ಅಗರ್ವಾಲ್‌ ತ್ರಿಶತಕ ವೈಭವ


Team Udayavani, Nov 4, 2017, 12:07 PM IST

04-32.jpg

ಪುಣೆ: ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಅವರ ತ್ರಿಶತಕ ವೈಭವದೊಂದಿಗೆ ರಂಗೇರಿಸಿಕೊಂಡ ಕರ್ನಾಟಕ ತಂಡ ಆತಿಥೇಯ ಮಹಾರಾಷ್ಟ್ರಕ್ಕೆ ಇನ್ನಿಂಗ್ಸ್‌ ಸೋಲುಣಿಸಲು ಸಕಲ ತಯಾರಿ ನಡೆಸಿದೆ. ಪ್ರಸಕ್ತ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್‌ ಜಯದತ್ತ ಮುನ್ನುಗ್ಗಿದೆ.

ಮಹಾರಾಷ್ಟ್ರದ 245ಕ್ಕೆ ಉತ್ತರವಾಗಿ ಪಂದ್ಯದ 3ನೇ ದಿನವಾದ ಶುಕ್ರವಾರ 5ಕ್ಕೆ 628 ರನ್‌ ಪೇರಿಸಿದ ಕರ್ನಾಟಕ 383 ರನ್ನುಗಳ ಪ್ರಚಂಡ ಮುನ್ನಡೆ ಸಾಧಿಸಿತು. ದಿನದಾಟದ ಅಂತ್ಯಕ್ಕೆ ಮಹಾರಾಷ್ಟ್ರ ತನ್ನ ದ್ವಿತೀಯ ಸರದಿಯಲ್ಲಿ 4 ವಿಕೆಟ್‌ ಕಳೆದುಕೊಂಡು 135 ರನ್‌ ಮಾಡಿದೆ. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 248 ರನ್‌ ಗಳಿಸಬೇಕಿದೆ. ಶನಿವಾರ ಪಂದ್ಯದ ಅಂತಿಮ ದಿನ. ಉಳಿದ 6 ವಿಕೆಟ್‌ಗಳನ್ನು ಉರುಳಿಸುವುದು ಕರ್ನಾಟಕಕ್ಕೆ ಸಮಸ್ಯೆ ಆಗಲಿಕ್ಕಿಲ್ಲ ಎಂಬುದು ಸದ್ಯದ ಲೆಕ್ಕಾಚಾರ.

ಮಾಯಾಂಕ್‌ ಚೊಚ್ಚಲ ತ್ರಿಶತಕ
ದ್ವಿತೀಯ ದಿನ ಚೊಚ್ಚಲ ದ್ವಿಶತಕ ಬಾರಿಸಿದ ಸಂಭ್ರಮದಲ್ಲಿದ್ದ ಮಾಯಾಂಕ್‌ ಅಗರ್ವಾಲ್‌ ಪಾಲಿಗೆ 3ನೇ ದಿನದಾಟ ಸ್ಮರಣೀಯವೆನಿಸಿತು. 219ರಲ್ಲಿ ಅಜೇಯರಾಗಿದ್ದ ಅಗರ್ವಾಲ್‌ ಇದನ್ನು ತ್ರಿಶತಕವಾಗಿ ಪರಿವರ್ತಿಸಿಕೊಂಡರು. ಮಾಯಾಂಕ್‌ ಗಳಿಕೆ ಅಜೇಯ 304 ರನ್‌. 494 ಎಸೆತಗಳ ಈ ರಂಜನೀಯ ಆಟದಲ್ಲಿ 28 ಬೌಂಡರಿ ಹಾಗೂ 4 ಸಿಕ್ಸರ್‌ ಒಳಗೊಂಡಿತ್ತು. ಇದು ರಣಜಿ ಇತಿಹಾಸದಲ್ಲಿ ಕರ್ನಾಟಕದಿಂದ ದಾಖಲಾದ 3ನೇ ತ್ರಿಶತಕ. ಉಳಿದಿಬ್ಬರು ಸಾಧಕರೆಂದರೆ ಕೆ.ಎಲ್‌. ರಾಹುಲ್‌ ಮತ್ತು ಕರುಣ್‌ ನಾಯರ್‌.

