ಅಂತಿಮ ಟೆಸ್ಟ್‌ಗೆ ರಹಾನೆ, ಯಾದವ್?
Team Udayavani, Jan 23, 2018, 7:05 AM IST
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2 ಪಂದ್ಯ ಸೋತು ಸರಣಿ ಕಳೆದುಕೊಂಡಿರುವ ಭಾರತ ತಂಡ ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳುವ ತುಡಿತದಲ್ಲಿದೆ. ಹೀಗಾಗಿ ತಂಡದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಅಜಿಂಕ್ಯ ರಹಾನೆ, ಆಲ್‌ರೌಂಡರ್ ರವೀಂದ್ರ ಜಡೇಜ ಹಾಗೂ ವೇಗಿ ಉಮೇಶ್ ಯಾದವ್ ಕೊನೆಯ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂವರೂ ಮೊದಲೆರಡು ಟೆಸ್ಟ್‌ಗಳಲ್ಲಿ ಆಡಿರಲಿಲ್ಲ. ಅಂತಿಮ ಟೆಸ್ಟ್ ಭಾರತದ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದು, ನಾಯಕ ಕೊಹ್ಲಿ ಹಾಗೂ ಕೋಚ್ ರವಿಶಾಸಿŒ ಈ ಮೂವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಲು ಚಿಂತಿಸಿದ್ದಾರೆ ಎನ್ನಲಾಗಿದೆ.
ಸೋಮವಾರ ಜಡೇಜ ಹಾಗೂ ಯಾದವ್ ನೆಟ್‌ನಲ್ಲಿ ಸುದೀರ್ಘ ಅಭ್ಯಾಸ ನಡೆಸಿರುವುದು ಇದಕ್ಕೆ ಪುಷ್ಟಿ ಕೊಡುತ್ತದೆ.
ಈ ನಡುವೆ ಕೀಪರ್ ದಿನೇಶ್ ಕಾರ್ತಿಕ್ ಹೆಸರು ಕೂಡ ಹರಿದಾಡುತ್ತಿದೆ. ಹೀಗಾಗಿ ಬುಧವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಭಾರತ 4 ಬದಲಾವಣೆ ಮಾಡಿಕೊಂಡರೂ ಅಚ್ಚರಿನ ಇಲ್ಲ.
ರಿಲ್ಯಾಕ್ಸ್ ಮೂಡ್‌ನಲ್ಲಿ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲುಂಡಿರುವ ಕೊಹ್ಲಿ ಪಡೆ ವಾಂಡರರ್ನಲ್ಲಿ ಗೆದ್ದು ಮಾನ ಉಳಿಸಿಕೊಳ್ಳಬೇಕಿದೆ. ಸರಣಿ ಸೋಲಿಗೆ ಎಲ್ಲಡೆಯಿಂದ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಕೊಹ್ಲಿ ಮಾತ್ರ ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಸೋಮವಾರ ನೆಟ್ಸ್‌ನಲ್ಲಿ ನಿರಾಳವಾಗಿ ತಮ್ಮ ತಂಡದೊಂದಿಗೆ ಅಭ್ಯಾಸ ನಡೆಸಿದರು. ಈ ವೇಳೆ ಆಟಗಾರರು ಪರಸ್ಪರ ತಮಾಷೆ ಮಾಡಿಕೊಂಡು ಅಭ್ಯಾಸವನ್ನು ಆನಂದಿಸಿದರು. ಬೌಲಿಂಗ್ ಕೋಚ್ ಸಂಜಯ್ ಬಂಗಾರ್ ನೆಟ್ ಬೌಲರ್ ಆಗಿ ಕಾಣಿಸಿಕೊಂಡರು. ರೋಹಿತ್ ಶರ್ಮ ನಗುತ್ತಲೇ ಬಂಗಾರ್ ಬೌಲಿಂಗನ್ನು ಸ್ವಾಗತಿಸಿದರು. ಕೊಹ್ಲಿ, ಪಾರ್ಥಿವ್, ಧವನ್ ಹಾಗೂ ಜಡೇಜ ಈ ವೇಳೆ ಅಭ್ಯಾಸ ನಡೆಸುತ್ತಿದ್ದರು.
ಪಿಚ್ ಬಗ್ಗೆ ಮತ್ತೆ ಅಸಮಾಧಾನ
ಭಾರತ ಕ್ರಿಕೆಟಿಗರು ಟೆಸ್ಟ್ ಆರಂಭದಲ್ಲೇ ಆಫ್ರಿಕಾ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ 3ನೇ ಟೆಸ್ಟ್ ಆರಂಭಕ್ಕೂ ಮೊದಲು ಭಾರತೀಯರು ಮತ್ತೂಮ್ಮೆ ಪಿಚ್ ಬಗ್ಗೆ ಅತೃಪ್ತರಾಗಿದ್ದಾರೆ. ಸೋಮವಾರ ಭಾರತ ಬಹುತೇಕ ಆಟಗಾರರು ಅಭ್ಯಾಸದ ಅವಧಿಯಲ್ಲಿ ಫುಟ್‌ಬಾಲ್ ಆಡಿದರು. ಆದರೆ ಶಮಿ, ಭುವನೇಶ್ವರ್, ಇಶಾಂತ್ ಹಾಗೂ ಉಮೇಶ್ ಯಾದವ್ ನೆಟ್‌ನಲ್ಲಿ ಬೌಲಿಂಗ್ ನಡೆಸಿದರು.
ಈ ವೇಳೆ ಅಸಮರ್ಪಕ ಪಿಚ್ ಬಗ್ಗೆ ಬೌಲಿಂಗ್ ಕೋಚ್ ಸಂಜಯ್ ಬಂಗಾರ್ ಕೋಚ್ ರವಿ ಶಾಸಿŒ ಗಮನಕ್ಕೆ ತಂದಿದ್ದಾರೆ. ಕೂಡಲೇ ಶಾಸಿŒ ಮುಖ್ಯ ಕ್ಯುರೇಟರ್ ಅವರನ್ನು ಕರೆದು ಮತ್ತೂಮ್ಮೆ ರೋಲಿಂಗ್ ಮಾಡಲು ಹೇಳಿದ್ದಾರೆ. ಹೀಗೆ ರೋಲಿಂಗ್ ಮಾಡುತ್ತಲೇ ಭಾರತದ ಬೌಲರ್‌ಗಳ ನೆಟ್ ಅಭ್ಯಾಸ ನಡೆಯಿತು. ಇದು ಅಸಮಾಧಾನಕ್ಕೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.