮದ್‌ ಶಮಿ        6-1-13-2
ಆರ್‌. ಅಶ್ವಿ‌ನ್‌        16.4-3-69-5
ರವೀಂದ್ರ ಜಡೇಜ        22-6-84-2
ಉಮೇಶ್‌ ಯಾದವ್‌        5-1-12-1

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌
ದಿಮುತ್‌ ಕರುಣರತ್ನೆ    ಬ್ಯಾಟಿಂಗ್‌    92
ಉಪುಲ್‌ ತರಂಗ    ಬಿ ಯಾದವ್‌    2
ಕುಸಲ್‌ ಮೆಂಡಿಸ್‌    ಸಿ ಸಾಹಾ ಬಿ ಪಾಂಡ್ಯ    110
ಮಲಿಂದ ಪುಷ್ಪಕುಮಾರ    ಬ್ಯಾಟಿಂಗ್‌    2
ಇತರ        3
ಒಟ್ಟು  (2 ವಿಕೆಟಿಗೆ)        209
ವಿಕೆಟ್‌ ಪತನ:
1-7, 2-198.
ಬೌಲಿಂಗ್‌:
ಉಮೇಶ್‌ ಯಾದವ್‌        9-2-29-1
ಆರ್‌. ಅಶ್ವಿ‌ನ್‌        24-6-79-0
ಮೊಹಮ್ಮದ್‌ ಶಮಿ        6-2-13-0
ರವೀಂದ್ರ ಜಡೇಜ        16-2-76-0
ಹಾರ್ದಿಕ್‌ ಪಾಂಡ್ಯ        5-0-12-1

ಟಾಪ್ ನ್ಯೂಸ್

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

5

Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.