ಫಿಕ್ಸಿಂಗ್: ಇಬ್ಬರು ಶ್ರೀಲಂಕಾ ಕ್ರಿಕೆಟಿಗರ ಅಮಾನತು
Team Udayavani, May 29, 2018, 6:00 AM IST
ಕೊಲಂಬೊ: ದುಬಾೖ ಮೂಲದ ಅಲ್ಜಜೀರಾ ವಾಹಿನಿ ಬಹಿ ರಂಗಪಡಿಸಿದ ಪಿಚ್ ಫಿಕ್ಸಿಂಗ್ ಹಗರಣಕ್ಕೆ 2 ತಲೆದಂಡವಾಗಿದೆ. ಅಂಕಣವನ್ನು ಬದಲಿಸಲು ಒಪ್ಪಿಕೊಂಡ ಕ್ಯುರೇಟರ್ ತರಂಗ ಇಂಡಿಕ ಮತ್ತು ಕ್ರಿಕೆಟಿಗ ತರಿಂಡು ಮೆಂಡಿಸ್ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ. ಈ ಇಬ್ಬರು ಅಲ್ಜಜೀರಾ ವಾಹಿನಿಯ ವೀಡಿಯೋದಲ್ಲಿ ಅಂಕಣ ಬದಲಿಸಲು ಒಪ್ಪಿಕೊಂಡಿರುವುದು ವರದಿಯಾಗಿತ್ತು.
ಅಂಕಣವನ್ನು ಹೇಗೆಲ್ಲ ಬದಲಿಸ ಬಹುದು ಎಂದು ತರಂಗ ಇಂಡಿಕ ಮಾಹಿತಿ ನೀಡಿದ್ದರು. ಅಂಕಣ ವನ್ನು ಕೊನೆಯ ಹಂತದಲ್ಲೂ ಬದಲಿಸ ಬಹುದು, ಪಂದ್ಯ ನಡೆಯು ತ್ತಿರುವಾಗ ವಿರಾಮದ ಅವಧಿಯಲ್ಲಿ ಅಂಕಣವನ್ನು ಶುದ್ಧೀಕರಿಸುವ ಬ್ರಶ್ ಮೂಲಕ ತುಸು ಒತ್ತಡ ಜಾಸ್ತಿ ಹಾಕಿದರೆ ಅಂಕಣ ವಿರೂಪಗೊಳ್ಳುತ್ತದೆ ಎಂದೂ ತರಂಗ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.