All England Badminton: ಚಿರಾಗ್-ಸಾತ್ವಿಕ್ ನಿರ್ಗಮನ
Team Udayavani, Mar 16, 2024, 12:14 AM IST
ಬರ್ಮಿಂಗ್ಹ್ಯಾಮ್: ಇತ್ತೀಚಿನ ಟೂರ್ನಿಗಳಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿ ಸುತ್ತ ಬಂದಿದ್ದ ವಿಶ್ವದ ನಂ. 1ಜೋಡಿ ಚಿರಾಗ್ ಶೆಟ್ಟಿ- ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಜೋಡಿ “ಆಲ್ ಇಂಗ್ಲೆಂಡ್ ಬ್ಯಾಡ್ಮಿಂ ಟನ್’ ಪಂದ್ಯಾವಳಿಯಿಂದ ಬಹಳ ಬೇಗ ನಿರ್ಗಮಿಸಿದೆ. ಪುರುಷರ ಡಬಲ್ಸ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಇಂಡೋ ನೇಷ್ಯಾದ ಮೊಹಮ್ಮದ್ ಶೋಯಿಬುಲ್ ಫಿಕ್ರಿ-ಬಗಾಸ್ ಮೌಲಾನಾ ಸೇರಿಕೊಂಡು ಭಾರತೀಯ ಜೋಡಿಯನ್ನು 21-16, 21-15 ಅಂತರದಿಂದ ಹಿಮ್ಮೆಟ್ಟಿಸಿದರು.
2022ರ ಚಾಂಪಿಯನ್ ಆಗಿರುವ ಚಿರಾಗ್-ಸಾತ್ವಿಕ್ ಕೆಲವು ದಿನಗಳ ಹಿಂದಷ್ಟೇ ಫ್ರೆಂಚ್ ಓಪನ್ ಕಿರೀಟ ಏರಿಸಿಕೊಂಡ ಖುಷಿಯಲ್ಲಿದ್ದರು. ಆದರೆ ಈ ಪ್ರತಿಷ್ಠಿತ ಕೂಟದಲ್ಲಿ ಇವರ ಆಟ ಸಾಗಲಿಲ್ಲ.
ವನಿತಾ ವಿಭಾಗದಲ್ಲೂ ಭಾರತಕ್ಕೆ ನಿರಾಸೆ ಎದುರಾಗಿದೆ. ಅಶ್ವಿನಿ ಪೊನಪ್ಪ- ತನಿಶಾ ಕ್ರಾಸ್ಟೊ ಕೂಡ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೋಲನುಭವಿಸಿದ್ದಾರೆ. ಇವರನ್ನು ಚೀನದ ಜಾಂಗ್ ಶು ಕ್ಸಿಯಾನ್-ಜೆಂಗ್ ಯು ಜೋಡಿ 11-21, 21-11, 21-11 ಅಂತರದಿಂದ ಹಿಮ್ಮೆಟ್ಟಿಸಿತು.
ಇದಕ್ಕೂ ಮುನ್ನ ಪಿ.ವಿ. ಸಿಂಧು ಪರಾಭವಗೊಂಡಿದ್ದರು. ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಲಕ್ಷ್ಯ ಸೇನ್ ಭರವಸೆ ಯಾಗಿ ಉಳಿದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.