ಜ್ವೆರೇವ್ ವಿರುದ್ಧ ಸೆಣಸುವ ಅಲೆಕ್ಸ್ ಡಿ ಮಿನೌರ್
Team Udayavani, Aug 6, 2018, 6:20 AM IST
ವಾಷಿಂಗ್ಟನ್: ಆಸ್ಟ್ರೇಲಿಯದ 19ರ ಹರೆಯದ ಯುವ ಟೆನಿಸಿಗ ಅಲೆಕ್ಸ್ ಡಿ ಮಿನೌರ್ ವಾಷಿಂಗ್ಟನ್ ಓಪನ್ ಪಂದ್ಯಾವಳಿಯ ಫೈನಲ್ ತಲುಪಿದ್ದಾರೆ. ಇಲ್ಲಿ ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ ಸೆಣಸಲಿದ್ದಾರೆ.
ಸೆಮಿಫೈನಲ್ನಲ್ಲಿ ರಶ್ಯದ ಮತ್ತೋರ್ವ ಯುವ ಆಟಗಾರ ಆಂದ್ರೆಯ್ ರುಬ್ಲೆವ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಮಿನೌರ್ 5-7, 7-6 (8-6), 6-4 ಅಂತರದ ಜಯ ಸಾಧಿಸಿದರು. 2 ಗಂಟೆ, 52 ನಿಮಿಷಗಳ ಕಾಲ ಇವರ ಸ್ಪರ್ಧೆ ಸಾಗಿತು. ಇನ್ನೊಂದು ಉಪಾಂತ್ಯದಲ್ಲಿ ಜ್ವೆರೇವ್ 6-2, 6-4ರಿಂದ ಗ್ರೀಕ್ನ ಸ್ಟೆಫನಸ್ ಸಿಸಿಪಾಸ್ ಅವರನ್ನು ಮಣಿಸಿದರು.
ಇದು 2007ರ ಬಳಿಕ ಕಿರಿಯರಿಬ್ಬರ ನಡುವಿನ ಎಟಿಪಿ ಫೈನಲ್ ದಾಖಲೆಯಾಗಿದೆ. ಜ್ವೆರೇವ್ (21) ಹಾಗೂ ಮಿನೌರ್ (19) ಅವರ ಒಟ್ಟು ವಯಸ್ಸು 40 ವರ್ಷಗಳಾಗಿದ್ದು, 2007ರ ಇಂಡಿಯಾನ ವೆಲ್ಸ್ ಫೈನಲ್ನಲ್ಲಿ ಸೆಣಸಿದ ರಫೆಲ್ ನಡಾಲ್ (20) ಮತ್ತು ನೊವಾಕ್ ಜೊಕೋವಿಕ್ (19) ಅವರ ಒಟ್ಟು ವಯಸ್ಸು ಕೂಡ ಇಷ್ಟೇ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.