Ajinkya Rahane: ಲೀಸೆಸ್ಟರ್ ಶೈರ್ ಪರ ಕೌಂಟಿ ಆಡಲಿದ್ದಾರೆ ರಹಾನೆ
Team Udayavani, Jun 27, 2024, 9:44 PM IST
ಲೀಸೆಸ್ಟೆರ್ಶೈರ್: ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಅವರು ಇಂಗ್ಲಿಷ್ ಕೌಂಟಿ ಲೀಸೆಸ್ಟರ್ಶೈರ್ ಪರ ಆಡಲು ಸಿದ್ಧವಾಗಿದ್ದಾರೆ. ಈ ಋತುವಿನ ಎರಡನೇ ಭಾಗದಲ್ಲಿ ಅವರು ಕೌಂಟಿ ಪರ ಆಡಲಿದ್ದಾರೆ ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಒಪ್ಪಂದದ ಪ್ರಕಾರ ರಹಾನೆ ಅವರು ಸದ್ಯ ಸಾಗುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ ಕೊನೆಯ ಐದು ಪಂದ್ಯಗಳಲ್ಲಿ ಆಡಲಿದ್ದಾರೆ. ಇದಲ್ಲದೇ ಒನ್ಡೇ ಕಪ್ನಲ್ಲೂ ರಹಾನೆ ಆಡಲಿದ್ದಾರೆ.
36ರ ಹರೆಯದ ರಹಾನೆ ಅವರ ವಿಯಾನ್ ಮುಲ್ಡರ್ ಅವರ ಜಾಗಕ್ಕೆ ಲೀಸೆಸ್ಟರ್ಶೈರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಲ್ಡರ್ ಅವರು ಮುಂದಿನ ಆಗಸ್ಟ್ ವೇಳೆ ದಕ್ಷಿಣ ಆಫ್ರಿಕಾ ತಂಡದ ಪರ ವೆಸ್ಟ್ಇಂಡೀಸ್ಗೆ ಪ್ರಯಾಣಿಸಲಿದ್ದಾರೆ. ರಹಾನೆ ಅವರು ಎಲ್ಲ ಮಾದರಿಯ ಕ್ರಿಕೆಟ್ (ಪ್ರಥಮ ದರ್ಜೆ, ಲಿಸ್ಟ್-ಎ ಮತ್ತು ಟಿ20) ನಲ್ಲಿ ಒಟ್ಟಾರೆ 26 ಸಾವಿರ ರನ್ ಪೇರಿಸಿದ್ದಾರೆ. ಅಜೇಯ 265 ಬಾರಿಸಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. ಈ ಬಾಳ್ವೆ ವೇಳೆ ಅವರು 51 ಶತಕ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್ನಲ್ಲಿ ಆಡಿರುವ ಅವರು 15 ಶತಕ ಸಹಿತ 8 ಸಾವಿರಕ್ಕೂ ಹೆಚ್ಚಿನ ರನ್ ಪೇರಿಸಿದ್ದಾರೆ. 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ 188 ರನ್ ಪೇರಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
World Cup ಅಂತೂ ದ್ರಾವಿಡ್ಗೆ ಸಿಕ್ತು: ಆಟಗಾರನಾಗಿ, ನಾಯಕನಾಗಿ ವಿಫಲ, ಕೋಚ್ ಆಗಿ ವಿಜಯ
Superbet Classic Chess: ಗುಕೇಶ್ ವಿರುದ್ಧ ಡ್ರಾ ಸಾಧಿಸಿದ ಪ್ರಜ್ಞಾನಂದ
MUST WATCH
ಹೊಸ ಸೇರ್ಪಡೆ
Bengaluru: ಫ್ಲೈಓವರ್ನಲ್ಲಿ ಹಿಮ್ಮುಖವಾಗಿ ಕಾರು ಓಡಿಸಿದ ಚಾಲಕನ ಸೆರೆ
Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.