ಅಗರ್ವಾಲ್-ರಾಹುಲ್ ಕರ್ನಾಟಕ ಜೋಡಿಯ ದಾಖಲೆ
Team Udayavani, Jan 4, 2019, 12:50 AM IST
ಸಿಡ್ನಿ: ಸಿಡ್ನಿಯಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಿದ ಮಾಯಾಂಕ್ ಅಗರ್ವಾಲ್-ಕೆ.ಎಲ್. ರಾಹುಲ್ ವಿಶೇಷ ಕಾರಣಕ್ಕಾಗಿ ಸುದ್ದಿಯಾದರು. ಇವರಿಬ್ಬರೂ ಭಾರತದ ಟೆಸ್ಟ್ ಇತಿಹಾಸದಲ್ಲಿ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕದ ಮೊದಲ ಜೋಡಿ ಎನಿಸಿದ್ದಾರೆ!
ಈವರೆಗೆ 26 ಆಟಗಾರರನ್ನು ಭಾರತದ ಟೆಸ್ಟ್ ಕ್ರಿಕೆಟಿಗೆ ಕೊಡುಗೆಯಾಗಿ ನೀಡಿದ ಹಿರಿಮೆ ಕರ್ನಾಟಕದ್ದು. ಇವರಲ್ಲಿ ಬಹುತೇಕ ಮಂದಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದರೆ, ಉಳಿದವರು ವಿಕೆಟ್ ಕೀಪರ್ ಹಾಗೂ ಬೌಲರ್‌ಗಳು. ಜಿ.ಆರ್. ವಿಶ್ವನಾಥ್, ಬೃಜೇಶ್ ಪಟೇಲ್, ಬುಧಿ ಕುಂದರನ್, ರಾಹುಲ್ ದ್ರಾವಿಡ್, ಸಯ್ಯದ್ ಕಿರ್ಮಾನಿ, ಬಿ.ಎಸ್. ಚಂದ್ರಶೇಖರ್, ಇ.ಎ.ಎಸ್. ಪ್ರಸನ್ನ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಇವರಲ್ಲಿ ಪ್ರಮುಖರು.
ಇವರಲ್ಲಿ ಮೂಲತಃ ದಕ್ಷಿಣ ಕನ್ನಡದ ಮೂಲ್ಕಿಯವರಾದ, ವಿಕೆಟ್ ಕೀಪರ್ ಕಂ ಓಪನರ್ ಬುಧಿ ಕುಂದರನ್ 18 ಟೆಸ್ಟ್‌ಗಳ 34 ಇನ್ನಿಂಗ್ಸ್‌ಗಳಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಿದ್ದರು. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ದ್ರಾವಿಡ್ ಕೂಡ ಓಪನರ್ ಆಗಿ ಕಣಕ್ಕಿಳಿದಿದ್ದಿದೆ. ಕುಂದರನ್ ಬಳಿಕ ಸ್ಪೆಷಲಿಸ್ಟ್ ಓಪನರ್ ಆಗಿ ಕಾಣಿಸಿಕೊಂಡ ರಾಜ್ಯದ ಕ್ರಿಕೆಟಿಗನೆಂದರೆ ಕೆ.ಎಲ್. ರಾಹುಲ್. ಈಗ ಅಗರ್ವಾಲ್ ಸರದಿ.
ಕಿರಿಯರ ವಿಶ್ವಕಪ್ ಜೋಡಿ
ರಾಹುಲ್-ಅಗರ್ವಾಲ್ ಅಂಡರ್-13 ಹಂತದಿಂದಲೂ ಜತೆಯಾಗಿ ಇನ್ನಿಂಗ್ಸ್ ಆರಂಭಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇಬ್ಬರೂ ರಣಜಿ ಟ್ರೋಫಿಯಲ್ಲಿ ತ್ರಿಶತಕ ಹೊಡೆದಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲೂ ಇವರು ಭಾರತದ ಆರಂಭಿಕರಾಗಿ ಕಾಣಿಸಿಕೊಂಡಿದ್ದರು.
ಹೀಗೆ ಕಿರಿಯರ ವಿಶ್ವಕಪ್ ಹಾಗೂ ಟೆಸ್ಟ್‌ನಲ್ಲಿ ಓಪನಿಂಗ್ ಬಂದ ಭಾರತದ ಮೊದಲ ಹಾಗೂ ವಿಶ್ವದ 5ನೇ ಜೋಡಿಯೆಂಬ ಹಿರಿಮೆ ಅಗರ್ವಾಲ್-ರಾಹುಲ್ ಅವರದು. ಉಳಿದ ಜೋಡಿಗಳೆಂದರೆ ವೆಸ್ಟ್ ಇಂಡೀಸಿನ ಡ್ಯಾರನ್ ಗಂಗ-ಕ್ರಿಸ್ ಗೇಲ್, ಅಡ್ರಿಯನ್ ಭರತ್-ಕೈರನ್ ಪೊವೆಲ್, ಪಾಕಿಸ್ಥಾನದ ಇಮ್ರಾನ್ ನಜೀರ್-ತೌಫೀಕ್ ಉಮರ್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ ರುಡಾಲ್ಫ್-ಗ್ರೇಮ್ ಸ್ಮಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.