ಈ ಮ್ಯಾರಥಾನ್‌ ಇನ್ನಿಂಗ್ಸ್‌ ವೇಳೆ ಅಗರ್ವಾಲ್‌ಗೆ ಅಮೋಘ ಬೆಂಬಲ ನೀಡಿದ ಕರುಣ್‌ ನಾಯರ್‌ 116 ರನ್‌ ಬಾರಿಸಿದರು. 56ರಲ್ಲಿ ಅಜೇಯರಾಗಿದ್ದ ನಾಯರ್‌ 256 ಎಸೆತ ಎದುರಿಸಿ 13 ಬೌಂಡರಿ ಹೊಡೆದರು. ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 279 ರನ್‌ ಹರಿದು ಬಂತು. ಇದರೊಂದಿಗೆ ಅಗರ್ವಾಲ್‌ ಈ ಮ್ಯಾರಥಾನ್‌ ಇನ್ನಿಂಗ್ಸ್‌ ವೇಳೆ 2 ದ್ವಿಶತಕಗಳ ಜತೆಯಾಟದಲ್ಲಿ ಪಾಲ್ಗೊಂಡಂತಾಯಿತು. ಅವರು ಆರಂಭಿಕ ವಿಕೆಟಿಗೆ ಆರ್‌. ಸಮರ್ಥ್ ಜತೆಗೂಡಿ 259 ರನ್‌ ಒಟ್ಟುಗೂಡಿಸಿದ್ದರು. 

ಅಗರ್ವಾಲ್‌ ಅವರ ತ್ರಿಶತಕ ಪೂರ್ತಿಯಾ ದೊಡನೆ ಕರ್ನಾಟಕ ತನ್ನ ಇನ್ನಿಂಗನ್ನು ಡಿಕ್ಲೇರ್‌ ಮಾಡಿತು. ಕೆ. ಗೌತಮ್‌ (11) ಮತ್ತು ಪವನ್‌ ದೇಶಪಾಂಡೆ (2) ಔಟಾದ ಉಳಿದಿಬ್ಬರು ಆಟಗಾರರು.ಸಿ.ಎಂ. ಗೌತಮ್‌ ಒಂದು ರನ್‌ ಮಾಡಿ ಅಜೇಯರಾಗಿ ಉಳಿದರು. ದಾಳಿಗಿಳಿದ ಮಹಾರಾಷ್ಟ್ರದ ನಾಲ್ವರು ಸ್ಪೆಷಲಿಸ್ಟ್‌ ಬೌಲರ್‌ಗಳಿಂದ “ರನ್‌ ಶತಕ’ ಪೂರ್ತಿಗೊಂಡಿತು. ಕರ್ನಾಟಕ ಒಟ್ಟು 176 ಓವರ್‌ಗಳನ್ನು ಎದುರಿಸಿ ನಿಂತಿತು.

