ಪಾಕ್ ಹಾಕಿ ದಿಗ್ಗಜನಿಗೆ ಚೆನ್ನೈ ಹಾಕಿ ಅಸೋಸಿಯೇಶನ್ ನೆರವು
Team Udayavani, Apr 26, 2018, 6:00 AM IST
ಚೆನ್ನೈ: ಭಾರತದಲ್ಲಿ ಹೃದಯದ ಕಸಿ ಮಾಡಲು ನಿರ್ಧರಿಸಿದ ಪಾಕಿಸ್ಥಾನ ಹಾಕಿ ತಂಡದ ಮಾಜಿ ನಾಯಕ ಮನ್ಸೂರ್ ಅಹ್ಮದ್ ಅವರಿಗೆ ಚೆನ್ನೈ ಹಾಕಿ ಅಸೋಸಿಯೇಶನ್ ನೆರವು ನೀಡಲು ಮುಂದೆ ಬಂದಿದೆ. ಅಹ್ಮದ್ ಅವರ ವೈದ್ಯರ ಜತೆ ಈಗಾಗಲೇ ಚೆನ್ನೈಯ ಪ್ರಮುಖ ವೈದ್ಯರು ಮಾತುಕತೆ ನಡೆಸಿದ್ದಾರೆ.
ಅಹ್ಮದ್ ಅವರ ವೈದ್ಯಕೀಯ ದಾಖಲೆ ಪತ್ರಗಳನ್ನು ಅವರ ವೈದ್ಯರು ನಮಗೆ ಕಳುಹಿಸಿದ್ದು ನೆರವು ನೀಡು ವಂತೆ ಕೇಳಿಕೊಂಡಿದ್ದಾರೆ. ನಾವು ಈ ಬಗ್ಗೆ ಗಮನ ಹರಿಸಲಿದ್ದೇವೆ ಎಂದು ಚೆನ್ನೈಯ ಹಿರಿಯ ಹೃದಯ ಕಸಿ ಸರ್ಜನ್ ಡಾ| ಕೆಆರ್ ಬಾಲಕೃಷ್ಣನ್ ಹೇಳಿದ್ದಾರೆ.
1990ರ ದಶಕದಲ್ಲಿ ಅಹ್ಮದ್ ಪಾಕಿಸ್ಥಾನ ಹಾಕಿ ತಂಡದ ನಾಯಕರಾಗಿದ್ದರು ಮತ್ತು 1994ರಲ್ಲಿ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ 10 ವರ್ಷಗಳಿಂದ ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಹೃದಯ ಕಸಿ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.