ಹೊಸದಿಲ್ಲಿ ಟಿ20 ಪಂದ್ಯಕ್ಕೆ ವಾಯು ಮಾಲಿನ್ಯ ಭೀತಿ
Team Udayavani, Oct 27, 2019, 5:30 AM IST
ಹೊಸದಿಲ್ಲಿ: ತೀವ್ರ ವಾಯುಮಾಲಿನ್ಯಕ್ಕೆ ಹೆಸರುವಾಸಿಯಾಗಿರುವ ಹೊಸದಿಲ್ಲಿಯಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಟಿ20 ಪಂದ್ಯ ಆಯೋಜನೆಗೆ ಈಗ ಆಕ್ಷೇಪ ವ್ಯಕ್ತವಾಗಿದೆ. ಈ ಪಂದ್ಯ ದೀಪಾವಳಿ ಬಳಿಕ ನ. 3ರಂದು ನಡೆಯಲಿದೆ.
ಈಗಲೇ ದಿಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಶೋಚನೀಯ. ಇನ್ನು ದೀಪಾವಳಿ ಪಟಾಕಿಗಳನ್ನೆಲ್ಲ ಹೊಡೆದ ಅನಂತರ ಹೇಗಿರಬಹುದು ಎನ್ನುವುದು ಆತಂಕಕ್ಕೆ ಕಾರಣ. 2017ರಲ್ಲಿ ಶ್ರೀಲಂಕಾ ಕ್ರಿಕೆಟಿಗರು ದಿಲ್ಲಿ ವಾಯುಮಾಲಿನ್ಯಕ್ಕೆ ಹೊಂದಿಕೊಳ್ಳಲಾಗದೆ ಅಸ್ವಸ್ಥರಾಗಿದ್ದರು. ಕೆಲವರು ಮೈದಾನದಲ್ಲೇ ವಾಂತಿ ಮಾಡಿಕೊಂಡಿದ್ದರು. ಮಾಸ್ಕ್ ಧರಿಸಿ ಆಡಿದ ದೃಶ್ಯವೂ ಕಂಡುಬಂದಿತ್ತು. ಆ ಕಹಿ ನೆನಪು ಇನ್ನೂ ಮಾಸಿಲ್ಲ. ಹೀಗಿರುವಾಗ ಬಾಂಗ್ಲಾ ವಿರುದ್ಧ ಹೊಸದಿಲ್ಲಿಯಲ್ಲೇ ಪಂದ್ಯ ಆಯೋಜಿಸಿರುವ ಬಿಸಿಸಿಐ ಕ್ರಮ ಪ್ರಶ್ನಾರ್ಹ ಎಂದು ತರ್ಕಿಸಲಾಗುತ್ತಿದೆ.
ಹೇಗಿದೆ ದಿಲ್ಲಿ ಪರಿಸ್ಥಿತಿ?
ಏರ್ ಕ್ವಾಲಿಟಿ ಇಂಡೆಕ್ಸ್ ಸಂಸ್ಥೆಯ ಶ್ರೇಯಾಂಕದ ದಿಲ್ಲಿ ವಾಯುಮಾಲಿನ್ಯ ಮಟ್ಟ 357ರಲ್ಲಿದೆ. ಅಂದರೆ ಅತ್ಯಂತ ಕಳಪೆ ಪರಿಸ್ಥಿತಿ. ದೀಪಾವಳಿ ಅನಂತರ ಮಾಲಿನ್ಯ ಇನ್ನೂ ಹೆಚ್ಚಲಿದೆ. ಇದನ್ನು ಅಂದಾಜಿಸದೆ ಬಿಸಿಸಿಐ ಪಂದ್ಯ ನಿಗದಿಪಡಿಸಿತೇ ಎನ್ನುವುದು ಈಗ ಕೇಳಲಾಗುತ್ತಿರುವ ಪ್ರಶ್ನೆ.
ಪಂದ್ಯ ನಡೆಯುವಾಗ ದೀಪಾವಳಿ ಮುಗಿದು ಒಂದು ವಾರವಾಗಿರುತ್ತದೆ. ಅಷ್ಟರಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದಿರುತ್ತದೆ ಎನ್ನುವುದು ಬಿಸಿಸಿಐ ಆಶಾವಾದ. ದಿಲ್ಲಿ ಸಮೀಪದ ಹರ್ಯಾಣ-ಪಂಜಾಬ್‌ನ ರೈತರಿಗೆ ಭತ್ತದ ಹುಲ್ಲನ್ನು ಕೆಲವು ದಿನಗಳ ಮಟ್ಟಿಗೆ ಸುಡಲೇಬಾರದು ಎಂದು ಕೇಂದ್ರ ಸರಕಾರ ತಾಕೀತು ಮಾಡಿರುವುದೂ ಕೂಡ ತಮ್ಮ ನೆರವಿಗೆ ಬರಬಹುದೆಂದು ಬಿಸಿಸಿಐ ಭಾವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.