ಮಾರಕವಾದ ಮಿಥುನ್‌
ಮಹಾರಾಷ್ಟ್ರದ ದ್ವಿತೀಯ ಸರದಿಗೆ ಮಾರಕ ವಾಗಿ ಪರಿಣಮಿಸಿದವರು ಅನುಭವಿ ಅಭಿಮನ್ಯು ಮಿಥುನ್‌. ಅವರು ಆರಂಭಿಕರಾದ ಸ್ವಪ್ನಿಲ್‌ ಗುಗಲೆ (0) ಮತ್ತು ಹರ್ಷದ್‌ ಖಾಡೀವಾಲೆ (19) ವಿಕೆಟ್‌ಗಳನ್ನು ಅಗ್ಗಕ್ಕೆ ಉರುಳಿಸಿದರು. ನಾಯಕ ಅಂಕಿತ್‌ ಭವೆ° (17) ಮೋರೆಗೆ ಎಲ್‌ಬಿ ಆದರೆ, ನೌಶಾದ್‌ ಶೇಖ್‌ (3) ಬಿನ್ನಿ ಮೋಡಿಗೆ ಸಿಲುಕಿದರು. ಈ 4 ವಿಕೆಟ್‌ಗಳು 84 ರನ್‌ ಆಗುವಷ್ಟರಲ್ಲಿ ಬಿದ್ದವು. ಋತುರಾಜ್‌ ಗಾಯಕ್ವಾಡ್‌ (61) ಮತ್ತು ರಾಹುಲ್‌ ತ್ರಿಪಾಠಿ (33) ಮುರಿಯದ 5ನೇ ವಿಕೆಟಿಗೆ 51 ರನ್‌ ಪೇರಿಸಿ ಸದ್ಯ ಕುಸಿತಕ್ಕೆ ತಡೆಯಾಗಿ ನಿಂತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮಹಾರಾಷ್ಟ್ರ-245 ಮತ್ತು 4 ವಿಕೆಟಿಗೆ 135 (ಗಾಯಕ್ವಾಡ್‌ ಬ್ಯಾಟಿಂಗ್‌ 61, ತ್ರಿಪಾಠಿ ಬ್ಯಾಟಿಂಗ್‌ 33, ಮಿಥುನ್‌ 32ಕ್ಕೆ 2). ಕರ್ನಾಟಕ-5ಕ್ಕೆ 628 ಡಿಕ್ಲೇರ್‌ (ಅಗರ್ವಾಲ್‌ ಔಟಾಗದೆ 304, ನಾಯರ್‌ 116, ಸಮರ್ಥ್ 129, ಖುರಾನಾ 147ಕ್ಕೆ 3).

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ತ್ರಿಶತಕ !
ಮಾಯಾಂಕ್‌ ಅಗರ್ವಾಲ್‌ ಸಾಧನೆಯೊಂದಿಗೆ ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ತ್ರಿಶತಕಗಳು ಪೂರ್ತಿಗೊಂಡವು. ಇದು ರಣಜಿ ಕ್ರಿಕೆಟಿನ 43ನೇ ತ್ರಿಬಲ್‌ ಸೆಂಚುರಿ.

ಅಗರ್ವಾಲ್‌ ಪ್ರಸಕ್ತ ರಣಜಿ ಟ್ರೋಫಿ ಋತುವಿನಲ್ಲಿ ತ್ರಿಶತಕ ಬಾರಿಸಿದ 3ನೇ ಬ್ಯಾಟ್ಸ್‌ ಮನ್‌. ಪಂಜಾಬ್‌ ವಿರುದ್ಧ ಧರ್ಮಶಾಲಾದಲ್ಲಿ ಹಿಮಾಚಲ ಪ್ರದೇಶದ ಪ್ರಶಾಂತ್‌ ಚೋಪ್ರಾ 338 ರನ್‌, ಒಡಿಶಾ ವಿರುದ್ಧ ವಿಜಯನಗರಂನಲ್ಲಿ ಆಂಧ್ರಪ್ರದೇಶದ ಹನುಮ ವಿಹಾರಿ ಅಜೇಯ 302 ರನ್‌ ಬಾರಿಸಿದ್ದರು.

ರಣಜಿಯ 43 ತ್ರಿಶತಕಗಳಲ್ಲಿ ಮಹಾರಾಷ್ಟ್ರದ ಬಿ.ಬಿ. ನಿಂಬಾಲ್ಕರ್‌ ಅವರ ಅಜೇಯ 443 ರನ್‌ ಕೂಡ ಸೇರಿದೆ. ಇದು ರಣಜಿ ಇತಿಹಾಸದ ಏಕೈಕ “400 ಪ್ಲಸ್‌’ ಸ್ಕೋರ್‌. 

ಅಗರ್ವಾಲ್‌ ರಣಜಿಯಲ್ಲಿ ತ್ರಿಶತಕ ಹೊಡೆದ ಕರ್ನಾಟಕದ 3ನೇ ಆಟಗಾರ. 2015ರಲ್ಲಿ ಕೆ.ಎಲ್‌. ರಾಹುಲ್‌ ಉತ್ತರಪ್ರದೇಶ ವಿರುದ್ಧ “ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ 337 ರನ್‌, ಅದೇ ವರ್ಷ ಮುಂಬಯಿಯಲ್ಲಿ ನಡೆದ ತಮಿಳುನಾಡು ಎದುರಿನ ರಣಜಿ ಫೈನಲ್‌ನಲ್ಲಿ ಕರುಣ್‌ ನಾಯರ್‌ 328 ರನ್‌ ಬಾರಿಸಿದ್ದರು.

ಅಗರ್ವಾಲ್‌ ರಣಜಿಯಲ್ಲಿ ತ್ರಿಶತಕ ಹೊಡೆದ 38ನೇ ಆಟಗಾರ. ರವೀಂದ್ರ ಜಡೇಜ ಸರ್ವಾಧಿಕ 3 ತ್ರಿಶತಕ ಹೊಡೆದದ್ದು ದಾಖಲೆ. ಉಳಿದಂತೆ ವಿವಿಎಸ್‌ ಲಕ್ಷ್ಮಣ್‌, ಚೇತೇಶ್ವರ್‌ ಪೂಜಾರ ಮತ್ತು ವಾಸಿಮ್‌ ಜಾಫ‌ರ್‌ ತಲಾ 2 ತ್ರಿಶತಕ ಬಾರಿಸಿದ್ದಾರೆ.

ಅಗರ್ವಾಲ್‌ ಪರಾಕ್ರಮದೊಂದಿಗೆ ರಣಜಿ ಇತಿಹಾಸದಲ್ಲಿ ಮಹಾರಾಷ್ಟ್ರ ವಿರುದ್ಧ ಸರ್ವಾಧಿಕ 5 ತ್ರಿಶತಕ ದಾಖಲಾಯಿತು. ಒಡಿಶಾಗೆ ದ್ವಿತೀಯ ಸ್ಥಾನ (4). ಗೋವಾ, ಜಮ್ಮು-ಕಾಶ್ಮೀರ ಜಂಟಿ 3ನೇ ಸ್ಥಾನದಲ್ಲಿವೆ (ತಲಾ 3).

ತಮಿಳುನಾಡಿನ ಡಬ್ಲ್ಯು.ವಿ. ರಾಮನ್‌ (313) ಮತ್ತು ಅರ್ಜುನ್‌ ಕೃಪಾಲ್‌ ಸಿಂಗ್‌ (ಅಜೇಯ 302) ಒಂದೇ ಇನ್ನಿಂಗ್ಸ್‌ನಲ್ಲಿ ತ್ರಿಶತಕ ಹೊಡೆದ ಹೆಗ್ಗಳಿಕೆ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯಾಗಿರುವುದು ಗೋವಾ ವಿರುದ್ಧ ಪಣಜಿಯಲ್ಲಿ ನಡೆದ 1989ರ ಲೀಗ್‌ ಪಂದ್ಯ.

ಈವರೆಗೆ ಮುಂಬಯಿ ತಂಡದಿಂದ ಸರ್ವಾಧಿಕ 7 ತ್ರಿಶತಕ ದಾಖಲಾಗಿದೆ. “ವಾಂಖೇಡೆ ಸ್ಟೇಡಿಯಂ’ನಲ್ಲಿ ಅತೀ ಹೆಚ್ಚು 5 ತ್ರಿಶತಕಗಳು ಸಿಡಿದಿವೆ.

ಕರ್ನಾಟಕ ವಿರುದ್ಧ ಇಬ್ಬರು ತ್ರಿಶತಕ ಬಾರಿಸಿದ್ದಾರೆ. 2000ದ ಬೆಂಗಳೂರು ಪಂದ್ಯದಲ್ಲಿ ಹೈದರಾಬಾದ್‌ನ ವಿವಿಎಸ್‌ ಲಕ್ಷ್ಮಣ್‌ 353 ರನ್‌, 2013ರ ರಾಜಕೋಟ್‌ ಪಂದ್ಯದಲ್ಲಿ ಸೌರಾಷ್ಟ್ರದ ಚೇತೇಶ್ವರ್‌ ಪೂಜಾರ 352 ರನ್‌ ಹೊಡೆದಿದ್ದರು.

ಟಾಪ್ ನ್ಯೂಸ್

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.